ಯಡಿಯೂರಪ್ಪ ಹಿಂಬಾಗಿಲ ಗಿರಾಕಿ, ಅವರಿಗೆ ಮುಂಬಾಗಿಲಿನಿಂದ ಬರೋದು ಗೊತ್ತಿಲ್ಲ -ಸಿದ್ದರಾಮಯ್ಯ

ಯಡಿಯೂರಪ್ಪ ಹಿಂಬಾಗಿಲ ಗಿರಾಕಿ, ಅವರಿಗೆ ಮುಂಬಾಗಿಲಿನಿಂದ ಬರೋದು ಗೊತ್ತಿಲ್ಲ -ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗರ ಮೇಲೆ ಕಿಡಿ ಕಾರಿದ್ದು  ಮಾಜಿ ಸಿಎಂ ಯಡಿಯೂರಪ್ಪ , ಮಾಜಿ ಸಚಿವ ಆರ್. ಅಶೋಕ ವಿರುದ್ದ ಟೀಕಾ ಪ್ರಹಾರ ನಡೆಸಿದ್ದಾರೆ. ಇಂದು ಪದ್ಮನಾಭನಗರದಲ್ಲಿ ಕಾಂಗ್ರೆಸ್​ ಎಂಎಲ್​ಸಿ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಉಚಿತ ದಿನಸಿ ಕಿಟ್ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ, ಕಿಟ್​ ವಿತರಿಸಿ ಮಾತನಾಡಿದ್ದಾರೆ.

ಕೊರೋನ ಸಂದರ್ಭದಲ್ಲಿ ಬಿಜೆಪಿ ನಾಯಕರಿಗಿಂತ ಹೆಚ್ಚು ದಿನಸಿ ಕಿಟ್ ಗಳನ್ನು ವಿತರಿಸಿದವರು ಕಾಂಗ್ರೆಸ್ ಕಾರ್ಯಕರ್ತರು. ಸೋನಿಯಾ ಗಾಂಧಿಯವರು ವರ್ಚುವಲ್ ಸಭೆಯಲ್ಲಿ ನೀಡಿದ ನಿರ್ದೇಶನದಂತೆ ಕಷ್ಟಕಾಲದಲ್ಲಿ ಬಡವರ ಕಷ್ಟಕ್ಕೆ ಸ್ಪಂದಿಸಿದ್ದೇವೆ ಎಂದು ಮಾಜಿ ಸಿಎಂ ಹೆಳಿದ್ದಾರೆ.

blank

ಭಾಷಣಕ್ಕೆ ನಿಂತ ಅವರು ಮಾಜಿ ಸಿಎಂ ಯಡಿಯೂರಪ್ಪ ಕುರಿತು ಪ್ರತಿಕ್ರಿಯಿಸಿ  ಯಡಿಯೂರಪ್ಪ ಯಾವಾಗಲೂ ಹಿಂಬಾಗಿಲ ಗಿರಾಕಿ, ಅವರಿಗೆ ಮುಂಬಾಗಿಲಿನಿಂದ ಬಂದಿದ್ದು ಗೊತ್ತೇ ಇಲ್ಲ. ಇವ್ರದ್ದು ಯಾವಾಗಲೂ ಅಷ್ಟೇ ನಮ್ಮವರನ್ನೆಲ್ಲ ದುಡ್ಡು ಕೊಟ್ಟು ಖರೀದಿಸಿ ಸರ್ಕಾರ ಮಾಡ್ಕೊಂಡ್ರು, ಆದ್ರೆ ಪಕ್ಷದವರು ಮಗನ ಲಂಚದ ಕೇಸ್​ನಿಂದ ಹೆದರಿಸಿ ರಾಜೀನಾಮೆ ಪಡ್ಕೊಂಡ್ರು ಎಂದು ವ್ಯಂಗ್ಯ ಮಾಡಿದ್ದಾರೆ.

ಇನ್ನು ಪದ್ಮನಾಭ ನಗರದ ಶಾಸಕ ಆರ್​. ಅಶೋಕ ಮೇಲೆ ಟೀಕಾಪ್ರಹಾರಕ್ಕೆ ಮುಂದಾಗಿದ್ದು, ಕೋವಿಡ್ ಸಾಂಕ್ರಾಮಿಕ ರೋಗ ಬರೋದಕ್ಕೆ ಈ ಕ್ಷೇತ್ರದ ಶಾಸಕ ಆರ್​.ಅಶೋಕ್​ ಕಾರಣ ಎಂದಿದ್ದಾರೆ. ಅವರು ಸಿಎಂ ಆಗದೆ ಇರಬಹುದು, ಆದ್ರೆ ಕಂದಾಯ ಸಚಿವರಾಗಿದ್ದರಲ್ಲ ಜನರಿಗೆ ಕಷ್ಟ ಕಾಲದಲ್ಲಿ ಆಹಾರ, ಔಷಧಿ, ಬೆಡ್ ಗಳು ಕೊಡುವುದು ಅವರ ಜವಾಬ್ದಾರಿ, ಇಂತ ಕರ್ತವ್ಯವನ್ನು ನಾವು ಮಾಡುತ್ತಿದ್ದರೆ ಕಾರ್ಯಕ್ರಮ ನಡೆಸಲು ಅಶೋಕನ ಪರ್ಮಿಶನ್​ ಪಡೆಯಬೇಕಂತೆ.

ಈ‌ ಮೈದಾನ ಏನೂ ಅಶೋಕ್ ಅವರ ಅಪ್ಪನ ಮನೆ ಆಸ್ತಿನಾ? ಎಂದು ಏಕವಚನದಲ್ಲೇ ಮಾತಿನ ದಾಳಿಗೈದಿದ್ದು ಮಿಸ್ಟರ್ ಅಶೋಕ್ ಯೂ ಮಸ್ಟ್ ಆನ್ಸರ್ ದಿ ಪೀಪಲ್ ಆಫ್ ಕರ್ನಾಟಕ ಎಂದಿದ್ದಾರೆ. ನೀವು ಅಶೋಕ ಅವರನ್ನು ಪದ್ಮನಾಭನಗರದಲ್ಲಿ ಗೆಲ್ಲಿಸಿದೀರಿ ಅಲ್ವಾ? ಸೋ ಅಶೋಕ ಕೂಡ ಈ ಸಾವುಗಳಿಗೆ ಕಾರಣ. ಈ ಸಾವುಗಳಿಗೆ ಯಾರಪ್ಪಾ ಕಾರಣ ಅಶೋಕ..? ನೀವು ಎಂಎಲ್ಎ ಆದರೆ ಏನು ಮಿಸ್ಟರ್ ಅಶೋಕ್? ಇನ್ನು ಕೆಲವು ತಿಂಗಳುಗಳು ಕಾಯಿರಿ ನಾವು ಅಧಿಕಾರಕ್ಕೆ ಬರ್ತಿವಿ ಎಂದು ಎಚ್ಚರಿಸಿದ್ದಾರೆ.

 

Source: newsfirstlive.com Source link