‘ಕನ್ಯಾಕುಮಾರಿ’ ಹಾಗೂ ‘ಲಕ್ಷಣ’ ಲಾಂಚ್​ಗೆ ಡೇಟ್​ ಫಿಕ್ಸ್

‘ಕನ್ಯಾಕುಮಾರಿ’ ಹಾಗೂ ‘ಲಕ್ಷಣ’ ಲಾಂಚ್​ಗೆ ಡೇಟ್​ ಫಿಕ್ಸ್

ಕಲರ್ಸ್​ ಕನ್ನಡಲ್ಲಿ ಈಗಾಗಲೇ ನೀವು ಎರಡು ಧಾರಾವಾಹಿಗಳ ಪ್ರೋಮೊಗಳನ್ನು ನೋಡಿ ತುಂಬಾನೇ ಕಾತುರರಾಗಿದ್ದೀರ ಅನ್ನೋದು ಗೊತ್ತಿದೆ.. ಮೊನ್ನೆ ಮೊನ್ನೆಯಷ್ಟೆ​ ಲಕ್ಷಣ ಧಾರಾವಾಹಿಯ ಮತ್ತೊಂದು ಪ್ರೋಮೋ ರಿಲೀಸ್​ ಆಗಿರುವ ವಿಷಯವನ್ನು ನಾವು ನಿಮಗೆ ತಿಳಿಸಿದ್ವಿ.

ಪ್ರೋಮೋದಲ್ಲಿ ಒಂದು ಹೆಣ್ಣು ಮಗು ತಾನು ಚಿಕ್ಕ ವಯಸ್ಸಿನಿಂದಲೂ ಕಂದು ಬಣ್ಣ ಇರುವ ಕಾರಣ ನಾನು ಮುಂದೆ ದೊಡ್ಡವಳಾದ ಮೇಲೆ ಬಿಳಿ ಆಗ್ತೀನಿ ಅನ್ನೊ ಕನಸು ಇಟ್ಟುಕೊಂಡಿರುತ್ತಾಳೆ. ಆದ್ರೆ ಅವಳು ಪುಟ್ಟ ಹುಡುಗಿ ಇದ್ದಾಗಿನಿಂದಲೂ ಜನ ಅವಳ ಬಣ್ಣವನ್ನು ಟೀಕೆ ಮಾಡುತ್ತಿರುತ್ತಾರೆ. ಆದರೆ ಮುಂದೆ ಕೂಡಾ ಅವಳು ಅದೇ ಬಣ್ಣದಲ್ಲಿ ದೊಡ್ಡವಳಾಗುತ್ತಾಳೆ. ಇದೆ ಎಳೆಯಲ್ಲಿ ಕಥೆ ಸಾಗಲಿದೆ ಎಂಬುವುದರ ಬಗ್ಗೆ ಕೂಡ ಹೇಳಿದ್ವಿ.

ಇದೀಗ ಮತ್ತೊಂದು ಪ್ರೋಮೋ ರಿಲೀಸ್​ ಆಗಿದ್ದು ನಮ್ಮ ಹೀರೋಯಿನ್ ಯಾವ ಕೆಲಸಕ್ಕು ರೆಡಿ. ಆದರೆ  ಪಟ ಪಟ ಅಂತಾ ಮಾತನಾಡುವ ಅವಳಿಗೆ ಆ್ಯಂಕರ್​ ಆಗಬೇಕೆಂಬ ಕನಸು ಹೆಚ್ಚು. ಅವಳು ನಿಜವಾಗ್ಲು ಆ್ಯಂಕರ್​ ಆಗ್ತಾಳಾ? ಅಥವಾ ಕನಸು ಕನಸಾಗಿಯೆ ಉಳಿಯತ್ತ ಅನ್ನೋದೇ ಈ ಧಾರಾವಾಹಿಯ ಕತಾಹಂದರವಾಗಿದೆ.

