ಆಫ್ರಿಕನ್ ಪ್ರಜೆ ಸಾವು ಪ್ರಕರಣ: ಪೊಲೀಸರ ಮೇಲೆ ಹಲ್ಲೆ ಮಾಡಿದ್ದ 5 ಮಂದಿ ಆರೋಪಿಗಳು ಅರೆಸ್ಟ್​

ಆಫ್ರಿಕನ್ ಪ್ರಜೆ ಸಾವು ಪ್ರಕರಣ: ಪೊಲೀಸರ ಮೇಲೆ ಹಲ್ಲೆ ಮಾಡಿದ್ದ 5 ಮಂದಿ ಆರೋಪಿಗಳು ಅರೆಸ್ಟ್​

ಬೆಂಗಳೂರು: ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಜೆಸಿ ನಗರ ಠಾಣೆಯ ಮಂಭಾಗ ಪ್ರತಿಭಟನೆ ನಡೆಸುವ ವೇಳೆಯಲ್ಲಿ, ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅರ್ಮಾನ್ ಗ್ವಾಯ್, ಕ್ಲೆಮೆಂಟ್ ಬಕೆನ್ನಾ, ಗುಲಾರ್ಡ್ ಕುಲುಮೆ, ಯೂಸುಫ್ ಮಕಿಟಾ, ಗ್ಯೋ ಕುಂಗು ಬಂಧಿತ ಆರೋಪಿಗಳಾಗಿದ್ದಾರೆ. ಘಟನೆ ನಡೆದ ಬಳಿಕ ಎಸ್ಕೇಪ್ ಆದವರಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು, ಮೂರು ವಿಶೇಷ ತಂಡ ರಚಿಸಿದ್ದರು. ಕೊತ್ತನೂರು, ಹೆಣ್ಣೂರು, ಬಾಣಸವಾಡಿ, ಆರ್.ಟಿ. ನಗರ, ರಾಮಮೂರ್ತಿನಗರ ಮತ್ತು ಟಿ. ಸಿ. ಪಾಳ್ಯದಲ್ಲಿ ವಿಶೇಷ ತಂಡಗಳು ಹುಡುಕಾಟ ನಡೆಸಿದ್ದರು.

blank

 ಇದನ್ನೂ ಓದಿ: ಪೊಲೀಸ್ ವಶದಲ್ಲಿ ವಿದೇಶಿ ಪ್ರಜೆ ಸಾವು; ಘಟನೆ ಖಂಡಿಸಿ ಆಫ್ರಿಕನ್​ರಿಂದ ಪ್ರತಿಭಟನೆ

ಸಿಸಿಟಿವಿ ಮತ್ತು ಪೊಲೀಸರ ಹ್ಯಾಂಡಿಕ್ಯಾಮ್ ನಲ್ಲಿ ಸೆರೆ ಹಿಡಿದ ದೃಶ್ಯಗಳನ್ನ ಆಧರಿಸಿ ಪಾತಕಿಗಳಿಗೆ ಬಲೆ ಬೀಸಿರುವ ಪೊಲೀಸರು ಓರ್ವ ಮಹಿಳೆ ಸೇರಿ 5 ಜನರಿಗಾಗಿ ತಪಾಸಣೆ ನಡೆಸುತ್ತಿದ್ದಾರೆ. ಗಲಭೆಗೆ ಪ್ರಚೋದನೆ ನೀಡಿದ್ದಳೆನ್ನಲಾದ ಮಹಿಳೆ ಸಾರಾಯಿ ಪಾಳ್ಯ ನಿವಾಸಿಯಾಗಿದ್ದು, ಗಲಭೆಯಾಗುತ್ತಿದ್ದಂತೆ ಮನೆಯಿಂದ ಎಸ್ಕೇಪ್ ಆಗಿದ್ದಾಳು ಎನ್ನಲಾಗಿದೆ.

blank

ಇನ್ನು ಮೃತ  ಆಫ್ರಿಕನ್​ ಪ್ರಜೆಯ ಮರಣೋತ್ತರ ಪರೀಕ್ಷೆ ಇಂದು ನಡೆಯುತ್ತಿದ್ದು, ಪರೀಕ್ಷೆ ನಂತರ ಯಾರಿಗೆ ಶವ ಹಸ್ತಾಂತರ ಮಾಡಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಲಾಗಿದೆ ಎನ್ನಲಾಗಿದ್ದು. ಪೊಲೀಸರು ಈ ಕುರಿತು ಮೃತನ ಸಂಬಂಧಿಕರ ಬಗ್ಗೆ ರಾಯಭಾರಿ ಕಚೇರಿ ಮೂಲಕ ಹುಡುಕಾಟ ನಡೆಸುತ್ತಿರುವದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಪೊಲೀಸರ ಮೇಲೆ ಹಲ್ಲೆಗೆ ಯತ್ನ; ಆಫ್ರಿಕನ್ ಪ್ರಜೆಗಳ ಮೇಲೆ ಲಾಠಿ ಪ್ರಹಾರ

Source: newsfirstlive.com Source link