ಆ ಒಂದು ತಪ್ಪಿನಿಂದ ಮಂಕಾದ್ರಾ ಕ್ಯಾಪ್ಟನ್ ಕೊಹ್ಲಿ? ಇಂಗ್ಲೆಂಡ್​​ನಲ್ಲಾದ್ರು ಫ್ಯಾನ್ಸ್​ಗೆ ಸಿಗುತ್ತಾ ಸೆಂಚುರಿ ಟ್ರೀಟ್?

ಆ ಒಂದು ತಪ್ಪಿನಿಂದ ಮಂಕಾದ್ರಾ ಕ್ಯಾಪ್ಟನ್ ಕೊಹ್ಲಿ? ಇಂಗ್ಲೆಂಡ್​​ನಲ್ಲಾದ್ರು ಫ್ಯಾನ್ಸ್​ಗೆ ಸಿಗುತ್ತಾ ಸೆಂಚುರಿ ಟ್ರೀಟ್?

ಇಂಗ್ಲೆಂಡ್​​ ವಿರುದ್ಧದ ಸರಣಿಗೆ ಕೌಂಟ್​​ಡೌನ್​ ಸ್ಟಾರ್ಟ್​​ ಆಗೋದ್ರ ಜೊತೆಗೆ ಶತಕದ ಬರವನ್ನ ಕೊಹ್ಲಿ ನೀಗಿಸಿಕೊಳ್ತಾರಾ..? ಅನ್ನೋ ಕುತೂಹಲಭರಿತ ಪ್ರಶ್ನೆಯೂ ಹುಟ್ಟಿಕೊಂಡಿದೆ. ಹಾಗಾದ್ರೆ, ಆಂಗ್ಲರ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಸೆಂಚುರಿ ಸಿಡಿಸಿಲು ಕೊಹ್ಲಿಗೆ ಉತ್ತಮ ಅವಕಾಶನಾ..?

ವಿರಾಟ್​​ ಕೊಹ್ಲಿ..! ಕ್ರಿಕೆಟ್​​ನಲ್ಲಿ ಸಕ್ರಿಯವಾಗುವಾಗ್ಲೇ ಲೆಜೆಂಡ್​​ ಎನ್ನಿಸಿಕೊಂಡಿರುವ ಆಟಗಾರ. ಕ್ರಿಸ್​ ಕಚ್ಚಿ ನಿಂತ್ರೆ ಎದುರಾಳಿ ಯಾರು..? ಪಿಚ್​ ಯಾವುದು..? ಬೌಲರ್​​ ಯಾರು..? ಅನ್ನೋ ಪ್ರಶ್ನೆಗಳೇ ಬರಲ್ಲ. ಬಾಲ್​ ಇರೋದೆ ದಂಡಿಸೋಕೆ ಅನ್ನೋ ಮನಸ್ಥಿತಿಯಲ್ಲಿ ಬ್ಯಾಟ್​​ ಬೀಸೋದು, ರನ್ ಕಲೆ ಹಾಕೋದು ಅಷ್ಟೇ ಅಂಗಳಕ್ಕಿಳಿದಾಗ ವಿರಾಟ್​​ ಕೊಹ್ಲಿ ಮನಸ್ಥಿತಿ.

blank

ಪದಾರ್ಪಣೆ ಮಾಡಿದ ದಶಕದ ಅವಧಿಯಲ್ಲೇ ರನ್​ ಕೊಳ್ಳೆ ಹೊಡೆದ ವಿರಾಟ್​, ದಿಗ್ಗಜರ ದಾಖಲೆಗಳನ್ನೆಲ್ಲಾ ಪುಡಿಗಟ್ಟಿದ್ರು. ಈ ಕಾರಣದಿಂದಲೇ ಸಚಿನ್​ ತೆಂಡುಲ್ಕರ್​ರ 100 ​ಶತಕ ಸಿಡಿಸಿರುವ ದಾಖಲೆಯನ್ನೂ ಕೊಹ್ಲಿ ಮುರಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ವು. ಆದ್ರೆ ಈಗ ಅದು ಸಾಧ್ಯವಿಲ್ಲ ಅನ್ನೋ ನಿರ್ಧಾರಕ್ಕೆ ಹಲವರು ಬಂದು ಬಿಟ್ಟಿದ್ದಾರೆ. ಕಾರಣ, ಕಳೆದ 2 ವರ್ಷಗಳಿಂದ ಕೊಹ್ಲಿ ಎದುರಿಸ್ತಾ ಇರೋ ಶತಕದ ಬರ, ಹಾಗೆ ಮಾಡಿದೆ.

blank

ಹಾಗಾದ್ರೆ ಕೊಹ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸ್ತಾ ಇದ್ದಾರಾ..? ಇದಕ್ಕೆ ಉತ್ತರ ಖಂಡಿತ ಇಲ್ಲಾ ಅನ್ನೋದೆ ಆಗಿದೆ. ಯಾಕಂದ್ರೆ ಕೊನೆಯ ಶತಕ ಸಿಡಿಸಿದ ಬಳಿಕ 46 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಮಾಡಿರೋ ಕೊಹ್ಲಿ, 42.57ರ ಸರಾಸರಿಯಲ್ಲೇ ರನ್​ ಕಲೆ ಹಾಕಿದ್ದಾರೆ. 17 ಅರ್ಧಶತಕಗಳನ್ನೂ ಸಿಡಿಸಿದ್ದಾರೆ. ಆದ್ರೆ ಅರ್ಧಶತಕವನ್ನ ಶತಕವನ್ನಾಗಿ ಬದಲಾಯಿಸುವಲ್ಲಿ ವಿಫಲರಾಗಿದ್ದಾರಷ್ಟೇ..!

ಕೊನೆಯ ಶತಕ ಸಿಡಿಸಿದಾಗ 63.64 ರಷ್ಟಿದ್ದ ಕೊಹ್ಲಿಯ 50 ಟು 100 CONVERSION ರೇಟ್,​ ಇದೀಗ 28.57ಕ್ಕೆ ಇಳಿದೆ. ಈ ಒಂದು ಅಂಶವೇ ಕೊಹ್ಲಿಯ ಶತಕದ ಬರಕ್ಕೆ ಕಾರಣವಾಗಿದೆ. ಈ ತಪ್ಪನ್ನ ತಿದ್ದಿಕೊಂಡು ಸತತ ನಿರಾಸೆ ಅನುಭವಿಸಿರೋ ಅಭಿಮಾನಿಗಳಿಗೆ, ಇಂಗ್ಲೆಂಡ್​​ ಸರಣಿಯಲ್ಲಿ ವಿರಾಟ್​, ಸೆಂಚುರಿ ಟ್ರೀಟ್​ ನೀಡ್ತಾರಾ ಕಾದು ನೋಡಬೇಕಿದೆ.

Source: newsfirstlive.com Source link