ಮೀನು, ಮಟನ್‍ಗಿಂತ ಜಾಸ್ತಿ ಗೋಮಾಂಸವನ್ನೇ ತಿನ್ನಿ: ಬಿಜೆಪಿ ಸಚಿವ ಶುಲ್ಲೈ

ಶಿಲ್ಲಾಂಗ್: ಮೀನು, ಚಿಕನ್, ಮಟನ್‍ಗಳಿಗಿಂತ ಜಾಸ್ತಿ ಗೋಮಾಂಸವನ್ನು ತಿನ್ನಿ ಎಂದು ರಾಜ್ಯದ ಜನರಿಗೆ ಮೇಘಾಲಯದ ಬಿಜೆಪಿ ಸಚಿವ ಸ್ಯಾನ್ಬೋರ್ ಶುಲ್ಲೈ ಸಿಕ್ಕಾಪಟೆ ಟೀಕೆಗೆ ಗುರಿಯಾಗಿದ್ದಾರೆ.

ಕಳೆದವಾರವಷ್ಟೇ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವ ಶುಲ್ಲೈ, ಇದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಅವರಿಗೆ ಬೇಕಾದ್ದನ್ನು ತಿನ್ನಲ್ಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ. ನಾನಂತೂ ಜನರಿಗೆ ಚಿಕನ್, ಮಟನ್, ಮೀನಿಗಿಂತಲೂ ಜಾಸ್ತಿ ಗೋಮಾಂಸ ತಿನ್ನಿ ಎಂದೇ ಪ್ರೋತ್ಸಾಹಿಸುತ್ತೇನೆ. ಬಿಜೆಪಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುತ್ತದೆಂಬ ಗ್ರಹಿಕೆ ತುಂಬ ಜನರಿಗೆ ಇದೆ. ಗೋಮಾಂಸ ತಿನ್ನಲು ಹೆಚ್ಚೆಚ್ಚು ಪ್ರೋತ್ಸಾಹ ನೀಡುವ ಮೂಲಕ ಅನಿಸಿಕೆಯನ್ನು ಹೋಗಲಾಡಿಸಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕೇಂದ್ರದ 10 ಕೊರೊನಾ ಹಾಟ್ ಸ್ಪಾಟ್- ರಾಜ್ಯಗಳ ಲಿಸ್ಟ್ ನಲ್ಲಿ ಕರ್ನಾಟಕ

ನೆರೆ ರಾಜ್ಯ ಅಸ್ಸಾಂನಲ್ಲಿ ಗೋಹತ್ಯೆ ನಿಷೇಧಕ್ಕೆ ಸಂಬಂಧಪಟ್ಟಂತೆ ಹೊಸ ಕಾನೂನು ಜಾರಿಗೊಳಿಸಲಾಗಿದೆ. ಆದರೆ ಈ ಕಾಯ್ದೆಯಿಂದ ಮೇಘಾಲಯಕ್ಕೆ ಜಾನುವಾರುಗಳ ಸಾಗಣೆ ಮಾಡುವುದರ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬಳಿ ಮಾತನಾಡುತ್ತೇನೆ ಎಂದು ಮೇಘಾಲಯ ಸಚಿವ ಶುಲ್ಲೈ ತಿಳಿಸಿದ್ದಾರೆ. ಇದನ್ನೂ ಓದಿ: ಭಾನುವಾರದ ಬಾಡೂಟಕ್ಕೆ ಮಾಡಿ ನೋಡಿ ಪೋರ್ಕ್ ಬಿರಿಯಾನಿ

ಮೇಘಾಲಯದ ಬಿಜೆಪಿ ಸಚಿವ ಸ್ಯಾನ್ಬೋರ್ ಶುಲ್ಲೈ ಇಂಥದ್ದೊಂದು ಕರೆ ಕೊಟ್ಟು ಬಹುದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ಬಿಜೆಪಿ ಹಾಗೂ ಆರ್‍ಎಸ್‍ಎಸ್‍ಗಳು ಗೋಹತ್ಯೆ, ಗೋಮಾಂಸ ಸೇವನೆಯನ್ನು ಕಟುವಾಗಿ ವಿರೋಧಿಸುತ್ತವೆ. ಹೀಗಿರುವಾಗ ಬಿಜೆಪಿಯದ್ದೇ ಸಚಿವರೊಬ್ಬರು ಇಂಥ ಹೇಳಿಕೆ ನೀಡಿರುವುದು ಎಷ್ಟು ಸರಿ ಎಂದು ಜನರೂ ಪ್ರಶ್ನಿಸುತ್ತಿದ್ದಾರೆ.

Source: publictv.in Source link