CBSE 10ನೇ ತರಗತಿ ಫಲಿತಾಂಶ ಪ್ರಕಟ -ಶೇ.99.04 ರಷ್ಟು ವಿದ್ಯಾರ್ಥಿಗಳು ಪಾಸ್​

CBSE 10ನೇ ತರಗತಿ ಫಲಿತಾಂಶ ಪ್ರಕಟ -ಶೇ.99.04 ರಷ್ಟು ವಿದ್ಯಾರ್ಥಿಗಳು ಪಾಸ್​

ನವದೆಹಲಿ: ಸಿಬಿಎಸ್​​ಸಿ 10ನೇ ತರಗತಿಯ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆ ತೆಗೆದುಕೊಂಡಿದ್ದವರಲ್ಲಿ ಶೇ.99.04 ರಷ್ಟು ವಿದ್ಯಾರ್ಥಿಗಳು ಪಾಸ್​ ಆಗಿದ್ದಾರೆ. ಪರೀಕ್ಷೆಗಳನ್ನು ರದ್ದುಗೊಳಿಸಿದ್ದ ಕಾರನ ವಿದ್ಯಾರ್ಥಿಗಳ ಯೂನಿಟ್​ ಟೆಸ್ಟ್​​, ಪ್ರಿ ಬೋರ್ಡ್​ ಎಕ್ಸಾಂ, ಮೆಡ್​-ಟರ್ಮ್​​ ಪರೀಕ್ಷೆಗಳ ಫಲಿತಾಂಶಗಳ ಆಧಾರದ ಮೇಲೆ ಬೋರ್ಟ್​ ಫಲಿತಾಂಶ ಪ್ರಕಟಿಸಿದೆ.

ಕಳೆದ ವರ್ಷ ಶೇ.91.46 ರಷ್ಟಿದ್ದ ಪರೀಕ್ಷಾ ಫಲಿತಾಂಶ ಈ ಬಾರಿ ಶೇ.8ರಷ್ಟು ಹೆಚ್ಚಾಗಿದೆ. 21.5 ಲಕ್ಷ ವಿದ್ಯಾರ್ಥಿಗಳಲ್ಲಿ 16,639 ವಿದ್ಯಾರ್ಥಿಗಳ ಫಲಿತಾಂಶ ನೀಡುವ ಪ್ರತಿಕ್ರಿಯನ್ನು ಬೋರ್ಡ್​ ನಡೆಸುತ್ತಿದ್ದು, ಸದ್ಯ 21 ಲಕ್ಷ ವಿದ್ಯಾರ್ಥಿಗಲು ತಮ್ಮ ಫಲಿತಾಂಶವನ್ನು ಡೌನ್​​ಲೋಡ್ ಮಾಡಿಕೊಳ್ಳಬಹುದಾಗಿದೆ. ಇನ್ನು ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದ 26,841 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿಲ್ಲ. cbse.nic.in ವೆಬ್​​ಸೈಟ್​​ ಗೆ ಭೇಟಿ ನೀಡಿ ವಿದ್ಯಾರ್ಥಿಗಳು ಫಲಿತಾಂಶ ಪಡೆಯಬಹುದಾಗಿದೆ.

Source: newsfirstlive.com Source link