ಪತ್ನಿ ಮೇಲಿನ ಸಿಟ್ಟಿನಿಂದ 8 ತಿಂಗಳ ಮಗಳನ್ನು ನೆಲಕ್ಕೆ ಹೊಡೆದು ಕೊಂದ!

ಲಕ್ನೋ: ಪತ್ನಿ ಮೇಲಿನ ಸಿಟ್ಟಿನಿಂದ ವ್ಯಕ್ತಿಯೊಬ್ಬ ತನ್ನ 8 ತಿಂಗಳ ಮಗಳನ್ನು ಸಾಯುವವರೆಗೆ ನೆಲಕ್ಕೆ ಹೊಡೆದು ಕೊಂದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಬಿಜ್ನೋರ್ ಜಿಲ್ಲೆಯ ರಹ್ತಾಪುರ್ ಖುರ್ಡ್ ಗ್ರಾಮದಲ್ಲಿ ನಡೆದಿದೆ. ಕೃತ್ಯ ನಡೆದ ಕೂಡಲೇ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಕಳೆದ ಒಂದೂವರೆ ವರ್ಷದ ಹಿಂದೆ ಆರೋಪಿ ಮೊಹಮ್ಮದ್ ನಝೀಂ ಮೆಹ್ತಾಬ್ ಜಹಾನ್ ನನ್ನು ಮದುವೆಯಾಗಿದ್ದನು. ಈ ದಂಪತಿಗೆ 8 ತಿಂಗಳ ಹೆಣ್ಣು ಮಗುವೊಂದಿತ್ತು. ಕ್ಲುಲ್ಲಕ ಕಾರಣಕ್ಕಾಗಿ ದಂಪತಿ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿತ್ತು.

ಹೀಗೆ ಇಬ್ಬರ ಮಧ್ಯೆ ಆಗಾಗ ವಾಗ್ವಾದ ನಡೆಯುತ್ತಿತ್ತು. ಹೀಗೆ ಜಗಳವಾಗಿ ಕೆಲ ದಿನಗಳ ಹಿಂದೆಯಷ್ಟೇ ಪತ್ನಿ ತವರು ಮನೆ ಸೇರಿದ್ದಳು. ಇತ್ತ ಒಂದು ದಿನ ಕಂಠಪೂರ್ತಿ ಕುಡಿದು ಬಂದ ನಝೀಂ, ಮಗಳನ್ನು ಮನೆಗೆ ವಾಪ್ಸ ಕಳುಹಿಸುವಂತೆ ಪತ್ನಿಯ ಪೋಷಕರನ್ನು ಪೀಡಿಸಿದ್ದಾನೆ. ಈ ವೇಳೆ ಮೆಹ್ತಾಬ್ ಮತ್ತು ನಝೀಂ ಮತ್ತೆ ಜಗಳವಾಗಿದೆ. ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದು, ಅಂತ್ಯಸಂಸ್ಕಾರವನ್ನೂ ಮುಗಿಸಿದ್ರು!

ಜಗಳ ತಾರಕಕ್ಕೇರುತ್ತಿದ್ದಂತೆಯೇ ನಝೀಂ ತನ್ನ 8 ತಿಂಗಳ ಮಗಳನ್ನು ಪತ್ನಿ ಕೈಯಿಂದ ಎಳೆದುಕೊಂಡಿದ್ದಾನೆ. ಬಳಿಕ ನೆಲಕ್ಕೆ ಹಲವು ಬಾರಿ ಹೊಡೆದಿದ್ದಾನೆ. ಪರಿಣಾಮ ಪುಟ್ಟ ಕಂದಮ್ಮ ಸಾವನ್ನಪ್ಪಿದೆ. ಇತ್ತ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮಗು ಸಾವನ್ನಪ್ಪಿದ್ದ ವಿಚಾರ ತಿಳೀಯುತ್ತಿದ್ದಂತೆಯೇ ಮೆಹ್ತಾಬ್ ಕೂಡ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ನಝೀಂ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

blank

Source: publictv.in Source link