ಹೆಚ್​.ಡಿ. ದೇವೇಗೌಡರ ಭೇಟಿಯಾದ ಬೊಮ್ಮಾಯಿ.. ಆಶೀರ್ವಾದ, ಮಾರ್ಗದರ್ಶನ ಪಡೆದ ಸಿಎಂ

ಹೆಚ್​.ಡಿ. ದೇವೇಗೌಡರ ಭೇಟಿಯಾದ ಬೊಮ್ಮಾಯಿ.. ಆಶೀರ್ವಾದ, ಮಾರ್ಗದರ್ಶನ ಪಡೆದ ಸಿಎಂ

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪದ್ಮನಾಭನಗರದ ನಿವಾಸಕ್ಕೆ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಈ ವೇಳೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಹೆಚ್​​.ಡಿ. ರೇವಣ್ಣ ಬಸವರಾಜ್ ಬೊಮ್ಮಾಯಿ ಅವರನ್ನ ಬರಮಾಡಿಕೊಂಡಿದ್ದಾರೆ. ಈ ವೇಳೆ ಮಾಜಿ ಸಚಿವ ವಿ. ಸೋಮಣ್ಣ ಉಪಸ್ಥಿತಿಯಲ್ಲಿದ್ದರು.

blank

ಬೊಮ್ಮಾಯಿ ಈ ಹಿಂದೆ ಜನತಾ ಪರಿವಾರದಲ್ಲೇ ಬೆಳೆದವರು.. ಅವರ ತಂದೆ ಎಸ್. ಆರ್. ಕಾಲದಿಂದಲೂ ಬಸವರಾಜ ಬೊಮ್ಮಾಯ ಜನತಾದಳದಲ್ಲಿದ್ದರು.. 2008 ರಲ್ಲಿ ಜನತಾದಳ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ಮುಖ್ಯಮಂತ್ರಿಯಾಗಿರುವ ಬಸವರಾಜ್ ಬೊಮ್ಮಾಯಿ ಮಾಜಿ ಪ್ರಧಾನಿ ದೇವೇಗೌಡರಿಂದ ಆಡಳಿದ ಮಾರ್ಗದರ್ಶನ, ಸಹಕಾರ ಕೋರಿದ್ದಾರೆ. ಈ ವೇಳೆ ನೀರಾವರಿ ವಿಚಾರ ಸೇರಿದಂತೆ ಹಲವು ವಿಚಾರದಲ್ಲಿ ಸಲಹೆ ಪಡೆಯಲಿದ್ದಾರೆ ಎನ್ನಲಾಗಿದೆ.

blank

ಇದೇ ವೇಳೆ ಸಿಎಂ ಬೊಮ್ಮಾಯಿ ಮಾಜಿ ಪಿಎಂ ದೇವೇಗೌಡರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.

Source: newsfirstlive.com Source link