ಅಣ್ಣಾಮಲೈ ರಾಜಕೀಯಕ್ಕಾಗಿ ಉಪವಾಸ ಮಾಡ್ತಿದ್ದಾರೆ, ಬೇಡ ಅಂತಿರೋದ್ಯಾರು? -ಪ್ರತಾಪ್​ ಸಿಂಹ

ಅಣ್ಣಾಮಲೈ ರಾಜಕೀಯಕ್ಕಾಗಿ ಉಪವಾಸ ಮಾಡ್ತಿದ್ದಾರೆ, ಬೇಡ ಅಂತಿರೋದ್ಯಾರು? -ಪ್ರತಾಪ್​ ಸಿಂಹ

ಮೈಸೂರು: ರಾಜ್ಯ ಸರ್ಕಾರದ ಮೇಕೆದಾಟು ಯೋಜನೆಯನ್ನು ವಿರೋಧಿಸಿ ಆ.5ಕ್ಕೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದಿದ್ದಾರೆ. ಈ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹ ಅವರು, ಅಣ್ಣಾಮಲೈ ಅಲ್ಲಿನ ರಾಜಕೀಯಕ್ಕಾಗಿ ಅವರು ಉಪವಾಸ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್​ ಸಿಂಹ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಡಿಪಿಆರ್​​ ಸಿದ್ಧಪಡಿಸಿ ವರದಿ ಸಲ್ಲಿಕೆ ಮಾಡಲು ಹೇಳಿದೆ. ತಮಿಳುನಾಡಿನಲ್ಲಿ ಅಣ್ಣಾಮಲೈ ಅಲ್ಲಿನ ರಾಜಕೀಯಕ್ಕಾಗಿ ಅವರು ಉಪವಾಸ ಮಾಡುತ್ತಿದ್ದಾರೆ. ಅದನ್ನು ನಾವು ಬೇಡ ಅಂತಾ ಹೇಳಲು ಆಗೋದಿಲ್ಲ. ಆದರೆ ಈ ಬಗ್ಗೆ ನಮ್ಮಲ್ಲಿ ಹೆಚ್ಚು ಚರ್ಚೆ ಬೇಡ. ನಮ್ಮ ರಾಜಕಾರಣಿಗಳು ಹೇಳಿಕೆ ಕೊಡುವುದನ್ನ ಬಿಟ್ಟು ಡಿಪಿಆರ್ ಸಿದ್ಧಪಡಿಸುವತ್ತ ಒತ್ತು ನೀಡಬೇಕು ಎಂದು ರಾಜ್ಯ ರಾಜಕಾರಣಿಗಳಿಗೆ ಸಲಹೆ ನೀಡಿದರು.

blank

ಇದನ್ನೂ ಓದಿ: ಮೇಕೆದಾಟು ಯೋಜನೆ ತಡೆಯಲು ಅಣ್ಣಾಮಲೈ ಪಣ -ಆ.5ಕ್ಕೆ ಉಪವಾಸ ಸತ್ಯಾಗ್ರಹ

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮೇಕೆದಾಟು ಯೋಜನೆಯನ್ನು ರಾಜ್ಯ ಸರ್ಕಾರ ಮಾಡಿಯೇ ತಿರುತ್ತದೆ ಎಂದು ಸ್ಪಷ್ಟಪಡಿಸಿದ್ದರು. ಈ ಹೇಳಿಕೆ ಬೆನ್ನಲ್ಲೇ ಯೋಜನೆಯನ್ನು ನಾವು ವಿರೋಧಿಸುತ್ತೇವೆ. ನಾವು ಸರ್ಕಾರದ ನಿಲುವಿಗೆ ಬದ್ಧರಾಗಿರುತ್ತೇವೆ. ಆದ್ದರಿಂದ ಯೋಜನೆ ವಿರೋಧಿಸಿ ಆಗಸ್ಟ್​ 5ರಂದು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದರು.

ಇದನ್ನೂ ಓದಿ: ‘ಉಪವಾಸನಾದ್ರೂ ಕೂರಲಿ.. ಊಟನಾದ್ರೂ ಮಾಡಲಿ..’ – ಅಣ್ಣಾಮಲೈಗೆ ಸಿಎಂ ಟಾಂಗ್

ಇದನ್ನೂ ಓದಿ: ಮೇಕೆದಾಟು ಯೋಜನೆ ತಡೆಯಲು ಅಣ್ಣಾಮಲೈ ಉಪವಾಸ; ಹೆಚ್.​ಡಿ. ಕುಮಾರಸ್ವಾಮಿ ಹೇಳಿದ್ದೇನು?

Source: newsfirstlive.com Source link