ಮತ್ತೆ ಕಾಣಿಸಿಕೊಂಡ ಕಿಮ್​ ಶರ್ಮಾ & ಲಿಯಾಂಟರ್​ ಪೇಸ್​.. ಪ್ರೀತಿಯ ಶ್ವಾನದ ಜೊತೆ ವಾಕಿಂಗ್​

ಮತ್ತೆ ಕಾಣಿಸಿಕೊಂಡ ಕಿಮ್​ ಶರ್ಮಾ & ಲಿಯಾಂಟರ್​ ಪೇಸ್​.. ಪ್ರೀತಿಯ ಶ್ವಾನದ ಜೊತೆ ವಾಕಿಂಗ್​

ಇತ್ತೀಚಿಗೆ, ಟೆನಿಸ್ ಚಾಂಪಿಯನ್ ಲಿಯಾಂಡರ್‌ ಪೇಸ್‌ ಹಾಗೂ ನಟಿ ಕಿಮ್​ ಶರ್ಮಾ ಇಬ್ಬರೂ ಸುದ್ದಿಯಲ್ಲಿದ್ರು. ಇವರಿಬ್ಬರು ಗೋವಾದಲ್ಲಿ ಹಾಲಿಡೇ ಎಂಜಾಯ್​ ಮಾಡ್ತಾಯಿದ್ರು. ಅಷ್ಟೇ ಅಲ್ಲ, ಆ ಫೋಟೋಗಳು ಫುಲ್​ ವೈರಲ್​ ಆಗಿ, ಇಬ್ಬರೂ ಡೇಟಿಂಗ್​ ಮಾಡ್ತಾಯಿದ್ದಾರಾ? ಅನ್ನೋ ಅನುಮಾನವೂ ಮೂಡಿತ್ತು. ಇದೀಗ, ಆ ಅನುಮಾನಕ್ಕೆ ಪುಷ್ಠಿ ನೀಡುವಂತೆ ಇದೀಗ ಅವರಿಬ್ಬರು ಮತ್ತೆ ಕಾಣಿಸಿಕೊಂಡಿದ್ದಾರೆ.

ಹೌದು, ಕಿಮ್​ ಶರ್ಮಾ ಹಾಗೂ ಲಿಯಾಂಡರ್​ ಪೇಸ್​ ಇಬ್ಬರೂ ತಮ್ಮ ಪೆಟ್​ನನ್ನ ವಾಕಿಂಗ್​ ಮಾಡಿಸಿಕೊಂಡು ವಾಪಸ್​ ತಮ್ಮ ಮನೆಗೆ ಹೋಗುತ್ತಿರೋ ದೃಶ್ಯ ಸಿಕ್ಕಿದೆ. ಕಿಮ್​ ಪಿಂಕ್​ ಕಲರ್​ ಮ್ಯಾಕ್ಸಿ ಹಾಕಿಕೊಂಡು ಕಾಣಿಸಿಕೊಂಡ್ರೆ, ಲಿಯಾಂಡರ್​ ವೈಟ್​ ಟೀಶರ್ಟ್​ ಹಾಗೂ ಶಾರ್ಟ್ಸ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನ, ಮಾನವ್​ ಮಂಗಲಿನ್​ ಅನ್ನೋರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ. ಇದಕ್ಕೀಗ ಅಭಿಮಾನಿಗಳು, ಮಾಸ್ಕ್​ ಎಲ್ಲಿ..?  ನಿಮಗೊಂದು ರೂಲ್​? ನಮಗೊಂದು ರೂಲಾ? ಅಂತ ಪ್ರಶ್ನೆ ಮಾಡಿದ್ದಾರೆ.

 

 

View this post on Instagram

 

A post shared by Manav Manglani (@manav.manglani)

Source: newsfirstlive.com Source link