ವಿಶ್ವಸಂಸ್ಥೆಯ UNSC ಅಧ್ಯಕ್ಷರಾಗಿ ಮೋದಿ; ‘ಭಾರತದ ಮೊದಲ ಪ್ರಧಾನಿ’ ಹೆಗ್ಗಳಿಕೆ

ವಿಶ್ವಸಂಸ್ಥೆಯ UNSC ಅಧ್ಯಕ್ಷರಾಗಿ ಮೋದಿ; ‘ಭಾರತದ ಮೊದಲ ಪ್ರಧಾನಿ’ ಹೆಗ್ಗಳಿಕೆ

ನವದೆಹಲಿ: ಇಂದಿನಿಂದ ಒಂದು ತಿಂಗಳ ಕಾಲ ವಿಶ್ವಸಂಸ್ಥೆ ಭದ್ರತಾ ಸಮಿತಿಯ ಅಧ್ಯಕ್ಷತೆಯನ್ನ ಭಾರತ ವಹಿಸಿಕೊಳ್ಳಲಿದೆ. ವಿಶೇಷ ಎಂದರೇ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್ಎಸ್​​ಸಿ) ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಭಾರತದ ಮೊದಲ ಪ್ರಧಾನಿ ಅನ್ನೋ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಈ ಸಭೆಯ ಅಧ್ಯಕ್ಷತೆ ವಹಿಸಲು ನಿರ್ಧರಿಸಿದ ಮೊದಲ ಭಾರತೀಯ ಪ್ರಧಾನಿ ಪಿಎಂ ನರೇಂದ್ರ ಮೋದಿ ಎಂದು ವಿಶ್ವಸಂಸ್ಥೆಯ ಭಾರತದ ಮಾಜಿ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತ ಪ್ರಮುಖ ಮೂರು ವಿಚಾರಗಳಿಗೆ ಒತ್ತು ನೀಡುವ ಸಾಧ್ಯತೆ ಇದೆ. ಕಡಲ ಭದ್ರತೆ, ಶಾಂತಿಪಾಲನೆ ಹಾಗೂ ಭಯೋತ್ಪಾದನೆ ವಿರುದ್ಧ ಪ್ರಮುಖ ನಿರ್ಣಯಗಳನ್ನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಂದಿನ 2 ವರ್ಷದ ಈ ಅವಧಿಯಲ್ಲಿ ಭಾರತಕ್ಕೆ ಎರಡು ಬಾರಿ ಅಧ್ಯಕ್ಷ ಸ್ಥಾನ ಸಿಗಲಿದೆ. 2021ರ ಆಗಸ್ಟ್‌ ಮತ್ತು 2022ರ ಡಿಸೆಂಬರ್‌ನಲ್ಲಿ ಭಾರತಕ್ಕೆ ಅಧ್ಯಕ್ಷ ಸ್ಥಾನ ಸಿಗಲಿದೆ. ಭಾರತವು ತನ್ನ ನಾಯಕತ್ವದಲ್ಲಿ ಯುಎನ್‌ಎಸ್‌ಸಿಯಲ್ಲಿ ಹೂಡಿಕೆ ಮಾಡಿರೋದನ್ನ ಪ್ರದರ್ಶಿಸಲು ಬಯಸುತ್ತದೆ. ಮತ್ತು ತನ್ನ ನಾಯಕತ್ವವನ್ನು ಜಗತ್ತಿಗೆ ಸಾಬೀತುಪಡಿಸಲಿದೆ. ಇದು ನಮಗೆ ಮೊದಲ ಸಭೆಯಾಗಿದೆ ಮತ್ತು ಐತಿಹಾಸಿಕ ಘಟನೆಯಾಗಿದೆ ಅಂತಾ ಅಕ್ಬರುದ್ದೀನ್ ಹೇಳಿದ್ದಾರೆ.

Source: newsfirstlive.com Source link