ಮಾಜಿ ಪತ್ನಿಯೊಂದಿಗೆ ಜಮ್ಮು-ಕಾಶ್ಮೀರದ ಗವರ್ನರ್ ಭೇಟಿಯಾದ ಅಮಿರ್ ಖಾನ್

ಮಾಜಿ ಪತ್ನಿಯೊಂದಿಗೆ ಜಮ್ಮು-ಕಾಶ್ಮೀರದ ಗವರ್ನರ್ ಭೇಟಿಯಾದ ಅಮಿರ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಅಮಿರ್ ಖಾನ್ ಹಾಗೂ ಮಾಜಿ ಪತ್ನಿ ಕಿರಣ್ ರಾವ್ ನಿನ್ನೆ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾರನ್ನ ಭೇಟಿಯಾಗಿದ್ದಾರೆ. ಕೇಂದ್ರಾಡಳಿತ ಪ್ರದೇಶವನ್ನ ನೆಚ್ಚಿನ ಸಿನಿಮಾ ತಾಣವನ್ನಾಗಿಸುವ ಸಂಬಂಧ ರಾಜ್ಯಪಾಲರನ್ನ ಭೇಟಿಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಲೆಫ್ಟಿನೆಂಟ್ ಗವರ್ನರ್​.. ಫಿಲ್ಮ್​ ಆ್ಯಕ್ಟರ್ ಅಮಿರ್​ ಖಾನ್ ಮತ್ತು ಕಿರಣ್ ರಾವ್ ಅವರು ಭೇಟಿಯಾದರು. ಈ ವೇಳೆ ನಾವು ಜಮ್ಮು-ಕಾಶ್ಮೀರದಲ್ಲಿ ಚಿತ್ರೀಕರಣಕ್ಕೆ ನೀಡಲಾಗುವ ಹೊಸ ಪಾಲಿಸಿ ಬಗ್ಗೆ ಮಾತನಾಡಲಾಯಿತು. ಶೀಘ್ರದಲ್ಲೇ ಹೊಸ ಪಾಲಿಸಿಯನ್ನ ಬಿಡುಗಡೆ ಮಾಡಲಾಗುವುದು. ಬಾಲಿವುಡ್​ನಲ್ಲಿ ಮತ್ತೆ ಜಮ್ಮು-ಕಾಶ್ಮೀರದ ವೈಭವ ಮತ್ತು ಫೆವರಿಟ್ ತಾಣವನ್ನಾಗಿಸುವ ಸಂಬಂಧ ಚರ್ಚೆ ಮಾಡಲಾಯಿತು ಎಂದಿದ್ದಾರೆ.

ಸದ್ಯ ಅಮಿರ್​ ಖಾನ್ ಅವರು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ಮಿರ್​ ಖಾನ್ ಮತ್ತು ಕಿರಣ್​ ರಾವ್ 15 ವರ್ಷಗಳ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಹಾಡಿದ್ದಾರೆ. ಪರಸ್ಪರ ಒಪ್ಪಿಕೊಂಡು ವಿಚ್ಛೇದನ ಪಡೆದುಕೊಂಡು ದೂರವಾಗಿದ್ದಾರೆ. ಕೇವಲ ದಾಂಪತ್ಯ ಜೀವನಕ್ಕೆ ಮಾತ್ರ ವಿಚ್ಛೇದನ ಕೊಟ್ಟಿದ್ದು, ತಾವು ಸ್ನೇಹಿತರಾಗಿಯೇ ಮುಂದುವರಿಯುತ್ತೇವೆ ಅಂತಾ ಅಮಿರ್ ಜೋಡಿ ಹೇಳಿದೆ. ಅದರಂತೆ ಅಮಿರ್ ಖಾನ್ ಮತ್ತು ಕಿರಣ್ ರಾವು ಒಟ್ಟಿಗೆ ಸಿನಿಮಾ ಚಿತ್ರೀಕರಣದಲ್ಲಿ ಕೂಡ ಭಾಗಿಯಾಗುತ್ತಿದ್ದಾರೆ.

Source: newsfirstlive.com Source link