ನಮ್ಮ ದನಿ ಗಟ್ಟಿಯಾಗಿದ್ರೆ ಬಿಜೆಪಿ, ಆರ್​ಎಸ್​​ಎಸ್​ನಿಂದ ಹತ್ತಿಕ್ಕಲು ಸಾಧ್ಯವಿಲ್ಲ; ವಿಪಕ್ಷಗಳಿಗೆ ರಾಹುಲ್​​ ಹೀಗಂದಿದ್ಯಾಕೇ?

ನಮ್ಮ ದನಿ ಗಟ್ಟಿಯಾಗಿದ್ರೆ ಬಿಜೆಪಿ, ಆರ್​ಎಸ್​​ಎಸ್​ನಿಂದ ಹತ್ತಿಕ್ಕಲು ಸಾಧ್ಯವಿಲ್ಲ; ವಿಪಕ್ಷಗಳಿಗೆ ರಾಹುಲ್​​ ಹೀಗಂದಿದ್ಯಾಕೇ?

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೇಳಲು ವಿಪಕ್ಷಗಳನ್ನ ಒಂದುಗೂಡಿಸಲು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಕಸರತ್ತು ಮುಂದುವರಿದಿದೆ. ಕಳೆದ ಒಂದು ವಾರದ ಇಚೇಗೆ ರಾಹುಲ್ ಗಾಂಧಿ, ಎರಡು ಬಾರಿ ವಿಪಕ್ಷಗಳ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಅದರಂತೆ ಇಂದು ಮೋದಿ ಸರ್ಕಾರದ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ವಿಪಕ್ಷಗಳ ಪ್ರಮುಖ ನಾಯಕರಿಗೆ ‘ಉಪಹಾರ ಕೂಟ’ ಏರ್ಪಡಿಸಿದ್ದರು.

ಇದನ್ನೂ ಓದಿ:‘ಕಲಾಪ ನಡೆಸಲು ಸಹಕರಿಸಿ’ ಮಲ್ಲಿಕಾರ್ಜುನ ಖರ್ಗೆಗೆ ರಾಜನಾಥ್​​ ಸಿಂಗ್​​ ಮನವಿ ಮಾಡಿದ್ಯಾಕೆ?

blank

ರಾಹುಲ್ ಗಾಂಧಿ ಅವರ ಈ ಉಪಹಾರ ಕೂಟಕ್ಕೆ ತೃಣಮೂಲ ಕಾಂಗ್ರೆಸ್​ನ ಮೆಹುಲ್ ಮೊಯಿತ್ರಾ, ಎನ್​ಸಿಪಿ ನಾಯಕ ಸುಪ್ರಿಯಾ ಸುಲೆ, ಶಿವಸೇನೆಯ ಸಂಜಯ್ ರಾವತ್ ಮತ್ತು ಡಿಎಂಕೆಯ ಕಣಿಮೊಝಿ ಸೇರಿದಂತೆ ಹಲವು ನಾಯಕರು ಉಪಹಾರ ಕೂಟದಲ್ಲಿ ಭಾಗಿಯಾಗಿದ್ದರು.

ಕಳೆದ ಒಂದು ವಾರದ ಹಿಂದೆ ಕೇಂದ್ರದ ಕೃಷಿ ಕಾಯ್ದೆಯನ್ನ ಖಂಡಿಸಿ ಟ್ರ್ಯಾಕ್ಟರ್ ಱಲಿ ಮಾಡಿದ್ದ ರಾಹುಲ್ ಗಾಂಧಿ, ಇಂದು ಬೆಳಗ್ಗೆ ಉಪಹಾರ ಕೂಟದ ಬಳಿಕ ಸಂಸತ್ ಭವನಕ್ಕೆ ಸೈಕಲ್ ಱಲಿ ನಡೆಸಿದರು. ಈ ಮೂಲಕ ಇಂಧನ ಬೆಲೆಯನ್ನ ರಾಹುಲ್ ಗಾಂಧಿ ಖಂಡಿಸಿದ್ದಾರೆ. ರಾಹುಲ್ ಗಾಂಧಿ ಅವರ ಸೈಕಲ್ ಜಾಥಾದಲ್ಲಿ ಹಲವು ವಿರೋಧ ಪಕ್ಷಗಳ ನಾಯಕರು ಭಾಗಿಯಾಗಿದ್ದರು.

