ಪೊಲೀಸ್ನವ್ರು ಬರ್ಬೇಕು ಪ್ರಶಾಂತ್​​ ಮೊಬೈಲ್​ ಸೀಜ್​ ಮಾಡ್ಬೇಕು.. ಚಕ್ರವರ್ತಿ ಹೀಗೆ ಹೇಳಿದ್ದು ಯಾಕೆ?

ಪೊಲೀಸ್ನವ್ರು ಬರ್ಬೇಕು ಪ್ರಶಾಂತ್​​ ಮೊಬೈಲ್​ ಸೀಜ್​ ಮಾಡ್ಬೇಕು.. ಚಕ್ರವರ್ತಿ ಹೀಗೆ ಹೇಳಿದ್ದು ಯಾಕೆ?

ಪ್ರಶಾಂತ್​ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್​ರವರ ಗೆಳೆತನ ಬಿಗ್​ ಬಾಸ್​ ಮನೆಯೊಳಗೆ ಹೇಗಿತ್ತು ಅನ್ನೋದು ಎಲ್ಲರಿಗೂ ಗೊತ್ತು. ಅವ್ರಿಬ್ಬರ ಮಾತುಗಳು, ಅವರಿಬ್ಬರ ಒಪ್ಪಂದಗಳೂ, ಅವರಿಬ್ಬರ ಯೋಚನೆಗಳೇ ಹೇಳುತ್ತೆ, ಅವರಿಬ್ಬರ ಗೆಳತನ ಎಷ್ಟು ಸ್ಟ್ರಾಂಗ್​ ಅನ್ನೋದು ಗೊತ್ತಾಗುತ್ತೆ. ಆದ್ರೆ, ಇದೀಗ, ಚಕ್ರವರ್ತಿ ಹೊರಗ್​ ಬಂದಿದ್ದು, ನ್ಯೂಸ್​ಫಸ್ಟ್​ ಜೊತೆ ಮಾತನಾಡುವಾಗ, ಇದೇ ಪ್ರಶಾಂತ್​ ಸಂಬರ್ಗಿ ಬಗ್ಗೆ ಏನ್ ಹೇಳಿದ್ದಾರೆ?

ಕನ್ನಡಿಗ ಅನ್ನೋ ಪ್ರಶಾಂತ್​ ಸಂಬರ್ಗಿಗೆ ‘ನ’ ‘ಣ’ ‘ಅ’ ‘ಹ’ಕಾರ ಬರೋದಿಲ್ಲ

ಬಿಗ್​ ಬಾಸ್​ ಮನೆಯಲ್ಲಿ ಒಮ್ಮೆ ಪ್ರಶಾಂತ್​ ಸಂಬರ್ಗಿ ತಾನು, ಕಿತ್ತೂರು ರಾಣಿ ಚೆನ್ನಮ್ಮರ ಮೊಮ್ಮಗ, ತಾನು ವೀರ ಕನ್ನಡಿಗ ಅಂತ ಹೇಳಿದ್ರು. ಈ ಬಗ್ಗೆ ನ್ಯೂಸ್​ಫಸ್ಟ್​ನಲ್ಲಿ ಮಾತನಾಡಿದ ಚಕ್ರವರ್ತಿ, ಈ ಬಗ್ಗೆ ಪ್ರಶಾಂತ್​ ಬಳಿ ನಾನು ಉತ್ತರವನ್ನ ಕೋರ್ಟ್​ನಲ್ಲಿ ಕೇಳ್ತೀನಿ ಅಂತ ಹೇಳಿದ್ದಾರೆ. ಅಲ್ಲದೇ, ದಾಖಲಾತಿಗಳಿಲ್ಲದೇ, ಈ ರೀತಿ ಹೇಳ್ಬಾರ್ದು. ಅದೂ, ಚೆನ್ನಾಗಿರಲ್ಲ ಅಂತ ಹೇಳಿದ್ರು.

ಗಂಡಸು ಅತ್ತರೆ ಭಯ ಆಗುತ್ತೆ ನಂಗೆ.. 

ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ಅತ್ತಿರೋದು ಅಂದ್ರೆ ಅದು ಒನ್​ ಌಂಡ್​ ಓನ್ಲೀ ಪ್ರಶಾಂತ್​ ಸಂಬರ್ಗಿ. ಪ್ರತಿಯೊಂದಕ್ಕೂ ಪ್ರಶಾಂತ್​ ಸಂಬರ್ಗಿ ಅಳ್ತಾರೆ. ಅದ್ಯಾಕ್​ ಅಳ್ತಾರೆ ನನಗೂ ಗೊತ್ತಿಲ್ಲ. ಒಮ್ಮೆ ಹೀಗೇ, ಪ್ರಶಾಂತ್​ ಬಂದು ಯಾಕೆ ನಾನು ಇಷ್ಟ್​ ಅಳ್ತೀನಿ ಅಂತ ಕೇಳಿದ್ರು, ನಾನು.. ನಿನ್ಗೆ ಅಳು ಬಂದ್ರೆ ಅಳು ಅಂತ ಹೇಳಿ ಸುಮ್ನಾಗಿಬಿಟ್ಟೆ. ನನಗೆ ಗಂಡಸರು ಅತ್ತರೆ ತುಂಬಾ ಭಯ ಆಗುತ್ತೆ ಅಂತ ಹೇಳಿದ್ರು.

ಇನ್ನೂ, ಇದೇ ವೇಳೆ, ಸ್ಟ್ರಾಟಜಿಗೋಸ್ಕರ ಹೀಗೆ ಆಡ್ತಾಯಿದ್ದಾರೆ ಏನೋ ನನಗೆ ಗೊತ್ತಿಲ್ಲ ಅಂತ ಹೇಳಿದ್ರು. ಇದಕ್ಕೆಲ್ಲಾ, ಮೊದಲ ಇನ್ನಿಂಗ್ಸ್​ನಿಂದ ಹೊರ ಬಂದಾದ್ಮೇಲೆ, ಪ್ರಶಾಂತ್​ ಮಾಡಿಕೊಂಡಿದ್ದ ಪ್ರಿಪರೇಷನ್​​ ನೋಡಿದ್ರೆ ಹೀಗೆ ಅಂತ ಅನ್ನಿಸ್ತಾಯಿದೆ ಅಂತ ಹೇಳಿದ್ರು. ಆದ್ರೆ, ಯಾವ ಪ್ರಿಪರೇಷನ್​ ಅನ್ನೋದನ್ನ ಅವ್ರು ಹೇಳಲಿಲ್ಲ. ಹೀಗಾಗಿ, ಚಕ್ರವರ್ತಿ ಪ್ರಶಾಂತ್​ರವರ ಫೋನ್​ನನ್ನ ಸೀಜ್​ ಮಾಡಿಸಿ, ರಿಟ್ರೀವ್​ ಮಾಡುಸ್ತೀನಿ ಅಂತ ಹೇಳಿದ್ದಾರೆ.

Source: newsfirstlive.com Source link