ತೀರ್ಥಹಳ್ಳಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಗುಡ್ಡ ಕುಸಿತ; ಆತಂಕದಲ್ಲಿ ಸ್ಥಳೀಯರು

ತೀರ್ಥಹಳ್ಳಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಗುಡ್ಡ ಕುಸಿತ; ಆತಂಕದಲ್ಲಿ ಸ್ಥಳೀಯರು

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ- ಕೊಪ್ಪ ಮಾರ್ಗದ ಕುರುವಳ್ಳಿ ಕುಂಬಾರ ದೊಡುಗೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬೃಹತ್​ ಗುಡ್ಡ ಕುಸಿದಿದ್ದು ಆತಂಕ ಸೃಷ್ಟಿಸಿದೆ.

ತೀರ್ಥಹಳ್ಳಿ-ಮಂಗಳೂರು-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 169ರ ನೂರಾರು ನಿವಾಸಿಗಳು ಮತ್ತು ನೂರು ಮನೆಗಳು ಇರುವ ಪ್ರದೇಶದಲ್ಲಿ ರಸ್ತೆಗೆ ಹೊಂದಿಕೊಂಡು ಇರುವ ಕುರುವಳ್ಳಿ ಕುಂಬಾರ ದೊಡಿಗೆಯಲ್ಲಿನ ಗುಡ್ಡದ ಮಣ್ಣು ದಿಢೀರ್​ನೆ ಕುಸಿಯಲಾರಂಭಿಸಿದೆ. ಸ್ಥಳಿಯರಲ್ಲಿ ಭಾರೀ ಆತಂಕ ಉಂಟು ಮಾಡಿದ್ದು ಭೀಕರ ಅಪಾಯದ ಮುನ್ಸೂಚನೆ ಕಂಡು ಬರುತ್ತಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಮತ್ತೆ ಹೆಚ್ಚಾದ ಕೊರೊನಾ ಆತಂಕ -ಪ್ರವಾಸಿ ತಾಣಗಳಲ್ಲಿ RTPCR ರಿಪೋರ್ಟ್ ಕಡ್ಡಾಯ

ಈ ಪ್ರದೇಶದಲ್ಲಿ ನೂರಾರು ಮನೆಗಳಿದ್ದು ಜನರು ವಾಸ ಮಾಡ್ತಿದ್ದಾರೆ. ಜೊತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಶಿವಮೊಗ್ಗಕ್ಕೆ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತಿವೆ. ಇಲ್ಲಿ ದೊಡ್ಡ ಅಪಾಯದ ಸೂಚನೆ ಕಂಡು ಬರುತ್ತಿದೆಯಾದರೂ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮವಹಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

blank

ಇನ್ನು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್​ಗಳು ಮತ್ತು ತೀರ್ಥಹಳ್ಳಿ ತಹಸೀಲ್ದಾರ್​ಗೆ ಘಟನೆ ಕುರಿತು ಸೂಕ್ತ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಧಿಕಾರಿಗಳು ಶೀಘ್ರವಾಗಿ ಆದೇಶಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 133 ವರ್ಷ ಹಳೆಯ ಕನ್ನಡ ಶಾಲೆಯನ್ನ ದತ್ತು ಪಡೆದ ಕಿಚ್ಚಸುದೀಪ್​ ತಂಡ

Source: newsfirstlive.com Source link