ರುಚಿಯಾದ ಹಂಚಿನ ದೋಸೆ ಮಾಡುವ ಸುಲಭ ವಿಧಾನ

ರಾವಳಿ ಭಾಗದಲ್ಲಿ ಓಡು ದೋಸೆ(ಓಡ್ಪಾಲೆ) ತುಂಬಾನೇ ಫೇಮಸ್. ಇದನ್ನು ಯಾವುದೇ ರೀತಿಯ ಎಣ್ಣೆಯನ್ನು ಬಳಸದೆ ಬರೀ ಮಣ್ಣಿನ ಕಾವಲಿಯ ಮೇಲೆ ಮಾಡಲಾಗುತ್ತದೆ. ನಿಮ್ಮಲ್ಲಿ ಮಣ್ಣಿನ ಕಾವಲಿ ಇಲ್ಲವೆಂದಲ್ಲಿ ಕಬ್ಬಿಣದ ಹಂಚಿನಲ್ಲೂ ಮಾಡಬಹುದು.

ಬೇಕಾಗುವ ಸಾಮಗ್ರಿಗಳು:
ದೋಸೆ ಅಕ್ಕಿ- 3 ಕಪ್
ಉಪ್ಪು- ರುಚಿಗೆ ತಕ್ಕಷ್ಟು
ತೆಂಗಿನ ತುರಿ- ಒಂದೂವರೆ ಕಪ್ ಇದನ್ನೂ ಓದಿ: ಬಿಸಿಬಿಸಿಯಾಗಿ ಮಾಡಿ ಸವಿಯಿರಿ ಪುಂಡಿ

ಮಾಡುವ ವಿಧಾನ:
* ಹಿಂದಿನ ದಿನ ರಾತ್ರಿಯೇ ಅಕ್ಕಿಯನ್ನು ನೀರಿನಲ್ಲಿ ನೆನೆ ಹಾಕಿ.
* ಹೀಗೆ ನೆನೆಸಿಟ್ಟ ಅಕ್ಕಿಯನ್ನು ತೊಳೆದು ಅದರ ಜೊತೆ ಕಾಯಿತುರಿ ಹಾಕಿ ನೀರು ಹಾಕಿ ನುಣ್ಣಗೆ ರುಬ್ಬಿ.
* ಬಳಿಕ ದೋಸೆಹಿಟ್ಟನ್ನು ನೀರು ಹಾಕಿ ಸ್ವಲ್ಪ ತೆಳ್ಳಗೆ(ನೀರು ದೋಸೆ ಹಿಟ್ಟಷ್ಟು ಅಲ್ಲ) ಮಾಡಿ ನಂತರ ರುಚಿಗೆ ತಕ್ಕೊಕಷ್ಳ್ಳಿಟು ಉಪ್ಪು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಇತ್ತ ಮಣ್ಣಿನ ಕಾವಲಿ (ಮಧ್ಯದಲ್ಲಿ ಸ್ವಲ್ಪ ಆಳವಿರೋ) ಅಥವಾ ಕಬ್ಬಿಣದ ಕಾವಲಿಯನ್ನು ಒಲೆಯ ಮೇಲೆ ಬಿಸಿಯಾಗಲು ಇಡಿ.
* ಕಾವಲಿ ಬಿಸಿಯಾದ ಬಳಿಕ ಒಂದು ಸೌಟಿನಲ್ಲಿ ರುಬ್ಬಿಟ್ಟ ಹಿಟ್ಟನ್ನು ತೆಗೆದುಕೊಂಡು ಅದನ್ನು ಕಾವಲಿಯ ಮಧ್ಯಭಾಗದಲ್ಲಿ ಹಾಕಬೇಕು. ಕಾವಲಿಯ ಮಧ್ಯದಲ್ಲಿ ಸ್ವಲ್ಪ ಆಳ ಇರುವುದರಿಂದ ದೋಸೆ ಮಧ್ಯದಲ್ಲಿಯೇ ದಪ್ಪನೆ ಇದ್ದು ಅಂಚಿನಲ್ಲಿ ತೆಳ್ಳಗೆ ಇರುತ್ತದೆ. ಇದನ್ನೂ ಓದಿ: ಮಧ್ಯಾಹ್ನ ಊಟಕ್ಕೆ ಮಾಡಿ ಬಿಸಿ, ಬಿಸಿ ಫಿಶ್ ಕಬಾಬ್

blank

* ಈ ದೋಸೆಯನ್ನು ತಿರುವಿ ಹಾಕಬೇಡಿ. ಒಂದು ಕಡೆ ಮಾತ್ರ ಚೆನ್ನಾಗಿ ಬೇಯಿಸಿ ತೆಗೆಯಿರಿ.
* ಇದಾದ ಬಳಿಕ ಇನ್ನೊಂದು ದೋಸೆ ಹಾಕುವ ಮುನ್ನ ಒಂದು ಒದ್ದೆ ಬಟ್ಟೆಯಿಂದ ಕಾವಲಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ.
* ಈ ಬಿಸಿ ಬಿಸಿ ದೋಸೆಯನ್ನು ನಿಮಗೆ ಇಷ್ಟವಾಗಿರುವ ಚಟ್ನಿ ಜೊತೆ ಸವಿಯಿರಿ.

Source: publictv.in Source link