ಅರವಿಂದ್ ಬಗ್ಗೆ ‘ಪ್ರೀತಿಯ ಮಾತು’; ದಿವ್ಯಾಳ ಮನದಾಳಕ್ಕೆ ಆ್ಯಪಲ್​ನಂತಾಗಿತ್ತು ಅರವಿಂದ್ ಕೆನ್ನೆ

ಅರವಿಂದ್ ಬಗ್ಗೆ ‘ಪ್ರೀತಿಯ ಮಾತು’; ದಿವ್ಯಾಳ ಮನದಾಳಕ್ಕೆ ಆ್ಯಪಲ್​ನಂತಾಗಿತ್ತು ಅರವಿಂದ್ ಕೆನ್ನೆ

ಬಿಗ್​ ಬಾಸ್​ ಫಿನಾಲೆಗೆ ಕೇವಲ 5 ದಿನ ಉಳಿದಿದ್ದು, ಮಿಡ್ ವೀಕ್ ಎಲಿಮಿನೇಶನ್ ಟೆನ್ಷನ್​ ಮರೆತು ಮಹಾಮನೆ ಖುಷಿಯಿಂದ ಕಂಗೊಳಿಸುತ್ತಿದೆ. ಕಂಟೆಸ್ಟಂಟ್ಸ್ ಸಂಭ್ರಮಿಸಲು ಬಿಗ್​ ಬಾಸ್​ ವೇದಿಕೆ ಕಲ್ಪಿಸಿದ್ದು, ಮನಸಾರೆ ಎಂಜಾಯ್ ಮಾಡ್ತಿದ್ದಾರೆ.

ಹೌದು, ಬಿಗ್ ಬಾಸ್ ಮನೆಗೆ ದೊಡ್ಡ ಕಿವಿ ಬಂದಿದ್ದು, ಇದು ಅಂತಿಂಥಾ ಕಿವಿ ಅಲ್ಲ, ಮನೆಯ ಸದಸ್ಯರ ಆಸೆ ಈಡೇರಿಸುವ ಚಮತ್ಕಾರಿ ಕಿವಿ. ಬಿಗ್​ ಮನೆಯಲ್ಲಿ ಇದುವರೆಗೂ ಈಡೇರದ ವಿಶ್​ ಯಾವುದಾದ್ರು ಇದ್ರೆ ಅದನ್ನ ಈ ಕಿವಿಯಲ್ಲಿ ಹೇಳ್ಬೇಕು. ಇಂತದ್ದೊಂದು ಅವಕಾಶ ಸಿಕ್ರೆ ಸುಮ್ನಿರ್ತಾರಾ ದೊಡ್ಮನೆಯವ್ರು. ಸಿಕ್ಕಿದ್ದೆ ಚಾನ್ಸು ಅಂತಾ ಎಲ್ರೂ ಒಂದೊಂದು ವಿಶ್​ ಕೇಳ್ಕೊಂಡ್ರು. ಅದ್ರಲ್ಲಿ ಮೊದಲು ಈಡೇರಿದ್ದು ಅರವಿಂದ್​ ಕೆ.ಪಿ ಅವರ ಆಸೆ.

blank

ಅರವಿಂದ್​ ತಮ್ಮ ಬೈಕ್​ನ್ನ ಒಂದ್​ ಸಾರಿ ಬಿಗ್​ ಮನೆಯಲ್ಲಿ ನೋಡಬೇಕು ಅಂದಿದ್ರು, ಅವರ ವಿಶ್​ ಈಡೇರಿಸಿದ ಬಿಗ್​ ಬಾಸ್​ ಒಂದು ಸ್ಪೆಷಲ್​ ಮೂಮೆಂಟ್​ ಕ್ರಿಯೇಟ್​ ಮಾಡಿಕೊಟ್ರು.

