ಚಾಮರಾಜನಗರ To ದೆಹಲಿ ಪಾದಯಾತ್ರೆ ಆರಂಭಿಸಿದ ರೈತ

ಧಾರವಾಡ: ರೈತರೊಬ್ಬರು ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಗೆ ಪಾದಯಾತ್ರೆ ಆರಂಭಿಸಿದ್ದಾರೆ.

ನಾಗರಾಜ್ ಎಂಬ ರೈತ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಚಾಮರಾಜನಗರದಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಸ್ಥಳಕ್ಕೆ ಹೋರಟಿದ್ದಾರೆ. ಕಳೆದ ಫೆಬ್ರವರಿಯಲ್ಲೇ ತಮ್ಮ ಪಾದಯಾತ್ರೆ ಆರಂಭಿಸಿದ್ದರು. ಆದರೆ ಕೊರೊನಾದಿಂದ ಲಾಕ್‍ಡೌನ್ ಆದ ಹಿನ್ನೆಲೆ ಪಾದಯಾತ್ರೆ ಮೊಟಕು ಗೊಳಿಸಿದ್ದರು. ಈಗ ಜುಲೈ 2 ರಿಂದ ನಮ್ಮ ಪಾದಯಾತ್ರೆ ಮತ್ತೆ ಆರಂಭಿಸಿದ ರೈತ ನಾಗರಾಜ್ ಅವರು 7 ಸಾವಿರ ಕಿಲೋ ಮೀಟರ್‍ವರೆಗೆ ಪಾದಯಾತ್ರೆ ಮಾಡಲಿದ್ದಾರೆ.

ಇವತ್ತು ಧಾರವಾಡದ ಅಂಬೇಡ್ಕರ್ ವೃತ್ತಕ್ಕೆ ಭೇಟಿ ನೀಡಿದ ನಾಗರಾಜ್, ಕೇಂದ್ರ ಸರ್ಕಾರದ ಮೇಲೆ ಕಿಡಿಕಾರಿದರು. ಉತ್ತರ ಪ್ರದೇಶದಲ್ಲಿ ರೈತರು ಪ್ರತಿಭಟನೆ ಮಾಡಿದರೆ ಚರ್ಮ ಸುಲಿಯುತ್ತೆನೆ ಎಂದು ಯುಪಿ ಸರ್ಕಾರ ಹೇಳುತಿದ್ದು, ಇದಕ್ಕೆ ನಾವು ಜಗ್ಗಲ್ಲ ಎಂದು ನಾಗರಾಜ್ ಹೇಳಿದರು. ಪ್ರಧಾನಿ ಮೋದಿ ಹಾಗೂ ಅಮೀತ್ ಷಾಗೆ ಎಚ್ಚರಿಕೆ ನೀಡಿದ ಈ ರೈತ, ರೈತರ ಮೇಲೆ ಹಲ್ಲೆ ಮಾಡಿದ್ದೇ ಆದರೆ ಯುಪಿಗೆ ಇಡಿ ರೈತರು ನುಗ್ಗಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

Source: publictv.in Source link