ಯಡಿಯೂರಪ್ಪ ರಾಜ್ಯ ಪ್ರವಾಸ; ಇದಕ್ಕಾಗಿ ಖರೀದಿಸಲಿರುವ ಹೊಸ ಕಾರ್​ ಯಾವುದು ಗೊತ್ತಾ?

ಯಡಿಯೂರಪ್ಪ ರಾಜ್ಯ ಪ್ರವಾಸ; ಇದಕ್ಕಾಗಿ ಖರೀದಿಸಲಿರುವ ಹೊಸ ಕಾರ್​ ಯಾವುದು ಗೊತ್ತಾ?

ಬೆಂಗಳೂರು: ರಾಜ್ಯಕ್ಕೆ ನೂತನ ಸಿಎಂ ನೇಮಕ ಮಾಡಿದ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಬಲಪಡಿಸುವುದಾಗಿ ಹೇಳಿದ್ದರು. ಅದೇ ರೀತಿ ರಾಜ್ಯ ಪ್ರವಾಸಕ್ಕೆ ಸಕಲ ರೀತಿಯಲ್ಲಿ ಸಜ್ಜಾಗುತ್ತಿರುವ ಅವರು ಪ್ರವಾಸಕ್ಕೆಂದೇ ಹೊಸ ಕಾರೊಂದನ್ನು ಖರೀದಿಸಲು ಸೂಚಿಸಿದ್ದಾರೆ ಎನ್ನಲಾಗಿದೆ.

ಭಾದ್ರಪದ ಮಾಸದ ಶುಕ್ಲ ಪಕ್ಷದ ಗಣೇಶ ಚೌತಿ ಮುಗಿದ ಬಳಿಕ ರಾಜ್ಯ ಪ್ರವಾಸಕ್ಕೆ ಸಜ್ಜಾಗುತ್ತಿರುವ ಯಡಿಯೂರಪ್ಪ ಇಗಾಗಲೇ ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದ್ದಾರೆ. ರಾಜ್ಯ ಪ್ರವಾಸದ ಸಂದರ್ಭದಲ್ಲಿ, ಕಾರಿನಿಂದಲೇ ಪ್ರತಿ ಗ್ರಾಮ ಗ್ರಾಮಕ್ಕೆ ತೆರಳಲಿದ್ದಾರೆ. ಜೊತೆಗೆ ಕಾರಿನಿಂದಲೇ ಜನರನ್ನು ಉದ್ದೇಶಿಸಿ ಮಾತನಾಡಲು ಮತ್ತು ಕಾರಿನ ಮೇಲಿನ ಗಾಜಿನ ಛಾವಣಿಯನ್ನು ತೆರೆಯುವ ಸೌಲಭ್ಯವಿರುವಂತ 50 ಲಕ್ಷ ರೂಪಾಯಿಯ ‘ಕಿಯಾ ಕಾರ್ನಿವಾಲ್’ ಎಂಬ​ ಕಾರೊಂದನ್ನು ಖರೀದಿಸಲು ಸೂಚಿಸಿದ್ದಾರೆ ಎನ್ನಲಾಗಿದೆ.

blank

ಇತ್ತ ಮುಂದಿನ ಒಂದುವರೆ ವರ್ಷಗಳಲ್ಲಿ ಕನಿಷ್ಠ ಎರಡು ಬಾರಿಯಾದ್ರೂ ರಾಜ್ಯ ಸಂಪೂರ್ಣವಾಗಿ ಸುತ್ತಬೇಕೆಂದು ಯೋಜನೆ ರೂಪಿಸಿಕೊಂಡಿರುವ ಮಾಜಿ ಸಿಎಂ,ತಮ್ಮ ತವರು ಕ್ಷೇತ್ರ ಶಿಕಾರಿಪುರದಿಂದಲೇ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದ್ದು ಪ್ರವಾಸದ ಮೂಲಕ, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ವಿಶ್ವಾಸವನ್ನು ಮಾಜಿ ಸಿಎಂ ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link