ಇಷ್ಟು ದಿನ ಎಲಿಮಿನೇಟ್ ಆದ್ಮೇಲೆ ಸುದೀಪ್ ಅವರ ಸಮ್ಮುಖದಲ್ಲಿ ಬಿಗ್ ಮನೆಯ ಜರ್ನಿ ವಿಟಿ ನೋಡ್ತಿದ್ದ ಸದಸ್ಯರು ಈಗ ಮನೆಯಲ್ಲಿ ಇದ್ದುಕೊಂಡೆ ತಮ್ಮ ಜರ್ನಿಯ ವಾಲ್ ನೋಡಿ ಖುಷಿ ಪಡಲು ಬಿಗ್​ ಬಾಸ್​ ಅವಕಾಶ ಕಲ್ಪಿಸಿದ್ರು. ಈ ವಾರದ ಮೊದಲ ದಿನದ ವಾಲ್ ಅರವಿಂದ್ ಕೆ.ಪಿ ಜರ್ನಿ ಬಗ್ಗೆ ಕತೆ ಹೇಳುತಿತ್ತು.

blank

ಬಿಗ್​ ಬಾಸ್​ ಮನೆಯಲ್ಲಿ 113 ದಿನಗಳನ್ನ ಪೊರೈಸಿರುವ ಅರವಿಂದ್​ ಅವರ ಬಿಗ್​ ಮನೆ ಜರ್ನಿಯ ಕುರಿತು ಪ್ರತಿ ಫೋಟೋ ಒಂದೊಂದು ಕತೆ ಹೇಳುತ್ತಿತ್ತು. ಇನ್ನೂ ಈ ಸಂಭ್ರಮದ ಬಗ್ಗೆ ಮಾತ್ನಾಡಿದ ಅರವಿಂದ್, ನಾನು ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟಾಗ ಈ ಬೈಕ್​ನಲ್ಲಿ ಸ್ಟೇಜ್​ವರೆಗೂ ಬಂದಿದ್ದೆ, ತುಂಬಾ ಖುಷಿಯಾಯ್ತು.. ಇನ್ನೂ ಫೋಟೋ ವಾಲ್​ ಬಗ್ಗೆ ಹೇಳ್ಬೇಕಂದ್ರೆ ತುಂಬಾ ಭಾವನೆಗಳನ್ನ ಸೆರೆಹಿಡಿದಿದ್ದು, ಬಿಗ್​ ಬಾಸ್​ಗೆ ಬಂದಿದ್ದಕ್ಕೆ ನಂಗೆ ಯಾವುದೇ ರೀತಿಯ ಪಶ್ಚಾತಾಪ ಇಲ್ಲ ಎಂದು ಸಂಭ್ರಮಿಸಿದ್ರು.

blank

ಇನ್ನು ಅರವಿಂದ್​ ಬಗ್ಗೆ ಮಾತ್ನಾಡಿದ ಪ್ರತಿ ಕಂಟೆಸ್ಟಂಟ್ಸ್​ ಅವರ ಸಾಧನೆ ಬಗ್ಗೆ ಹಾಡಿ ಹೋಗಳಿದ್ರು. ಅದ್ರಲ್ಲಿ ಮುಖ್ಯವಾಗಿ ಮಂಜು. ಹೊರಗಡೆ ಇವರಿಬ್ಬರ ಫ್ಯಾನ್ಸ್​ಗಳ ನಡುವೆ ವಾರ್​ ಆಗ್ತಾನೆ ಇರುತ್ತೆ. ಆದ್ರೆ ಅರವಿಂದ್​ ಬಗ್ಗೆ ಮಂಜು ತುಂಬಾ ಪಾಸಿಟಿವ್​ ಪಾಯಿಂಟ್ಸ್​ಗಳನ್ನ ಹೇಳಿ ತಮ್ಮ ಬಾಂಡಿಂಗ್​ ಬಗ್ಗೆ ಹರ್ಷ ವ್ಯಕ್ತಪಡಿಸಿದ್ರು. ನಾನು ಟಾಸ್ಕ್​ ಆಡುವಾಗ ಅರವಿಂದ್​ನಿಂದ ಇನ್‌ಸ್ಪೈರ್‌ ಆಗ್ತೀನಿ.

