ಟೆಸ್ಟ್​ ಸರಣಿಗೂ ಮುನ್ನವೇ ಪೂಜಾರಗೆ ನಡುಕ.. ಮಿಸ್ಟರ್​ ಡಿಪೆಂಡಬಲ್​​ಗೆ ಕಂಟಕರಾದ್ರಾ ಕನ್ನಡಿಗ?

ಟೆಸ್ಟ್​ ಸರಣಿಗೂ ಮುನ್ನವೇ ಪೂಜಾರಗೆ ನಡುಕ.. ಮಿಸ್ಟರ್​ ಡಿಪೆಂಡಬಲ್​​ಗೆ ಕಂಟಕರಾದ್ರಾ ಕನ್ನಡಿಗ?

ಟೀಮ್ ಇಂಡಿಯಾ ಟೆಸ್ಟ್​ ತಂಡದ ಆಪತ್ಭಾಂದವ ಚೇತೇಶ್ವರ ಪೂಜಾರ.. ಒತ್ತಡಕ್ಕೆ ಒಳಗಾಗದೇ ಬ್ಯಾಟ್​ ಬೀಸೋದು ಆತನ ಬಲ.. ಆದ್ರೆ ಪೂಜಾರ, ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಒತ್ತಡಕ್ಕೆ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದಾನೆ. ಇದಕ್ಕೆ ಕಾರಣವಾಗಿರೋದು ಕನ್ನಡಿಗ ಕೆ.ಎಲ್.ರಾಹುಲ್​.

ಶ್ರೀಲಂಕಾ ಪ್ರವಾಸದ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳ ಫೋಕಸ್, ಇಂಡೋ-ಇಂಗ್ಲೆಂಡ್ ಟೆಸ್ಟ್​ ಸರಣಿ ಮೇಲೆ ನೆಟ್ಟಿದೆ. ಕಳೆದ ಸರಣಿ ಸೋತ ಅತಿಥೇಯ ಇಂಗ್ಲೆಂಡ್, ಕಮ್​​ಬ್ಯಾಕ್ ಮಾಡೋ ಲೆಕ್ಕಾಚಾರದಲ್ಲಿದೆ. ಇತ್ತ ಟೆಸ್ಟ್ ಚಾಂಪಿಯನ್ ​ಸೋತ ಟೀಮ್ ಇಂಡಿಯಾ, ಮತ್ತೆ ಇಂಗ್ಲೆಂಡ್​ ಸರಣಿ ಗೆಲ್ಲುವ ಛಲದೊಂದಿಗೆ ಕಣಕ್ಕಿಳಿಯುತ್ತಿದೆ. ಇದರೊಂದಿಗೆ 2021-23ರ ಟೆಸ್ಟ್​ ಚಾಂಪಿಯನ್​ಶಿಪ್​ ಶುಭಾರಂಭದ ಕನಸು ಕಾಣ್ತಿದೆ. ಆದ್ರೆ ಟೀಮ್ ಇಂಡಿಯಾದ ಟೆಸ್ಟ್​ ಸ್ಪೆಷಲಿಸ್ಟ್ ಪೂಜಾರ ಮಾತ್ರ, ಆಡುವ ಹನ್ನೊಂದರಲ್ಲಿ ಸ್ಥಾನ ಸಿಗುತ್ತಾ ಇಲ್ವಾ ಎಂಬ ಒತ್ತಡಕ್ಕೆ ಸಿಲುಕಿದ್ದಾರೆ.

blank

ಹೌದು..! 2019ರ ಬಳಿಕ ಹೇಳಿಕೊಳ್ಳುವಂತ ಪ್ರದರ್ಶನ ನೀಡದ ಪೂಜಾರ, ಕಳೆದ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​ ಜೊತೆಗೆ ಅಭ್ಯಾಸ ಪಂದ್ಯದಲ್ಲೂ ವೈಫಲ್ಯ ಕಂಡಿದ್ದಾರೆ. ತಮ್ಮ ಸ್ಲೋ ಇನ್ನಿಂಗ್ಸ್​​ನಿಂದ ಪೂಜಾರ, ನಾಯಕ ಕೊಹ್ಲಿ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಇದರಿಂದ ಪೂಜಾರ, ತಂಡದ ಹನ್ನೊಂದರಲ್ಲಿ ಕಾಣಿಸಿಕೊಳ್ಳೋದು, ಅನುಮಾನವಾಗಿದೆ. ಇದಕ್ಕೆ ಪೂರಕ ಎಂಬಂತೆ ಇಂಗ್ಲೆಂಡ್​ನಲ್ಲಿ ಪೂಜಾರ ದಾಖಲಿಸಿರೋ ಅಂಕಿಅಂಶಗಳು..

