ದಶಕಗಳಿಂದ ಅಭಿವೃದ್ದಿ ಕಾಣದ ಹಳ್ಳಿಗೆ ರಸ್ತೆ ತಂದ ಭಾರತದ ಮಹಿಳಾ ಬಾಕ್ಸರ್ ಗೆಲುವು

ದಶಕಗಳಿಂದ ಅಭಿವೃದ್ದಿ ಕಾಣದ ಹಳ್ಳಿಗೆ ರಸ್ತೆ ತಂದ ಭಾರತದ ಮಹಿಳಾ ಬಾಕ್ಸರ್ ಗೆಲುವು

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಯುವ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಮಾಜಿ ವಿಶ್ವ ಚಾಂಪಿಯನ್ ಚೀನಾದ ತೈಪೆಯ ಚಿನ್ ಚೆನ್​​ರನ್ನು ಸೋಲಿಸಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಕನಿಷ್ಠ ಕಂಚಿನ ಪದಕ ತರುವ ಖಾತ್ರಿಪಡಿಸಿದ್ದಾರೆ. ಲವ್ಲಿನಾ ಬೊರ್ಗೊಹೈನ್ ಈ ಸಾಧನೆ ಬೆನ್ನಲ್ಲೇ ಅಸ್ಸಾಂ ಸರ್ಕಾರ ಲವ್ಲೀನಾ ಅವರ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ.

ಹೌದು, ಲವ್ಲಿನಾ ಅಸ್ಸಾಂನ ಗೋಲಘಾಟ್ ಜಿಲ್ಲೆಯ ಬಾರೋ ಮುಖಿಯಾದ ಗ್ರಾಮಕ್ಕೆ ಸೇರಿದವರು. ಈ ಗ್ರಾಮದಲ್ಲಿ ಯಾವುದೇ ಮೂಲಭೂತ ಸೌಕರ್ಯ ಇಲ್ಲ. ಯೋಗ್ಯವಾದ ಕಾಂಕ್ರೀಟ್ ರಸ್ತೆಯಾಗಲೀ, ನೀರು ಸರಬರಾಜು ವ್ಯವಸ್ಥೆಯಾಗಲೀ, ಉತ್ತಮ ಆಸ್ಪತ್ರೆ ಸೇರಿದಂತೆ ಯಾವುದೇ ರೀತಿಯ ಮೂಲಭೂತ ಸೌಕರ್ಯ ಇಲ್ಲ. ಎಷ್ಟು ಬಾರಿ ಮನವಿ ಮಾಡಿದರೂ ಸರ್ಕಾರದ ನಿರ್ಲಕ್ಷ್ಯದಿಂದ ಕೆಲಸಗಳು ಆಗುತ್ತಿಲ್ಲ. ಇದಕ್ಕಾಗಿ ತಾನು ಭಾರತಕ್ಕೆ ಪದಕ ಗೆಲ್ಲುವ ಮೂಲಕ ತನ್ನ ಗ್ರಾಮಕ್ಕೆ ಮೂಲಭೂತ ಸೌಕರ್ಯ ತರಬೇಕು ಎಂಬುದು ಲವ್ಲಿನಾ ಆಸೆ.

blank

ಅದರಂತೆಯೇ ಈಗ ಲವ್ಲಿನಾ ಭಾರತಕ್ಕೆ ಕನಿಷ್ಠ ಕಂಚಿನ ಪದಕ ತರುವ ಭರವಸೆ ನೀಡಿದ್ದಾರೆ. ಹೀಗಾಗಿ ಲವ್ಲಿನಾ ತವರಿಗೆ ವಾಪಾಸ್ಸಾಗುವುದರ ಒಳಗೆ ಗ್ರಾಮದ ಪರಿವರ್ತನೆಗೆ ಸರ್ಕಾರ ಕ್ರಮಕೈಗೊಂಡಿದೆ. ಇದರ ಮೊದಲ ಹಂತದ ಭಾಗವಾಗಿ ಬಾರೋ ಮುಖಿಯಾದ ಗ್ರಾಮದಲ್ಲಿ ಚಲಿಸಬಲ್ಲ ರಸ್ತೆ ಕಾಮಗಾರಿ ಶುರು ಮಾಡಲಾಗಿದೆ. ಇದು ನೇರ ಲವ್ಲಿನಾ ಮನೆಗೆ ಸಂಪರ್ಕ ಹೊಂದಿರುತ್ತದೆ. ಈಗ ಮೋಟರೆಬಲ್​​ ರೋಡ್​​ ಹಾಕುತ್ತಿರುವ ಸರ್ಕಾರ ಮುಂದಿನ ದಿನಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ತೆಗೆದುಕೊಂಡಿದೆ. ಲವ್ಲಿನಾ ಗೆಲುವು ಈಗ ತನ್ನ ಗ್ರಾಮವನ್ನು ಬದಲಿಸಿದೆ.

ಇದನ್ನೂ ಓದಿ: ಪದಕ ಗೆಲ್ಲದ್ದಕ್ಕೆ ದೇಶದ ಕ್ಷಮೆ ಕೇಳಿ ಭಾವುಕರಾದ ಬಾಕ್ಸರ್ ಮೇರಿ ಕೊಮ್

ಲೊವ್ಲಿನಾ ಒಲಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲಬೇಕು. ಅವರ ಯಶಸ್ಸು ನಮ್ಮ ಹಳ್ಳಿಯ ಭವಿಷ್ಯವನ್ನು ಬದಲಾಯಿಸಬಹುದು ಎಂದು ಗ್ರಾಮಸ್ಥರ ಆಸೆಯಾಗಿತ್ತು.

Source: newsfirstlive.com Source link