ಬಿಗ್ ಮನೆಯಿಂದ ಶುಭಾ ಔಟ್​ -ಇವತ್ತು ಮತ್ತೆ ಶಾಕ್​​ ಕೊಡ್ತಾರೆ ಕಿಚ್ಚ!

ಬಿಗ್ ಮನೆಯಿಂದ ಶುಭಾ ಔಟ್​ -ಇವತ್ತು ಮತ್ತೆ ಶಾಕ್​​ ಕೊಡ್ತಾರೆ ಕಿಚ್ಚ!

ಬಿಗ್​ ಮನೆಯಲ್ಲಿ ಯಾವಾಗ ಏನ್​ ಆಗುತ್ತೆ ಅಂತಾ ಉಹಿಸೋದು ಕಷ್ಟ. ಈಗ ಬಿಗ್ ಬಾಸ್​ ಎಲಿಮಿನೇಶನ್​ ಶಾಕ್​ ನೀಡಿದ್ದು, ಎಲಿಮಿನೇಶನ್​ ಸುಳಿಯಲ್ಲಿ ದಿವ್ಯಾ ಉರುಡುಗ ಹೊರತುಪಡೆಸಿ ಮನೆಯ 7 ಜನ ಸದಸ್ಯರು ಈ ವಾರ ನಾಮಿನೇಟ್​ ಆಗಿದ್ದರು, ಶನಿವಾರವೇ ಶುಭಾ ಪೂಂಜಾ ಮನೆಯಿಂದ ಹೊರಬಂದಿದ್ದಾರೆ.

ಹೌದು, 8ನೇ ಆವೃತ್ತಿಯ ಕೊನೆಯ ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಮನೆಯವರ ಕಾಲು ಎಳೆಯುತ್ತಲೇ ಭಾನುವಾರದ ಎಲಿಮಿನೇಶನ್​ ಬಗ್ಗೆ ಮಾತನಾಡಿದ್ರು. ಶುಭಾ ನಂತ್ರ ಎಲಿಮಿನೇಶನ್​ ಕತ್ತಿ ಯಾರ ಬಳಿ ವಾಲುತ್ತದೆ ಎನ್ನುವುದು ಮನೆಯವರ ತೆಲೆ ಕೆಡಿಸಿದ್ದು, ಹೆಚ್ಚು ಇಲ್ಲಿ ಶಮಂತ್​, ದಿವ್ಯಾ ಸುರೇಶ್​, ಪ್ರಶಾಂತ್​ ಬಾಟಮ್​ ಲೈನ್​ಲ್ಲಿ ಕಾಣಿಸುತ್ತಿದ್ದು, ಶಮಂತ್​ ಹೊರ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.

blank

ಇನ್ನೂ ಈ ವಾರ ಇಮ್ಯುನಿಟಿ ಪಡೆದಿದ್ದ ದಿವ್ಯಾ ಉರುಡುಗ ಸೇರಿ ಮನೆಯ ಎಲ್ಲಾ ಸದಸ್ಯರು ನಾಮಿನೇಶನ್​ ರೇಸ್​ನಲ್ಲಿದ್ದಾರೆ. ಫಿನಾಲೆಗೆ ಕೇವಲ ವಾರ ಇದ್ದು, ಮಿಡ್​ ನೈಟ್​ ಎಲಿಮಿನೇಶನ್​ ಶಾಕ್​ ನೀಡಿದ್ದಾರೆ ಸುದೀಪ್​.

ಟಾಪ್​ 5ಗೆ ಯಾರು ಇರ್ತಾರೆ ಅನ್ನೋದು ಕೂತಹಲ ಮೂಡಿಸಿದೆ. ಅರವಿಂದ್​, ಮಂಜು, ವೈಷ್ಣವಿ ಒಂದು ರೀತಿಯಲ್ಲಿ ಫಿಕ್ಸ್​ ಅನ್ನೋದು ಎಲ್ಲೆಡೆ ಕೇಳಿ ಬರುತ್ತಿರುವ ಮಾತು. ಇನ್ನೂಳಿದ 2 ಸ್ಥಾನಗಳಲ್ಲಿ ದಿವ್ಯಾ ಉರುಡುಗ, ಪ್ರಶಾಂತ್​ ಹೆಸರು ಕೇಳಿ ಬರುತ್ತಿವೆ. ಆದ್ರೆ ಬಿಗ್​ ಮನೆಯಲ್ಲಿ ಲೆಕ್ಕಾಚಾರಗಳು ನಡೆಯುದಿಲ್ಲ. ಹೀಗಾಗಿ ಈ ವಾರ ಸಾಕಷ್ಟು ಕೂತಹಲ ಕೆರಳಿಸಿದೆ.

blank

Source: newsfirstlive.com Source link