ಪ್ರತಿ ಬಾರಿನೂ ದುರ್ಗಾದೇವಿ ಆಶೀರ್ವಾದ ಮಾಡ್ಕೊಂಡೇ ಬಂದಿದ್ದಾಳೆ: ಕೌರವ

ಹಾವೇರಿ: ಯಾವತ್ತೂ ನಮಗೆ ದುರ್ಗಾ ದೇವತೆ ಆಶೀರ್ವಾದ ಮಾಡಿಕೊಂಡೇ ಬಂದಿದ್ದಾಳೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಬಿ.ಸಿ ಪಾಟೀಲ್ ಅವರು ಇಂದು ಹಾವೇರಿ ಜಿಲ್ಲೆ ಹಿರೇಕರೂರು ಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ಕುಟುಂಬ ಸದಸ್ಯರು ತೆರಳಿ ಪೂಜೆ ಸಲ್ಲಿಸಿದರು. ಪುತ್ರಿ ಹಾಗೂ ಬೆಂಬಲಿಗರ ಜೊತೆ ತೆರಳಿ ದುರ್ಗಾದೇವಿಗೆ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯನವರ ಹೊಗಳಿಕೆ ನಮ್ಮ ಪಕ್ಷಕ್ಕೆ ಅಗತ್ಯ ಇಲ್ಲ: ಬಿ.ಸಿ.ಪಾಟೀಲ್

ಬಳಿಕ ಮಾತನಾಡಿದ ಶಾಸಕರು, ನಾನು ಹಿರೆಕೇರೂರಿಗೆ ಬಂದಾಗಿಂದ ನನ್ನ ಪ್ರತಿ ಚುನಾವಣೆಯ ನಾಮಪತ್ರಕ್ಕೆ ಸಹಿ ಮಾಡಿದ್ದು ದುರ್ಗಾದೇವಿ ದೇವಸ್ಥಾನದಲ್ಲಿ. ಸಮಯ ಸಿಕ್ಕಾಗೆಲ್ಲ ಹಿರೆಕೇರೂರಿಗೆ ಬಂದಾಗೆಲ್ಲ ದೇವಸ್ಥಾನಕ್ಕೆ ಹೋಗಿ ಬರ್ತಿದ್ದೆ. ಅದರಂತೆ ಇಂದು ಕೂಡ ದೇವಸ್ಥಾನಕ್ಕೆ ಹೋಗಿ ದೇವಿ ಆಶೀರ್ವಾದ ಪಡೆದುಕೊಂಡು ಬಂದಿರುವೆ ಎಂದರು.

ನಾನು ಆಶಾದಾಯಕ, ಯಾವಾಗ್ಲೂ ಒಳ್ಳೆಯದಾಗುತ್ತೆ ಅಂತಾ ಬಯಸುವವನು. ಒಳ್ಳೆಯದಾಗುತ್ತೆ ಅಂತಾ ಭರವಸೆ ಇದೆ, ಹಾಗೆಯೇ ಭರವಸೆ ಇಟ್ಟುಕೊಳ್ಳುವಂಥವನು. ಸಚಿವ ಸ್ಥಾನ ನೋಡೋಣ ಕಾದು ನೋಡೋಣ. ಯಾವತ್ತೂ ನಮಗೆ ದುರ್ಗಾ ದೇವತೆ ಆಶೀರ್ವಾದ ಮಾಡಿಕೊಂಡೆ ಬಂದಿದ್ದಾಳೆ ಎಂದು ಹೇಳಿದರು. ಇದನ್ನೂ ಓದಿ:ನೂತನ ಸಂಪುಟದಲ್ಲೂ ಸಚಿವ ಸ್ಥಾನಕ್ಕೆ ನಾರಾಯಣಗೌಡ ಕಸರತ್ತು

Source: publictv.in Source link