ಪೂಜಾರಗೆ ಕನ್ನಡಿಗೆ ಕೆ.ಎಲ್.ರಾಹುಲ್ ಥ್ರೆಟ್..!

ಮಿಸ್ಟರ್​ ಡಿಪೆಂಡಬಲ್​​ ಪೂಜಾರ ವೈಫಲ್ಯ, ಕನ್ನಡಿಗ ಕೆ.ಎಲ್.ರಾಹುಲ್​​ಗೆ ವರವಾಗಿ ಮಾರ್ಪಡುತ್ತಿದೆ. ಇಂಗ್ಲೆಂಡ್​ ಕಂಡೀಷನ್ಸ್​ನಲ್ಲಿ ನಾನು ಆಡಬಲ್ಲೇ ಅನ್ನೋದನ್ನ ಫ್ರೂವ್ ಕೂಡ ಮಾಡಿದ್ದಾರೆ. ಹೌದು..! 2018ರಲ್ಲಿ ಇಂಗ್ಲೆಂಡ್​​ ನೆಲದಲ್ಲಿ ಆಡಿದ ಕೊನೆ ಪಂದ್ಯದಲ್ಲಿ 149 ರನ್ ಸಿಡಿಸಿ ಅಬ್ಬರಿಸಿದ್ದ ಕೆ.ಎಲ್.ರಾಹುಲ್, ನಂತರ ಮೊನ್ನೆ ನಡೆದ ಅಭ್ಯಾಸ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಆ ಮೂಲಕ ಲಾಂಗೆಸ್ಟ್ ಫಾರ್ಮೆಟ್​ಗೆ ತಾನು ರೆಡಿ ಎಂಬ ಸಂದೇಶ ರವಾನಿಸಿದ್ದಾರೆ. ಇದೇ ಈಗ ಮಿಸ್ಟರ್ ಡಿಪೆಂಡಬಲ್​​ ಪೂಜಾರಾಗೆ ಸಂಕಷ್ಟಕ್ಕೆ ದೂಡುವಂತೆ ಮಾಡ್ತಿದೆ.

blank

ಪೂಜಾರಗೆ​ ಕೆ.ಎಲ್.ರಾಹುಲ್ ಮಾತ್ರವೇ ಅಲ್ಲ..! ವಿಹಾರಿ ಕೂಡ ಪ್ರತಿಸ್ಪರ್ಧಿಯಾಗಿದ್ದಾರೆ ಅನ್ನೋದನ್ನ ಮರೆಯುವಂತಿಲ್ಲ.. ಟೀಮ್ ಮ್ಯಾನೇಜ್​ಮೆಂಟ್ ಆ್ಯಂಡ್ ವಿರಾಟ್​ ಕೊಹ್ಲಿ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮನಸ್ಥಿತಿ ಬಗ್ಗೆ ಬಹಿರಂಗವಾಗೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಿರಾಟ್ ತಾವೇ ​ ನಂ.3 ಸ್ಲಾಟ್​ನಲ್ಲಿ ಬ್ಯಾಟ್​ ಬೀಸಲು ಸಜ್ಜಾಗಿದ್ದಾರೆ. ಇದು ಸ್ವತಃ ಟೆಸ್ಟ್ ಸ್ಪೆಷಲಿಸ್ಟ್​ ಪೂಜಾರ ಇಕ್ಕಟ್ಟಿಗೆ ಸಿಲುಕುವಂತೆ ಮಾಡ್ತಿರೋದಂತೂ ಸುಳ್ಳಲ್ಲ.

Source: newsfirstlive.com Source link