ನಂದಿಬೆಟ್ಟದ ತಪ್ಪಲಲ್ಲಿ ರಾಜಾರೋಷವಾಗಿ ಪ್ರವಾಸಿಗರಿಂದ ಹುಕ್ಕಾ ಸೇವನೆ

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದತ್ತ ಬೆಳ್ಳಂಬೆಳಿಗ್ಗೆ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸಿದ್ದು, ಕೊರೊನಾ ನಿಯಮಗಳನ್ನ ಗಾಳಿಗೆ ತೂರಿದ್ದು ಮಾತ್ರವಲ್ಲದೆ, ಕೆಲ ಯುವಕರು ಹಾಡಹಗಲೇ ರಾಜಾರೋಷವಾಗಿ ಸಾರ್ವಜನಿಕ ಸ್ಥಳದಲ್ಲೇ ಹುಕ್ಕಾ ಸೇವನೆ ಮಾಡಿದ್ದಾರೆ.

ನೂರಾರು ಮಂದಿ ಸಾರ್ವಜನಿಕರ ಸಮ್ಮುಖದಲ್ಲೇ ಚಾಪೆ ಹಾಕಿ ಮ್ಯೂಸಿಕ್ ಹಾಕಿಕೊಂಡು ಹುಕ್ಕಾ ಸೇವನೆ ಮಾಡುತ್ತಾ ಮೋಜು ಮಸ್ತಿ ಮಾಡಿದ್ದಾರೆ. ಕೊರೊನಾ ನಿಯಮಗಳನ್ನ ಬ್ರೇಕ್ ಮಾಡೋದು ಒಂದೆಡೆಯಾದ್ರೆ ಮತ್ತೊಂದೆಡೆ ಈ ರೀತಿ ಹುಕ್ಕಾ ಸೇವನೆ, ಮದ್ಯಪಾನ ಮಾಡುವಂತಹ ಪ್ರಕರಣಗಳು ಪದೇ ಪದೇ ಮರುಕಳುಹಿಸುತ್ತಿವೆ. ಇದನ್ನೂ ಓದಿ: ನಂದಿಬೆಟ್ಟ ಬಂದ್- ಬ್ರಹ್ಮಗಿರಿ ಬೆಟ್ಟ ಏರಿ ಪ್ರವಾಸಿಗರ ಹುಚ್ಚಾಟ

ನಂದಿಗಿರಿಧಾಮ ಬಂದ್ ಮಾಡಿರುವ ಪರಿಣಾಮ ನಂದಿಗಿರಿಧಾಮ ದತ್ತ ಬರುವ ಪ್ರವಾಸಿಗರಿಗೆ ಚೆಕ್ ಪೋಸ್ಟ್ ಬಳಿ ತಡೆ ಹೊಡ್ಡಲಾಗುತ್ತದೆ. ಈ ವೇಳೆ ತಪ್ಪಲಲ್ಲೇ ಕಾರು ಬೈಕ್ ಪಾರ್ಕ್ ಮಾಡಿ ಅಕ್ಕಪಕ್ಕದ ಬೆಟ್ಟಗಳತ್ತ ನುಸುಳೋ ಪ್ರವಾಸಿಗರು ಈ ರೀತಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ನಂದಿಗಿರಿಧಾಮದ ತಪ್ಪಲಿನ ಚೆಕ್ ಪೋಸ್ಟ್ ಚಿಕ್ಕಬಳ್ಳಾಪುರ ದ ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದರೆ ತಪ್ಪಲಿಂದ ಬೆಟ್ಟದ ಕೆಳಭಾಗದ ಕಡೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದೆ. ಇದನ್ನೂ ಓದಿ:  ಮೀನು, ಮಟನ್‍ಗಿಂತ ಜಾಸ್ತಿ ಗೋಮಾಂಸವನ್ನೇ ತಿನ್ನಿ: ಬಿಜೆಪಿ ಸಚಿವ ಶುಲ್ಲೈ

blank

ನಂದಿಗಿರಿಧಾಮ ಪೊಲೀಸರು ಚೆಕ್ ಪೋಸ್ಟ್ ಸೇರಿ ಮೇಲ್ಬಾಗದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡ್ತಾರೆ. ಆದರೆ ತಪ್ಪಲಿನ ಕೆಳಭಾಗದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸೂಕ್ತ ಬಂದೋಬಸ್ತ್ ಪೊಲೀಸರ ನಿಯೋಜನೆ ಮಾಡುತ್ತಿಲ್ಲ. ಹೀಗಾಗಿ ಇಂತಹ ಪ್ರಕರಣಗಳು ನಡೀತಿವೆ ಅಂತಾರೆ ಚಿಕ್ಕಬಳ್ಳಾಪುರ ಪೊಲೀಸರು. ಆದರೆ ಅವರ ಮೇಲೆ ಇವರ ಮೇಲೆ ಅವರು ಬೆರಳು ತೋರಿಸೋ ಬದಲು ಪ್ರವಾಸಿಗರ ಇಂತಹ ಹುಚ್ಚಾಟಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಅಂತ ಪ್ರಜ್ಞಾವಂತ ನಾಗರೀಕರು ಒತ್ತಾಯಿಸುತ್ತಿದ್ದಾರೆ.

Source: publictv.in Source link