ನೋವಿನೊಂದಿಗೂ ಹೋರಾಡಿ ಸೋತ ಸತೀಶ್​ ಕುಮಾರ್​​; ಕೈ ತಪ್ಪಿದ ಪದಕ

ನೋವಿನೊಂದಿಗೂ ಹೋರಾಡಿ ಸೋತ ಸತೀಶ್​ ಕುಮಾರ್​​; ಕೈ ತಪ್ಪಿದ ಪದಕ

ಟೋಕಿಯೋ ಒಲಿಂಪಿಕ್ಸ್​​ ಕ್ರೀಡಾಕೂಟದಲ್ಲಿ ಬಾಕ್ಸರ್ ಸತೀಶ್ ಕುಮಾರ್, ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸೋಲು ಅನುಭವಿಸಿದ್ದಾರೆ. ಇಂದು ನಡೆದ ಪುರುಷರ 91+ ಕೆ.ಜಿಯ ಸೂಪರ್ ಹೆವಿವೇಟ್ ವಿಭಾಗದಲ್ಲಿ ಸತೀಶ್ ಕುಮಾರ್ ಸೋಲುಂಡಿದ್ದಾರೆ. ವಿಶ್ವದ ನಂ.1 ಱಂಕಿಂಗ್​ನ ಆಟಗಾರ ಉಜ್ಬೇಕಿಸ್ತಾನದ ಬಖೋದಿರ್ ಜಲೋಲೋವ್ ವಿರುದ್ಧ 0-5 ಅಂತರದಲ್ಲಿ ಸೋಲು ಅನುಭವಿಸಿದರು. ಪಂದ್ಯದ ಮೊದಲ ಬೋಟ್​​ನಲ್ಲಿ ಸತೀಶ್​ ಕುಮಾರ್​ ಇಂಜುರಿಗೆ ತುತ್ತಾದ್ರು. ಆದರೂ ಛಲ ಬಿಡದೇ ಹೋರಾಟ ನಡೆಸಿದ್ರು. ಆದ್ರೆ, ಅಗ್ರ ಕ್ರಮಾಂಕದ ಆಟಗಾರನ ಎದುರು ಮೇಲುಗೈ ಸಾಧಿಸಲು ಸತೀಶ್​ ಕುಮಾರ್​ಗೆ ಸಾಧ್ಯವಾಗಲಿಲ್ಲ.

ಒಂದು ವೇಳೆ ಕನಿಷ್ಠ ಸೆಮಿಫೈನಲ್‌ಗೆ ಪ್ರವೇಶಿಸಲು ಸಾಧ್ಯವಾಗಿದ್ದಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶ ಸತೀಶ್​ ಕುಮಾರ್​ಗಿತ್ತು. ನಿನ್ನೆಯ ಪಂದ್ಯದಲ್ಲಿ ಪೂಜಾ ರಾಣಿ ಕೂಡ ಕ್ವಾರ್ಟರ್​​ ಫೈನಲ್​ನಲ್ಲಿ ಎಡವಿದ್ರು.

Source: newsfirstlive.com Source link