ಸಿಪಾಯಿ ಚಿತ್ರ ನೆನಪಿಸಿದ RRR ಸಾಂಗ್​​ -ಇಲ್ಲಿ ಸ್ನೇಹಜೀವಿ, ಅಲ್ಲಿ ದೋಸ್ತಿ

ಸಿಪಾಯಿ ಚಿತ್ರ ನೆನಪಿಸಿದ RRR ಸಾಂಗ್​​ -ಇಲ್ಲಿ ಸ್ನೇಹಜೀವಿ, ಅಲ್ಲಿ ದೋಸ್ತಿ

ಸ್ನೇಹಿತರ ದಿನಾಚರಣೆಯ ಉಡುಗೊರೆಯಾಗಿ ಟಾಲಿವುಡ್​ ನಿರ್ದೇಶಕ ಎಸ್​​ಎಸ್​ ರಾಜಮೌಳಿ, ಆರ್​ಆರ್​ಆರ್​ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ಪ್ಯಾನ್​ ಇಂಡಿಯಾ ಸಿನಿಮಾವಾಗಿ ತೆರೆಗೆ ತರಲು ಆರ್​​ಆರ್​​ಆರ್ ಚಿತ್ರತಂಡ ಸಿದ್ಧತೆ ನಡೆಸುತ್ತಿದ್ದು, ಇದರ ಭಾಗವಾಗಿಯೇ ರಾಜಮೌಳಿ ಸಿನಿಮಾ ಹಾಡನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಕನ್ನಡ ಅವತರಣಿಕೆಯ ದೋಸ್ತಿ ಹೆಸರಿನ ಹಾಡು ಸಿನಿ ಅಭಿಮಾನಿಗಳ ಮನಗೆದ್ದಿದೆ. ಈ ನಡುವೆಯೇ ಕನ್ನಡ ಚಿತ್ರರಂಗದಲ್ಲಿ ಸ್ನೇಹವನನು ಸಾರುವ ರವಿಚಂದ್ರನ್​ ಅವರ ಸಿಪಾಯಿ ಸಿನಿಮಾದ ಸ್ನೇಹ ಜೀವಿ ಹಾಡನ್ನು ಕನ್ನಡಿಗರಿಗೆ ನೆನಪಿಸುತ್ತಿದೆ.

blank

ಹೌದು, ರಾಜಮೌಳಿ ಅವರು ದೋಸ್ತಿ ಹಾಡು ಸ್ನೇಹದ ಪ್ರಾಮುಖ್ಯತೆಯನ್ನು ಸಾರುತ್ತಿದ್ದು, ಇದಕ್ಕೆ ತಕ್ಕಂತೆ ಟಾಲಿವುಡ್​​ ಬಿಗ್​ ಸ್ಟಾರ್​ಗಳಾದ ಜು.ಎನ್​​ಟಿಆರ್​​ ಹಾಗೂ ರಾಮ್​​ ಚರಣ್ ಅವರ ನಡುವಿನ ಸ್ನೇಹವನ್ನು ಹಾಡಿನಲ್ಲಿ ವರ್ಣಿಸಲಾಗಿದೆ. ಅಲ್ಲದೇ ಹಾಡಿನ ಕೊನೆಯ ಭಾಗದಲ್ಲಿ ರಾಮ್​ ಚರಣ್​, ಜು.ಎನ್​​​ಟಿಆರ್​ ಒಟ್ಟಿಗೆ ನಡೆದುಕೊಂಡು ಬರುವ ಸನ್ನಿವೇಶ ಅಭಿಮಾನಿಗಳಲ್ಲಿ ರೋಮಾಂಚನವಾದ ಅನುಭವವನ್ನು ಮೂಡಿಸುತ್ತದೆ. ಸಂಗೀತ ನಿದೇಶಕ ಎಂ.ಎಂ.ಕೀರವಾಣಿ ಭುಜದ ಮೇಲೆ ಕೈ ಹಾಕಿ ಇಬ್ಬರು ಸ್ಟಾರ್ ನಟರು ಪೋಸ್​​ ಕೊಟ್ಟಿದ್ದು, ಈ ದೃಶ್ಯಗಳು ಸ್ನೇಹ ಜೀವಿ ಹಾಡನ್ನು ಒಮ್ಮೆ ಕನ್ನಡದ ಸಿನಿ ಅಭಿಮಾನಿಗಳಿಗೆ ನೆನಪಿಸುತ್ತದೆ.

blank

1996ರಲ್ಲಿ ಬಿಡುಗಡೆಯಾಗಿದ್ದ ಸಿಪಾಯಿ ಸಿನಿಮಾದ ಸ್ನೇಹಜೀವಿ ಹಾಡಿನಲ್ಲಿ ನಟ ಕ್ರೇಜಿಸ್ಟಾರ್ ರವಿಚಂದ್ರನ್​ ಹಾಗೂ ಟಾಲಿವುಡ್​ ಮೆಗಾಸ್ಟಾರ್​​ ಚಿರಂಜೀವಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಚಿರಂಜೀವಿ ಅವರು ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಏಕೈಕ ಸಿನಿಮಾ ಕೂಡ ಇದಾಗಿದೆ. ಇನ್ನು ಸ್ನೇಹ ಪ್ರಾಮುಖ್ಯತೆ ಹೇಳುವ ಸಾಹಿತ್ಯವನ್ನು ಎರಡು ಹಾಡುಗಳು ಹೊಂದಿದೆ. ವಿಶೇಷ ಎಂದರೆ.. ಸ್ನೇಹಜೀವಿ ಹಾಡಿನಲ್ಲಿ ಬಳಕೆ ಮಾಡಿದ್ದ ಎರಡು ಕೈಗಳ ಮುದ್ರೆಯಂತೆಯೇ ದೋಸ್ತಿ ಹಾಡಿನಲ್ಲೂ ಸಿಂಬಲ್​​​ಅನ್ನು ಬಳಕೆ ಮಾಡಲಾಗಿದೆ.
ಉಳಿದಂತೆ ದೋಸ್ತಿ ಹಾಡಿನ್ನು ಐದು ಭಾಷೆಗಳಲ್ಲಿ ನೀಡಲು ನಿರ್ದೇಶಕ ರಾಜಮೌಳಿ, ಐದು ಭಾಷೆಗಳಿಂದ ಐವರು ಗಾಯಕರನ್ನು ಕರೆತಂದಿದ್ದಾರೆ. ಯಾಝಿನ್ ನಿಜಾರ್, ಅನಿರುದ್ಧ್​​, ಅಮಿತ್​ ತ್ರಿವೇದಿ, ವಿಜಯ್​ ಯೇಸುದಾಸ್​ ಹಾಗೂ ಹೇಮಚಂದ್ರ ಹಾಡನ್ನು ಹಾಡಿದ್ದಾರೆ. ಸಾಂಗ್ ಬಿಡುಗಡೆಯಾದ ಕೆಲ ಗಂಟೆಯಲ್ಲಿ 1.40 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದುಕೊಂಡಿದ್ದು, ಟಾಂಪ್​ ಟ್ರೆಂಡಿಂಗ್​​ನಲ್ಲೂ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ: 5 ಭಾಷೆಗಳಲ್ಲಿ ರಿಲೀಸ್ ಆಗೇ ಬಿಡ್ತು RRR ದೋಸ್ತಿ ಹಾಡು.. ಕನ್ನಡದ ಲಿರಿಕ್ಸ್​ಗೆ ರಾಜಮೌಳಿ ಫ್ಯಾನ್ಸ್​ ಫಿದಾ​

Source: newsfirstlive.com Source link