ರಾತ್ರೋರಾತ್ರಿ 150ಕ್ಕೂ ಹೆಚ್ಚು ರೌಡಿಶೀಟರ್​​ಗಳ ಮನೆಯ ಕದ ತಟ್ಟಿದ ಪೊಲೀಸರು..

ರಾತ್ರೋರಾತ್ರಿ 150ಕ್ಕೂ ಹೆಚ್ಚು ರೌಡಿಶೀಟರ್​​ಗಳ ಮನೆಯ ಕದ ತಟ್ಟಿದ ಪೊಲೀಸರು..

ಬೆಂಗಳೂರು: ಗ್ರಾಮಾಂತರ ನೆಲಮಂಗಲ ಉಪ ಭಾಗದ ವ್ಯಾಪ್ತಿಯ ರೌಡಿಶೀಟರ್​ಗಳ ಮನೆಗಳ ಮೇಲೆ ತಡರಾತ್ರಿ ಪೊಲೀಸರು ದಾಳಿ ನಡೆಸಿದ್ದಯ, ಪರಿಶೀಲನೆ ನಡೆಸಿ ಕುಖ್ಯಾತ ರೌಡಿಶೀಟರ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ನೆಲಮಂಗಲ ಉಪ ಭಾಗದಲ್ಲಿ ಅಪರಾಧ ಪ್ರಕರಣ ಹೆಚ್ಚಾದ ಹಿನ್ನಲೆ ದಾಳಿ ನಡೆಸಿರುವುದಾಗಿ ತಿಳಿಸಿದ ಪೊಲೀಸರು, ನೆಲಮಂಗಲ ಉಪ ವಿಭಾಗದ 5 ಠಾಣಾ ವ್ಯಾಪ್ತಿಯ 150 ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಕಡಬಗೆರೆ ಶ್ರೀನಿವಾಸ್ ಅಲಿಯಾಸ್​ ಸೀನಾ, ಬೆತ್ತನಗೆರೆ ಮಂಜ, ಮಾಚೋಹಳ್ಳಿಯ ರಾಘವೇಂದ್ರ ಅಲಿಯಾಸ್​ ಹಂಡೆ ರಘು, ದಿಲೀಪ್ ಸೇರಿದಂತೆ ಹಲವಾರು ರೌಡಿಶೀಟರ್​ಗಳನ್ನು ವಶಕ್ಕೆ ಪಡೆದಿದ್ದಾರೆ.

blank

ಮಾದನಾಯಕನಹಳ್ಳಿ, ನೆಲಮಂಗಲ ಟೌನ್, ನೆಲಮಂಗಲ ಗ್ರಾಮಾಂತರ, ದಾಬಸ್ ಪೇಟೆ, ತ್ಯಾಮಗೊಂಡ್ಲು ಸೇರಿದಂತೆ 5 ಠಾಣೆಯಿಂದ ವಶಕ್ಕೆ ತೆಗೆದುಕೊಂಡ ರೌಡಿಶೀಟರ್​ಗಳನ್ನು ನೆಲಮಂಗಲ ನಗರ ಕ್ರೀಡಾಂಗಣದಲ್ಲಿ ರೌಡಿ ಪರೇಡ್ ನಡೆಸಲಾಗಿದ್ದು, ರೌಡಿಶೀಟರ್​ಗಳ ಮನೆಯಲ್ಲಿ ಇನ್ನೂ ಶೋಧ ಮುಂದುವರೆದಿದ್ದಾಗಿ ನ್ಯೂಸ್​​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಇಂದಿನಿಂದ ಬೆಂಗಳೂರಿನಲ್ಲಿ ನೈಟ್​ ಕರ್ಫ್ಯೂ -ಅನಗತ್ಯವಾಗಿ ಓಡಾಡಿದ್ರೆ ಬೀಳುತ್ತೆ ಕೇಸ್​.. ಯಾವುದಕ್ಕೆಲ್ಲ ವಿನಾಯಿತಿ?

Source: newsfirstlive.com Source link