‘ಬಿಸಿಸಿಐ ನನಗೆ ಬೆದರಿಕೆ ಹಾಕ್ತಿದೆ’ -ಶಾಕಿಂಗ್​ ಹೇಳಿಕೆ ಕೊಟ್ಟ ದ.ಆಫ್ರಿಕಾ ಮಾಜಿ ಕ್ರಿಕೆಟರ್​​

‘ಬಿಸಿಸಿಐ ನನಗೆ ಬೆದರಿಕೆ ಹಾಕ್ತಿದೆ’ -ಶಾಕಿಂಗ್​ ಹೇಳಿಕೆ ಕೊಟ್ಟ ದ.ಆಫ್ರಿಕಾ ಮಾಜಿ ಕ್ರಿಕೆಟರ್​​

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷೆಲ್​ ಗಿಬ್ಸ್​ ಬಿಸಿಸಿಐ ತಮ್ಮನ್ನು ಕಾಶ್ಮೀರ ಪ್ರೀಮಿಯರ್​ ಲೀಗ್​ನಲ್ಲಿ ಆಡದಂತೆ ಬೆದರಿಸುತ್ತಿದೆ ಎಂದು ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಜಮ್ಮು ಕಾಶ್ಮೀರದ ವಿಚಾರದಲ್ಲಿ ಭಾರತ – ಪಾಕಿಸ್ತಾನ ನಡುವೆ ರಾಜಕೀಯ ವೈಷಮ್ಯ ಬಹಳ ವರ್ಷಗಳಿಂದ ಮುಂದುವರಿಯುತ್ತ ಬಂದಿದೆ. ಹೀಗಿರುವಾಗ ವಿವಾದಿತ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಕಾಶ್ಮೀರ ಪ್ರೀಮಿಯರ್​ ಲೀಗ್ ನಡೆಸಲು ಸ್ಥಳೀಯ ರಾಜಕಾರಣಿ ಶಹರ್ಯಾರ್​ ಅಫ್ರಿದಿ ನಿರ್ಧರಿಸಿದ್ದಾರೆ.

ಉದ್ದೇಶಿತ ಟೂರ್ನಿಯಲ್ಲಿ ಭಾಗಿಯಾಗಲು ಪಾಕಿಸ್ತಾನದ ಸ್ಟಾರ್ ಕ್ರಿಕೆಟರ್ಸ್​​ ನೇತೃತ್ವದಲ್ಲಿ 6 ತಂಡಗಳನ್ನ ರಚಿಸಲಾಗಿದೆ. ಈ ಲೀಗ್​ನಲ್ಲಿ ಆಡುವುದಕ್ಕೆ ಕೆಲವು ವಿದೇಶಿಗರಿಗೂ ಕೆಪಿಎಲ್ ಆಡಳಿತ ಮಂಡಳಿ ಆಹ್ವಾನ ನೀಡಿದೆ. ಆದರೆ ಇದಕ್ಕೆ ಬಿಸಿಸಿಐ ಅಡ್ಡಗಲಾಗಿದೆ ಎಂದು ಪಾಕ್​ ಮಾಜಿ ಕ್ರಿಕೆಟಿಗರು ಆರೋಪ ಮಾಡಿದ್ದಾರೆ.

ಇದೀಗ ಹರ್ಷೆಲ್ ಗಿಬ್ಸ್ ಕೂಡ ಕೆಪಿಎಲ್​ನಲ್ಲಿ ಆಡದಂತೆ ನನಗೆ ಬಿಸಿಸಿಐ ಬೆದರಿಸುತ್ತಿದೆ ಎಂದು ಟ್ವಿಟರ್​​​ನಲ್ಲಿ ಪೋಸ್ಟ್​ ಮಾಡಿದ್ದು ವಿವಾದ ಸೃಷ್ಟಿಸುತ್ತಿದೆ. ಪಾಕಿಸ್ತಾನದೊಂದಿಗಿರುವ ರಾಜಕೀಯ ವೈಷಮ್ಯದ ಕಾರಣ ಬಿಸಿಸಿಐ ನನ್ನನ್ನು KPLನಲ್ಲಿ ಆಡುವುದನ್ನು ತಡೆಯುವ ಪ್ರಯತ್ನ ಅನಗತ್ಯವಾದದ್ದು. ಒಂದು ವೇಳೆ ಅಲ್ಲಿ ಆಡಿದರೆ ಭಾರತಕ್ಕೆ ಕ್ರಿಕೆಟ್ ಸಂಬಂಧಿತ ಕೆಲಸಕ್ಕೆ ಪ್ರವೇಶಿಸುವ ಯಾವುದೇ ಅವಕಾಶವನ್ನು ನೀಡುವುದಿಲ್ಲ ಎಂದು ಹೇಳಿರುವುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ. ಗಿಬ್ಸ್​ ಟ್ವೀಟ್ ವೈರಲ್ ಆಗುತ್ತಿದ್ದಂತೆ ಕೆಲವು ಪಾಕಿಸ್ತಾನ ಕ್ರಿಕೆಟಿಗರು ಬಿಸಿಸಿಐ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

Source: newsfirstlive.com Source link