ಲಂಕಾ ಸರಣಿಯಲ್ಲಿ ಕಳಪೆ ಪ್ರದರ್ಶನ.. ಅಂತ್ಯವಾಯ್ತಾ ಈ ಸ್ಟಾರ್ ಆಟಗಾರರ ವಿಶ್ವಕಪ್ ಕನಸು​?

ಲಂಕಾ ಸರಣಿಯಲ್ಲಿ ಕಳಪೆ ಪ್ರದರ್ಶನ.. ಅಂತ್ಯವಾಯ್ತಾ ಈ ಸ್ಟಾರ್ ಆಟಗಾರರ ವಿಶ್ವಕಪ್ ಕನಸು​?

ಟೀಂ ಇಂಡಿಯಾದಲ್ಲಿ ವಿಶ್ವಕಪ್​​ಗೆ ಟಿಕೆಟ್​ ಪಡೆಯೋದಕ್ಕೆ, ಆಟಗಾರರ ನಡುವೆ ರೇಸ್​ ಏರ್ಪಟ್ಟಿದೆ. ಇಂತಹದ್ರಲ್ಲಿ ಈ ಆಟಗಾರರು ಸಿಕ್ಕ ಅವಕಾಶವನ್ನ ಕೈ ಚೆಲ್ಲಿದ್ದಾರೆ. ಹೀಗಾಗಿ ವಿಶ್ವಕಪ್​​​ ರೇಸ್​​​​ನಿಂದ ಬಹುತೇಕ ಆಟಗಾರರು ಔಟ್​​ ಆಗಿದ್ದಾರೆ. ಯಾರು ಆ ಆಟಗಾರರು, ನೋಡೋಣ ಬನ್ನಿ..

blank

ಮುಂಬರುವ ಟಿ20 ವಿಶ್ವಕಪ್​ ದೃಷ್ಟಿಯಿಂದ ಟೀಮ್ ಇಂಡಿಯಾದ ಕೆಲ ಆಟಗಾರರಿಗೆ, ಶ್ರೀಲಂಕಾ ಸರಣಿ ಅತ್ಯಂತ ಮಹತ್ವದ್ದಾಗಿತ್ತು. ಆದರೆ ಆಟಗಾರರು ಸಿಕ್ಕ ಅವಕಾಶವನ್ನ ಕೈ ಚೆಲ್ಲಿದ್ರು. ಆಯ್ಕೆ ಸಮಿತಿಯ ನಿರೀಕ್ಷೆಯನ್ನ ಹುಸಿಗೊಳಿಸಿದ್ರು. ಹೀಗಾಗಿ ಮುಂಬರುವ ಟಿ-ಟ್ವೆಂಟಿ ವಿಶ್ವಕಪ್​ ಸಮರಕ್ಕೆ, ಇವರಿಗೆಲ್ಲಾ ಬಾಗಿಲು ಬಹುತೇಕ ಮುಚ್ಚಿದಂತೆ ಕಾಣ್ತಿದೆ.

blank

ಯೆಸ್​.. ಮಧ್ಯಮ ಕ್ರಮಾಂಕ ಬ್ಯಾಟ್ಸ್​​ಮನ್​​ಗಳಾದ​ ಮನೀಷ್​ ಪಾಂಡೆ, ನಿತೀಶ್​​ ರಾಣಾ, ವಿಕೆಟ್​​ ಕೀಪರ್​ ಸಂಜು ಸ್ಯಾಮ್ಸನ್​, ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ, ಸ್ಪಿನ್ನರ್​ ಕುಲ್ದೀಪ್​ ಯಾದವ್.. ಇಡೀ ಟೂರ್ನಿಯಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ತೋರಿದ್ರು. ಇದರಿಂದ ತಂಡದ ಹಿನ್ನಡೆಗೂ ಕಾರಣವಾದ್ರು. ಇದು ಅವರ ವಿಶ್ವಕಪ್​ ಕನಸಿಗೂ ಕೊಳ್ಳಿ ಇಟ್ಟಿದೆ.

ಟಿ20 ವಿಶ್ವಕಪ್​ ಅರಂಭಕ್ಕೆ ಇನ್ನು ಮೂರು ತಿಂಗಳು ಬಾಕಿ ಉಳಿದಿದೆ. ಸದ್ಯ ಟೀಮ್​ ಇಂಡಿಯಾದಲ್ಲಿ ಒಂದೊಂದು ಸ್ಲಾಟ್​​ಗಾಗಿ ಪೈಪೋಟಿಯೇ ನಡೀತಿದೆ. ಇಂತಹ ಅವಧಿಯಲ್ಲಿ ಸಿಕ್ಕ ಗೋಲ್ಡನ್​ ಚಾನ್ಸ್​​ ಸದ್ಬಳಕೆ ಮಾಡಿಕೊಳ್ಳದ ಈ ಆಟಗಾರರಿಗೆ, ಮತ್ತೆ ತಂಡಕ್ಕೆ ಕಮ್​ಬ್ಯಾಕ್​ ಮಾಡೋ ನಿರೀಕ್ಷೆ ಕೂಡ ಇಲ್ಲದಂತಾಗಿದೆ. ಜೊತೆಗೆ ಅವರ ಭವಿಷ್ಯಕ್ಕೂ ಕುತ್ತು ತಂದಿದೆ.

blankಇನ್ನು ಹಾರ್ದಿಕ್​, ಮನೀಷ್​, ಸಂಜು, ಕುಲ್ದೀಪ್​​ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ ಇವರು ನೀಡಿದ ವರ್ಸ್ಟ್​ ಪರ್ಫಾಮೆನ್ಸ್, ಆಯ್ಕೆಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಸದ್ಯ ಈ ಆಟಗಾರರ ಮುಂದೆ ಐಪಿಎಲ್​ ಇದೆ. ಜೊತೆಗೆ ವಿಶ್ವಕಪ್​ ಕೂಡ ಯುಎಇ ನಲ್ಲೇ ನಡೆಯೋ ಕಾರಣ, IPL​​ನಲ್ಲಿ ಬೆಸ್ಟ್​ ಪರ್ಫಾರ್ಮೆನ್ಸ್​ ನೀಡಲೇಬೇಕಿದೆ. ಇಲ್ಲವಾದಲ್ಲಿ ವಿಶ್ವಕಪ್​ ಇರಲಿ, ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಳ್ಳೋದಕ್ಕೂ ಹರಸಾಹಸವೇ ಪಡಬೇಕಾಗಿದೆ.

Source: newsfirstlive.com Source link