ಇದನ್ನೂ ಓದಿ: ಕನ್ಯಾಕುಮಾರಿ ನಟಿ ಯಾರು ಗೊತ್ತಾ..?

blank

ಇನ್ನು ಮತ್ತೊಂದು ಧಾರಾವಾಹಿಯಂದ್ರೆ ಕನ್ಯಾಕುಮಾರಿ. ಇದು ಶ್ರೀಮಂತ ಕುಟುಂಬದ ಹುಡುಗಿಯ ಸುತ್ತ ಹೆಣೆದಿರುವ ಕತೆಯಾಗಿದೆ. ಇಲ್ಲಿ ಹುಡುಗಿ ದೇವರ ಮೇಲೆ ತುಂಬಾನೆ ಭಕ್ತಿಯಿರುವವಳು. ಇನ್ನೊಂದೆಡೆ ಹೀರೋ ಮನೆಯವರು ಕಡು ಬಡವರು, ಊಟಕ್ಕೂ ಪರದಾಡುವಂತಹ ಕಷ್ಟ ಇರುವವರು. ಇವರಿಬ್ಬರ ಮಧ್ಯ ನಡೆಯುವ ಕತೆಯೇ ಈ ಧಾರಾವಾಹಿಯ ಮುಖ್ಯ ಎಳೆಯಾಗಿದೆ.

ಇಷ್ಟು ದಿನ ಪ್ರೋಮೋ ಮೂಲಕ ನಿಮಗೆ ಕ್ಯೂರಿಯಾಸಿಟಿ ಹೆಚ್ಚಿಸಿದ ಈ ಧಾರಾವಾಹಿಗಳ ಲಾಂಜ್​ ಡೇಟ್​ ಹಾಗೂ ಟೈಮಿಂಗ್​ ರಿವೀಲ್​ ಆಗಿದೆ. ಸದ್ಯ ಬಿಗ್​ಬಾಸ್ ಸೀಸನ್​ 8ರ ಎರಡನೇ ಇನ್ನಿಂಗ್ಸ್​ ಭರ್ಜರಿಯಾಗಿ ಸಾಗ್ತಾಯಿದ್ದು, ಇನ್ನೇನು ಕೆಲವೆ ದಿನಗಳಲ್ಲಿ ಬಿಗ್​ಬಾಸ್​ ಮುಕ್ತಾಯವಾಗುತ್ತೆ. ಬಿಗ್​ಬಾಸ್​ ಮುಗುಯುತ್ತಿದ್ದಂತೆ ಆ ಟೈಮ್​ನಲ್ಲಿ ಈ ಎರಡು ದಾರವಾಹಿಗಳು ಪ್ರಸಾರವಾಗಲಿವೆ.

ಹೌದು.. ಆಗಸ್ಟ್​ 9 ರಂದು ಎರಡು ಧಾರಾವಾಹಿಗಳು ಲಾಂಚ್​​ ಆಗಲಿದ್ದು, 9:30ಕ್ಕೆ ಲಕ್ಷಣ ಧಾರಾವಾಹಿ ಪ್ರಸಾರವಾಗಲಿದೆ. ಹಾಗೂ 10 ಗಂಟೆಗೆ ಕನ್ಯಾಕುಮಾರಿ ಧಾರಾವಾಹಿ ಪ್ರಸಾರವಾಗಲಿದೆ. ಈ ಎರಡು ಧಾರಾವಾಹಿಯು ಒಂದೇ ದಿನ ನಿಮ್ಮ ಮುಂದೆ ಬರಲು ಸಜ್ಜಾಗಿದ್ದು, ಕನ್ಯಾಕುಮಾರಿ ಹಾಗೂ ಲಕ್ಷಣ ಎರಡು ಟೀಮ್​ಗೆ ನಮ್ಮ ಕಡೆಯಿಂದಲು ಆಲ್​ ದ ಬೆಸ್ಟ್​.

ಇದನ್ನೂ ಓದಿ: ಬಿಗ್​ಬಾಸ್​ ಬಳಿಕ ‘ಕಂದು ಬಣ್ಣದ ಚೆಲುವೆಯ ಕಥೆ’: ಹೇಗಿತ್ತು ಗೊತ್ತಾ ‘ಲಕ್ಷಣ’ಳ ಹುಡುಕಾಟ..?

Source: newsfirstlive.com Source link