ನಂದಿ ಬೆಟ್ಟದ ತಪ್ಪಲಿನಲ್ಲಿ ಅತಿರೇಕಕ್ಕೇರಿದ ಪ್ರವಾಸಿಗರ ಮೋಜು.. ಕಣ್ಮುಚ್ಚಿ ಕುಳಿತ ಪೊಲೀಸ್​ ಇಲಾಖೆ

ನಂದಿ ಬೆಟ್ಟದ ತಪ್ಪಲಿನಲ್ಲಿ ಅತಿರೇಕಕ್ಕೇರಿದ ಪ್ರವಾಸಿಗರ ಮೋಜು.. ಕಣ್ಮುಚ್ಚಿ ಕುಳಿತ ಪೊಲೀಸ್​ ಇಲಾಖೆ

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದ ತಪ್ಪಲಲ್ಲಿ ಪ್ರವಾಸಿಗರ ಮೋಜು‌ ಮಸ್ತಿ ಅತಿರೇಕಕ್ಕೆರಿದೆ. ಸಾರ್ವಜನಿಕ ಸ್ಥಳದಲ್ಲೇ ಪ್ರವಾಸಿಗರು ಹುಕ್ಕಾ ಸೇದುತ್ತಾ ಮೋಜು ಮಸ್ತಿಯಲ್ಲಿ ತೊಡಗಿದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ನಂದಿ ಗಿರಿಧಾಮಕ್ಕೆ ಪ್ರವೇಶ ನಿರ್ಬಂಧವಿದ್ದರೂ ಪ್ರವಾಸಿಗರ ದಂಡು.. ಸ್ಥಳೀಯರಿಗೆ ಟ್ರಾಫಿಕ್​ ಕಿರಿಕಿರಿ

ನಂದಿಗಿರಿಧಾಮಕ್ಕೆ ಕೊರೊನಾ ಆತಂಕದಿಂದ ಜಿಲ್ಲಾಡಳಿತ ಸಂಪೂರ್ಣ ಪ್ರವೇಶ ನಿರ್ಬಂಧ ಹೇರಿದ್ದು ಗಿರಿಧಾಮಕ್ಕೆ ಆಗಮಿಸುವ ಪ್ರವಾಸಿಗರು ಗಿರಿಧಾಮದ ತಪ್ಪಲಿನಲ್ಲೇ ಬೀಡು ಬಿಟ್ಟಿದ್ದಾರೆ. ಗಿರಿಧಾಮದ ತಪ್ಪಲಿನಲ್ಲೇ ತಂಗಿದ ಪ್ರವಾಸಿಗರು ಬಹಿರಂಗವಾಗಿ ಹುಕ್ಕಾ ಸೇದುತ್ತಾ ಮೋಜಿನಲ್ಲಿ ತೊಡಗಿದ್ದು, ಇದರಿಂದ ಇತರ ಪ್ರವಾಸಿಗರು ಮತ್ತು ಸ್ಥಳೀಯರಿಗೆ ತೀವ್ರ ಕಿರಿಕಿರಿ ಉಂಟಾಗಿದೆ.

ಇದನ್ನೂ ಓದಿ: ಲಕ್ಷಾಂತರ ಮೌಲ್ಯದ ಅಕ್ರಮ ರಕ್ತ ಚಂದನ ವಶ: ಇಬ್ಬರ ಬಂಧನ

Source: newsfirstlive.com Source link