ಅಶ್ವಿನಿ ನಕ್ಷತ್ರ ಜೋಡಿ ಮತ್ತೆ ಮೋಡಿ; ಮಯೂರಿ ಮಗುವನ್ನ ಎತ್ತಿ ಮುದ್ದಾಡಿದ ಜೆಕೆ

 

ಅಶ್ವಿನಿ ನಕ್ಷತ್ರ ಜೋಡಿ ಮತ್ತೆ ಮೋಡಿ; ಮಯೂರಿ ಮಗುವನ್ನ ಎತ್ತಿ ಮುದ್ದಾಡಿದ ಜೆಕೆ

ಕನ್ನಡ ಟಾಪ್​ ಧಾರಾವಾಹಿಗಳ ಪಟ್ಟಿಯಲ್ಲಿ ತುಂಬಾನೆ ಸದ್ದು ಮಾಡಿದ ಸೀರಿಯಲ್​ಗಳಲ್ಲಿ ಅಶ್ವಿನಿ ನಕ್ಷತ್ರ ಧಾರಾವಾಹಿ ಕೂಡಾ ಒಂದು.. ಆ ಧಾರಾವಾಹಿ ವೈಂಡಪ್​ ಆಗಿ ಎಷ್ಟೊ ವರ್ಷಗಳು ಕಳೆದಿವೆ. ಆದ್ರು ಕೂಡಾ ಜನರು ಜೆಕೆ ಹಾಗೂ ಮಯೂರಿಯವರನ್ನ ಮರೆತಿಲ್ಲಾ. ಜೆಕೆ ಅವರು ಹೆಂಡ್ತಿ ಅಂತ ಕರಿತಾಯಿದ್ದ ಶೈಲಿ ಇಂದಿಗೂ ಫೇಮಸ್​.

blank

ಇದೀಗಾ ಜೆಕೆ ಹಾಗೂ ಮಯೂರಿಯವರ ವಿಷಯ ಬರಲು ಒಂದು ಕಾರಣವಿದೆ. ಅದೇನಪ್ಪಾ ಅಂದ್ರೆ ಸೀರಿಯಲ್​ ಮುಗಿದ ತಕ್ಷಣ ನಟ ನಟಿಯರು ಬಾಂಡಿಂಗ್​ನಲ್ಲಿ ಇರೋದು ತುಂಬಾನೆ ಕಡಿಮೆ. ಆದ್ರೆ ಜೆಕೆ ಹಾಗೂ ಮಯೂರಿ ಫ್ರೆಂಡ್​ಶಿಪ್ ತುಂಬಾನೆ ಸ್ಟ್ರಾಂಗ್​.

ಮಯೂರಿಯವರ ಮದುವೆಯಲ್ಲಿಯು ಜೆಕೆ ತಂದೆ ತಾಯಿ, ಮಯೂರಿ ತಂದೆ ತಾಯಿ ಸ್ಥಾನದಲ್ಲಿ ನಿಂತು ಮದುವೆ ಮಾಡಿ ಕೊಟ್ಟಿದ್ದರು. ಇದೀಗ ಜೆಕೆ ಮಯೂರಿಯವರ ಮಗುವನ್ನು ಭೇಟಿ ಮಾಡಿದ್ದಾರೆ. ಮಾತ್ರವಲ್ಲದೆ ಎತ್ತಿ ಮುದ್ದಾಡಿದ್ದಾರೆ.

blank

ಮಯೂರಿ, ಮಗು ಜೆಕೆ ಜೊತೆ ಆಟ ಆಡುತ್ತಿರುವ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಮಾತ್ರವಲ್ಲದೆ ಜೆಕೆ ಕೂಡಾ ಶೇರ್​ ಮಾಡಿದ್ದಾರೆ. ಒಟ್ನಲ್ಲಿ ದಿನದಿಂದ ದಿನಕ್ಕೆ ಇವರ ಫ್ರೆಂಡ್​ಶಿಪ್​ ಸ್ಟ್ರಾಂಗ್​ ಆಗ್ತಾಯಿದ್ದು, ಮುಂದೆ ಕೂಡಾ ಹೀಗೆ ಇರಲಿ ಎಂಬುವುದು ನಮ್ಮ ಆಶಯ.

Source: newsfirstlive.com Source link