ಮತ್ತೆ ಕೊರೊನಾಕ್ಕೆ ತತ್ತರಿಸಿದ ಅಮೆರಿಕಾ; ಫ್ಲೋರಿಡಾದಲ್ಲಿ ಒಂದೇ ದಿನದಲ್ಲಿ ದಾಖಲೆ ಕೇಸ್

ಮತ್ತೆ ಕೊರೊನಾಕ್ಕೆ ತತ್ತರಿಸಿದ ಅಮೆರಿಕಾ; ಫ್ಲೋರಿಡಾದಲ್ಲಿ ಒಂದೇ ದಿನದಲ್ಲಿ ದಾಖಲೆ ಕೇಸ್

ಫ್ಲೋರಿಡಾ: ಕೊರೊನಾ ಕೇಸ್​ಗಳು ಇದೀಗ, ಫ್ಲೋರಿಡಾದಲ್ಲಿ ಹೆಚ್ಚಾಗಿದ್ದು ಆಸ್ಪತ್ರೆಗೆ ಅಡ್ಮಿಟ್​ ಆಗ್ತಾಯಿರೋ ಸಂಖ್ಯೆ ಹೆಚ್ಚಿದೆ. ಅಲ್ಲದೇ, ಈ ಡೆಲ್ಟಾ ವೇರಿಯೆಂಟ್ ಸೋಂಕು​ ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಗಡಾಯಿಸಲಿದೆ ಅಂತ ಯುಎಸ್ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ಹೇಳಿದ್ದಾರೆ.  ಏಕೆಂದರೆ, ಫ್ಲೋರಿಡಾದಲ್ಲಿ, ಕಳೆದ ವರ್ಷಕ್ಕೆ ಹೋಲಿಸಿಕೊಂಡ್ರೆ, ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗುತ್ತಿರೋರ ಸಂಖ್ಯೆ ಕಳೆದ ವರ್ಷಕ್ಕಿಂದ ಹೆಚ್ಚಿದೆ. 

ಯುಎಸ್ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯ ಪ್ರಕಾರ, ಭಾನುವಾರ 10,207ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದೆ. ಇನ್ನು ,ಜುಲೈ 23, 2020 ರಂದು 10,170 ಜನ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ರು.ಇನ್ನೂ, ಶೇ.58ರಷ್ಟು ಅಮೆರಿಕನ್ನರಿಗೆ ಲಸಿಕೆ ಹಾಕಿದ್ದರೂ ಡೆಲ್ಟಾ ರೂಪಾಂತರದಿಂದಾಗಿ ಇತ್ತೀಚಿನ ಹೆಚ್ಚು ಕೇಸ್​ಸ್​ಗಳೂ ಉಲ್ಬಣವಾಗುತ್ತಿದೆ. ಫ್ಲೋರಿಡಾ, ಡೆಲ್ಟಾ ಕೇಸ್​ಗೆ ಹಾಟ್​ಸ್ಪಾಟ್ ಆಗಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರೋ ಸಂಖ್ಯೆ ಹೆಚ್ಚಿದೆ.

ದಾಖಲೆ ಏರಿಕೆ

ಶನಿವಾರ, ಫ್ಲೋರಿಡಾದಲ್ಲಿ 21,683 ಹೊಸ ಪ್ರಕರಣಗಳನ್ನ ವರದಿ ಮಾಡಲಾಗಿದೆ. ಇಂದು ಕಳೆದ ವರ್ಷ ಸಾಂಕ್ರಾಮಿಕ ರೋಗವು ಪ್ರಾರಂಭವಾದ ನಂತರ ಅತಿ ಹೆಚ್ಚು ಕೇಸ್​ಗಳು ದಾಖಲಾಗಿದೆ. ಇನ್ನೂ, ಫ್ಲೋರಿಡಾದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ವಾರದಿಂದ ವಾರಕ್ಕೆ ಶೇ50ರಷ್ಟು ಏರಿಕೆಯಾಗುತ್ತಿದೆ. ಡಾ. ಆಂಥೋನಿ ಫೌಸಿ ಪ್ರಕಾರ, ಯುಎಸ್‌ನಲ್ಲಿ ಯಾವುದೇ ಲಾಕ್‌ಡೌನ್ ಇರುವುದಿಲ್ಲ.  ಯಾಕಂದ್ರೆ ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ಹಾಕಲಾಗಿದೆ. ಆದರೆ “ಏಕಾಏಕಿ ಎಲ್ಲವನ್ನ ನಿರ್ಭಂದಿಸಲು ಸಾಕಾಗುವುದಿಲ್ಲ” ಎಂದು ಎಚ್ಚರಿಸಿದ್ದಾರೆ. ಅಲ್ಲದೇ, ಕಳೆದ ವಾರ ಯುಎಸ್ ಆರೋಗ್ಯ ಅಧಿಕಾರಿಗಳು ನಾಗರಿಕರಿಗೆ ಸಂಪೂರ್ಣ ಲಸಿಕೆ ಹಾಕಿದ್ದರೂ ಸಹ ವೈರಸ್ ವೇಗವಾಗಿ ಹರಡುವ ಪ್ರದೇಶಗಳಲ್ಲಿ ಮಾಸ್ಕ್​ ಧರಿಸಲು ಆದೇಶಿಸಿದ್ದಾರೆ.

ಅಷ್ಟೇ ಅಲ್ಲ ಇಲ್ಲಿನ ಹಲವು ನಗರಗಳಲ್ಲಿ ಆಸ್ಪತ್ರೆಗಳ ಬೆಡ್​ ಕೂಡ ಸಿಗದಂಥ ವಾತಾವರಣ ನಿರ್ಮಾಣವಾಗಿದೆ. ಫೈಜರ್ ವ್ಯಾಕ್ಸಿನ್ ಅತಿ ಹೆಚ್ಚಾಗಿ ನೀಡಲಾಗಿರೋ ಅಮೆರಿಕದಾದಲ್ಲಿ ದಿನಂಪ್ರತಿ ಕೇಸ್​​ಗಳಲ್ಲೂ ಹೆಚ್ಚಳವಾಗ್ತಿದೆ. ಕಳೆದ ಒಂದು ವಾರದಲ್ಲಿ ಸರಾಸರಿ ಪ್ರತಿ ದಿನ 1 ಲಕ್ಷ ಹೊಸ ಕೇಸ್​​ಗಳು ದಾಖಲಾಗಿವೆ ಎನ್ನಲಾಗಿದೆ.

Source: newsfirstlive.com Source link