ಮಹಾರಾಷ್ಟ್ರಕ್ಕೂ ಹರಡಿದ ಝೀಕಾ ವೈರಸ್ ಸೋಂಕು; ಮೊದಲ ಕೇಸ್ ಪತ್ತೆ

ಮಹಾರಾಷ್ಟ್ರಕ್ಕೂ ಹರಡಿದ ಝೀಕಾ ವೈರಸ್ ಸೋಂಕು; ಮೊದಲ ಕೇಸ್ ಪತ್ತೆ

ಮುಂಬೈ: ಕೇರಳದಲ್ಲಿ ಭೀತಿ ಹುಟ್ಟಿಸಿರುವ ಝೀಕಾ ವೈರಸ್ ಇದೀಗ ಮಹಾರಾಷ್ಟ್ರಕ್ಕೂ ಕಾಲಿಟ್ಟಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಮಹಿಳೆಯೋರ್ವರಲ್ಲಿ ಝೀಕಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು ಸದ್ಯ ಸೋಂಕಿನಿಂದ ಮಹಿಳೆ ಗುಣಮುಖರಾಗಿದ್ದಾರೆ.

ಪುಣೆಯ ಪುರಂದರ್ ತೆಹ್ಸಿಲ್ ನ ಬೆಲ್ಸಾರ್ ಗ್ರಾಮದ 50 ವರ್ಷದ ಮಹಿಳೆಯೋರ್ವರಲ್ಲಿ ಝೀಕಾ ವೈರಸ್ ಕಾಣಿಸಿಕೊಂಡಿತ್ತು.. ಅವರು ಚೇತರಿಸಿಕೊಂಡಿದ್ದು ಅವರ ಕುಟುಂಬದ ಸದಸ್ಯರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎನ್ನಲಾಗಿದೆ.

ವರದಿಯ ಪ್ರಕಾರ ಝೀಕಾ ಸೋಂಕಿನ ಜೊತೆಗೆ ಚಿಕುನ್​ಗೂನ್ಯ ಸೋಂಕು ಸಹ ಮಹಿಳೆಯಲ್ಲಿ ಕಂಡುಬಂದಿತ್ತಂತೆ.. ಗ್ರಾಮಕ್ಕೆ ಸರ್ಕಾರಿ ಮೆಡಿಕಲ್ ಟೀಮ ಭೇಟಿ ನೀಡಿ ಗ್ರಾಮದ ಪಂಚಾಯತ್ ಸದಸ್ಯರನ್ನ ಭೇಟಿಯಾಗಿ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಇತ್ತ ಕೇರಳದಲ್ಲಿ ಈವರೆಗೆ 60 ಕ್ಕೂ ಹೆಚ್ಚು ಮಂದಿ ಝೀಕಾ ಸೋಂಕಿಗೆ ಒಳಗಾಗಿದ್ದು ನೆರೆರಾಜ್ಯಗಳಲ್ಲಿ ಸೋಂಕಿನ ಭೀತಿ ಶುರುವಾಗಿದೆ.

Source: newsfirstlive.com Source link