Image

ಭಾರತೀಯ ನಾಗರಿಕರು ಇಂಧನ ಬೆಲೆಯಿಂದ ಪರದಾಡುತ್ತಿದ್ದಾರೆ. ಇಂದಿನ ನನ್ನ ಸೈಕಲ್ ಜಾಥಾ ಮೋದಿ ಸರ್ಕಾರದ ಗಮನವನ್ನ ಸೆಳೆಯೋದಾಗಿದೆ. ನಮ್ಮ ಮುಖಗಳು ಅಥವಾ ನಮ್ಮ ಹೆಸರುಗಳು ಇಲ್ಲಿ ಮುಖ್ಯವಲ್ಲ. ಇಲ್ಲಿ ಎಲ್ಲರೂ ಜನರ ಪ್ರತಿನಿಧಿಗಳು ಆಗುವುದು ಅಗತ್ಯವಿದೆ. ಪ್ರತಿಯೊಂದು ಮುಖದಲ್ಲೂ ಹಣದುಬ್ಬರದಿಂದ ತೊಂದರೆಗೊಳಗಾದ ದೇಶದ ಜನರ ಕೋಟಿ ಮುಖಗಳಿವೆ. ನಮ್ಮ ಧ್ವನಿ ಎಷ್ಟು ಶಕ್ತಿಯುತವಾಗುತ್ತದೆಯೋ ಆಗ ಅದನ್ನ ನಿಗ್ರಹಿಸೋದು ಬಿಜೆಪಿ-ಆರ್​ಎಸ್​ಎಸ್​ಗೆ ಕಷ್ಟವಾಗುತ್ತದೆ ಅಂತಾ ವಿಕ್ಷಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: NDA ಒಕ್ಕೂಟಕ್ಕೆ ಶಾಕ್! ಪೆಗಸಸ್​​ ಬೇಹುಗಾರಿಕೆ ಬಗ್ಗೆ ತನಿಖೆಗೆ ಆಗ್ರಹಿಸಿದ ನಿತೀಶ್ ಕುಮಾರ್

ಪೆಗಾಸಸ್ ಬೇಹುಗಾರಿಕೆ, ರೈತರ ಪ್ರತಿಭಟನೆ ಮತ್ತು ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸುತ್ತಿರುವುದರಿಂದ ಪದೇಪದೇ ರಾಜ್ಯಸಭೆ ಮತ್ತು ಲೋಕಸಭೆ ಕಲಾಪಗಳು ಮುಂದೂಡಲಾಗುತ್ತಿದೆ. ಕೇಂದ್ರ ಸರ್ಕಾರ ಸಂಸತ್​​ನಲ್ಲಿ ಎರಡು ಮಸೂದೆಗಳನ್ನು ಮಂಡಿಸಿದೆ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಸರ್ಕಾರ ವಾಯುಗುಣಮಟ್ಟ ನಿರ್ವಹಣೆ ಆಯುಕ್ತಾಲಯ ಸ್ಥಾಪನೆ, ರಾಷ್ಟ್ರೀಯ ವಿಮಾ ವ್ಯವಹಾರ ತಿದ್ದುಪಡಿ ಮಸೂದೆ ಮಂಡಿಸಿದ್ದು, ಇವುಗಳನ್ನು ಪಾಸ್​ ಮಾಡಲು ಕಾಯುತ್ತಿದೆ. ಆದರೆ, ಕಲಾಪಕ್ಕೂ ಮುನ್ನ ಪ್ರತಿಪಕ್ಷಗಳ ಸದಸ್ಯರು ಪೆಗಾಸಸ್ ಬೇಹುಗಾರಿಕೆ ಪ್ರಕರಣದಲ್ಲಿ ನ್ಯಾಯಬೇಕು ಎಂದು ಪ್ರತಿಭಟನೆ ನಡೆಸುತ್ತಿರುವ ಕಾರಣ ಅಧಿವೇಶನ ಮುಂದೂಡಲಾಗುತ್ತಿದೆ. ಹೀಗಾಗಿ ರಾಜ್ಯಸಭೆ ಮತ್ತು ಲೋಕಸಭೆ ಕಲಾಪಗಳು ಸರಿಯಾಗಿ ನಡೆಯಲು ಸಹಕರಿಸುವಂತೆ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಕೇಂದ್ರ ಸಚಿವ ರಾಜನಾಥ್​​ ಸಿಂಗ್ ನಿನ್ನೆ ಮನವಿ​​ ಮಾಡಿದ್ದಾರೆ.

 

 

Source: newsfirstlive.com Source link