ದೆಹಲಿ ಶಾಸಕರಿಗೆ ಭರ್ಜರಿ ಗಿಫ್ಟ್​​​​- ವೇತನ ಹೆಚ್ಚಳಕ್ಕೆ ಕೇಜ್ರಿವಾಲ್ ಗ್ರೀನ್ ಸಿಗ್ನಲ್​

ದೆಹಲಿ ಶಾಸಕರಿಗೆ ಭರ್ಜರಿ ಗಿಫ್ಟ್​​​​- ವೇತನ ಹೆಚ್ಚಳಕ್ಕೆ ಕೇಜ್ರಿವಾಲ್ ಗ್ರೀನ್ ಸಿಗ್ನಲ್​

ನವದೆಹಲಿ: ಕೇಂದ್ರದ ಪ್ರಸ್ತಾವನೆಯಂತೆ ದೆಹಲಿ ಶಾಸಕರ ವೇತನ ಹೆಚ್ಚಳಕ್ಕೆ ದೆಹಲಿ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇದರಂತೆ ಪ್ರತಿ ತಿಂಗಳ ದೆಹಲಿ ಶಾಸಕರ ವೇತನದಲ್ಲಿ 30,000 ರೂಪಾಯಿ ಹೆಚ್ಚಳ ಆಗಲಿದೆ.

ದೆಹಲಿ ಶಾಸಕರಿಗೆ ಪ್ರತಿ ತಿಂಗಳು 60,000 ವೇತನ ನೀಡಲಾಗಿತ್ತು. ಈಗ ವೇತನ ಹೆಚ್ಚಳಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿರುವುದರಿಂದ ದೆಹಲಿ ಶಾಸಕರಿಗೆ ಈಗ ತಿಂಗಳಿಗೆ 90,000 ರೂಪಾಯಿ ವೇತನ ಸಿಗಲಿದೆ.

ಇತರ ರಾಜ್ಯಗಳಂತೆ ದೆಹಲಿಯ ಶಾಸಕರಿಗೂ ವೇತನ, ಭತ್ಯೆ ಸಮಾನವಾಗಿರುವಂತೆ ಎಂಎಚ್​​ಎ ಮನವಿ ಮಾಡಿತ್ತು. ಈ ವೇಳೆ ದೆಹಲಿ ಶಾಸಕರಿಗೆ 12,000 ವೇತನ, 53,000 ಭತ್ಯೆ ಒಟ್ಟು 60,000 ರೂಪಾಯಿ ಪ್ರತಿ ತಿಂಗಳು ನೀಡಲಾಗುತ್ತಿತ್ತು. ಇದರೊಂದಿಗೆ ಶಾಸಕರು ತಮ್ಮ ಕಚೇರಿಯಲ್ಲಿ ನೇಮಿಸಿಕೊಳ್ಳುವ ಇಬ್ಬರು ಸಿಬ್ಬಂದಿಗೆ ಪ್ರತಿ ತಿಂಗಳು 30,000 ರೂಪಾಯಿ ಹೆಚ್ಚುವರಿಯಾಗಿ ಪಾವತಿ ಮಾಡಲಾಗುತ್ತಿತ್ತು. ಅಂದಹಾಗೇ, 10 ವರ್ಷಗಳ ಬಳಿಕ ಮೊದಲ ಬಾರಿಗೆ ದೆಹಲಿ ಶಾಸಕರ ವೇತನವನ್ನು ಹೆಚ್ಚಳ ಮಾಡಲಾಗಿದೆ.

ಯಾವ್ಯಾವ ರಾಜ್ಯಗಳಲ್ಲಿ ಶಾಸಕರ ವೇತನ ಎಷ್ಟಿದೆ..?
ಉತ್ತರಾಖಂಡದಲ್ಲಿ 2.04 ಲಕ್ಷ ರೂಪಾಯಿ, ಕರ್ನಾಟಕದಲ್ಲಿ 1.65 ಲಕ್ಷ ರೂಪಾಯಿ, ತೆಲಂಗಾಣದಲ್ಲಿ 2.5 ಲಕ್ಷ ರೂಪಾಯಿ, ಗೋವಾದಲ್ಲಿ 1.99 ಲಕ್ಷ ರೂಪಾಯಿ, ಆಂಧ್ರ ಪ್ರದೇಶದಲ್ಲಿ 1.75 ಲಕ್ಷ ರೂಪಾಯಿ, ಬಿಹಾರದಲ್ಲಿ ಶಾಸಕರಿಗೆ ಪ್ರತಿ ತಿಂಗಳು 1.35 ಲಕ್ಷ ರೂಪಾಯಿ ವೇತನ ನೀಡಲಾಗುತ್ತಿದೆ.

Source: newsfirstlive.com Source link