ರಾಕೆಟ್​ ದಾಳಿ ಬೆನ್ನಲ್ಲೇ ಅಫ್ಘಾನಿಸ್ತಾನ್​​​ ಭದ್ರತಾ ಪಡೆಯಿಂದ ಏರ್​ಸ್ಟ್ರೈಕ್​ ; 254 ತಾಲಿಬಾನ್​​ ಉಗ್ರರು ಉಡೀಸ್

ರಾಕೆಟ್​ ದಾಳಿ ಬೆನ್ನಲ್ಲೇ ಅಫ್ಘಾನಿಸ್ತಾನ್​​​ ಭದ್ರತಾ ಪಡೆಯಿಂದ ಏರ್​ಸ್ಟ್ರೈಕ್​ ; 254 ತಾಲಿಬಾನ್​​ ಉಗ್ರರು ಉಡೀಸ್

ನವದೆಹಲಿ: ಅಫ್ಘಾನಿಸ್ತಾನದ ಕಂದಹಾರ್​​ ಏರ್​ಪೋರ್ಟ್ ಮೇಲೆ ಶನಿವಾರ ರಾತ್ರಿ ತಾಲಿಬಾನ್​​ ಉಗ್ರರು ಮೂರು ರಾಕೆಟ್​​ಗಳಿಂದ ದಾಳಿ ನಡೆಸಿದ್ದರು. ಈ ಬೆನ್ನಲ್ಲೀಗ ರಾಕೆಟ್​​ ದಾಳಿ ನಡೆಸಿದ ತಾಲಿಬಾನ್​​ ಉಗ್ರರ ನೆಲೆಗಳ ಮೇಲೆ ಅಫ್ಘಾನಿಸ್ತಾನ ರಕ್ಷಣಾ ಪಡೆಗಳು ವಾಯುದಾಳಿ ನಡೆಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇನ್ನು, ತಾಲಿಬಾನ್​ ಉಗ್ರರ 13 ವಿವಿಧ ನೆಲೆಗಳ ಮೇಲೆ ಅಫ್ಘಾನಿಸ್ತಾನ ರಕ್ಷಣಾ ಪಡೆಗಳು ವಾಯುದಾಳಿ ನಡೆಸಿದ್ದರು. ಈ ವಾಯುದಾಳಿಯಲ್ಲಿ ಸುಮಾರು 254 ತಾಲಿಬಾನ್​ ಉಗ್ರರು ಹತರಾಗಿದ್ದಾರೆ. ಜತೆಗೆ 100ಕ್ಕೂ ಹೆಚ್ಚು ಉಗ್ರರು ತೀವ್ರ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಸರ್ಕಾರ ತಿಳಿಸಿದೆ.

ತಾಲಿಬಾನ್​​ ಉಗ್ರರು ಶನಿವಾರ ರಾತ್ರಿ ಕಂದಹಾರ್ ಏರ್​ಪೋರ್ಟ್ ಗುರಿಯಾಗಿಸಿಕೊಂಡು ಮೂರು ರಾಕೆಟ್​​ಗಳಿಂದ ದಾಳಿ ನಡೆಸಿದ್ದರು. ಹೀಗಾಗಿ ಕಂದಹಾರ್ ಏರ್​ಪೋರ್ಟ್​ನಲ್ಲಿ ವಿಮಾನ ಹಾರಾಟ ರದ್ದು ಮಾಡಿ ಆದೇಶ ಹೊರಡಿಸಲಾಗಿತ್ತು.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಹೆಚ್ಚಿದ ಆತಂಕ; ನಿನ್ನೆ ರಾತ್ರಿ ಮತ್ತೆ ಮೂರು ಡ್ರೋಣ್​ಗಳ ಹಾರಾಟ

ಕಂದಹಾರ್ ಏರ್​ಪೋರ್ಟ್ ಮೇಲೆ ನಡೆಸಿದ ರಾಕೆಟ್​​ ದಾಳಿ ಈಗ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದ್ದು, ತಾಲಿಬಾನ್​​ ಉಗ್ರರ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

Source: newsfirstlive.com Source link