ನಾವಿಬ್ಬರು ಹೆಚ್ಚು ಮಾತ್ನಾಡ್ಲಿಲ್ಲ ಅಂದ್ರೂ ಕೂಡ ನಮ್ಮಿಬ್ಬರ ವೇವ್​ಲೆಂತ್​ ತುಂಬಾ ಚೆನ್ನಾಗಿ ಮ್ಯಾಚ್​ ಆಗ್ತವೆ. ನಾನು ನಿನ್ನಿಂದ ತುಂಬಾ ಕಲ್ತಿದ್ದಿನಿ ಗುರೂ. ನಾವಿಬ್ರು ಯಾವಾಗಲೂ ಪ್ರತಿ ಸ್ಪರ್ಧಿಗಳಾಗಿಯೇ ಆಡ್ತೀವಿ. ಈ ಫಿನಾಲೆಯಲ್ಲಿಯೂ ಕೂಡ ಕಾಂಪಿಟೇಟರ್ಸ್​. ನಂಗೆ ನಿನ್ನ ಬಗ್ಗೆ ತುಂಬಾ ಹೆಮ್ಮೆ, ಖುಷಿ ಇದೆ ಎಂದು ಅರವಿಂದ್​ ಬಗೆಗಿನ ತಮ್ಮ ಮನದಾಳವನ್ನ ಬಿಚ್ಚಿಟ್ರು ಮಂಜು.

blank

ಇನ್ನು ಇನ್ನೊಬ್ಬರು ತುಂಬಾ ಮುಖ್ಯವಾದ ವ್ಯಕ್ತಿ ಮಾತಾಡೋದನ್ನ ಇಡೀ ಮನೆ ಕಾಯ್ತಿತ್ತು. ದೊಡ್ಮನೆಯವರಿಗಿಂತ ಆರ್ವಿ ಫ್ಯಾನ್ಸ್​ ಕಾತರರಾಗಿದ್ರು. ಈ ಎಲ್ಲದಕ್ಕೂ ಪುಷ್ಠಿ ಕೊಡುವಂತೆ ಅವರು ಕೂಡಾ ನೀವೆಲ್ಲ ಮಾತಾಡಿ ನಾನು ಲಾಸ್ಟ್​​​ನಲ್ಲಿ ಮಾತ್ನಾಡ್ತಿನಿ ಅಂದ್ರು. ಅವರೇ ದಿವ್ಯಾ ಉರುಡುಗ.. ಎಲ್ಲಾ ನೀವೇ ಹೇಳ್ಬಿಟ್ಟಿದ್ದಾರ. ನಂಗೆ ಏನ್​ ಹೇಳ್ಬೇಕು ಅಂತಾ ಗೊತ್ತಾಗ್ತಿಲ್ಲ ಅಂತಾ ಮಾತು ಶುರು ಮಾಡಿದ ದಿವ್ಯಾ. ನಂಗೆ ಅರವಿಂದ್​ ಅವರ ಬಗ್ಗೆ ತುಂಬಾ ರೆಸ್ಪೆಕ್ಟ್​ ಇದೆ. ಬಿಗ್​ ಬಾಸ್​ ಮನೆಗೆ ನಾನು ಬರುವಾಗ ಏನೇ ಆದ್ರು ಒಬ್ಳೆ ಇರ್ಬೇಕು ಅನ್ಕೊಂಡು ಬಂದೆ. ಆದ್ರೇ ಅರವಿಂದ್​ಗೆ ಇಷ್ಟು ಕನೆಕ್ಟ್​ ಆಗ್ತೀನಿ ಅನ್ಕೊಂಡಿರಲಿಲ್ಲ. ಅವರು ನನ್ನ ಜೊತೆ ಇದ್ದಾಗ ನಾನು ಸೋತಿದ್ದೇ ಇಲ್ಲ. ಅರವಿಂದ್​ ಚಂದ.. ನಾನು ಅರವಿಂದ್​ರನ್ನೇ ಸೆಲೆಬ್ರೇಟ್​ ಮಾಡ್ತೀನಿ. ಅಂದಾಗ ಮನೆಯವರು ಕಾಲ್​ ಎಳದಿದ್ದೇ ಎಳದಿದ್ದು. ಇನ್ನೂ ಅವರಂದ್​​ ಅವ್ರೇ ನಂಗೆ ಇಷ್ಟ ಅಂತಾ ದಿವ್ಯಾ ಹೇಳುವಾಗ ಅರವಿಂದ್​ ಕೆನ್ನೆ ಆ್ಯಪಲ್​ ಥರಾ ಆಗಿದ್ದು ಸುಳ್ಳಲ್ಲ.

blank

Source: newsfirstlive.com Source link