ಸಿನಿಯಾರಿಟಿ ಲೆಕ್ಕಾಚಾರದಲ್ಲಿ ನೋಡೋದಾದ್ರೆ ನನಗೂ ಸಚಿವ ಸ್ಥಾನಬೇಕು- ಹಾಲಪ್ಪ

ಸಿನಿಯಾರಿಟಿ ಲೆಕ್ಕಾಚಾರದಲ್ಲಿ ನೋಡೋದಾದ್ರೆ ನನಗೂ ಸಚಿವ ಸ್ಥಾನಬೇಕು- ಹಾಲಪ್ಪ

ಬೆಂಗಳೂರು: ಸಚಿವ ಸಂಪುಟ ರಚನೆ ವಿಚಾರ ಕುರಿತಂತೆ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ನಾನು ಕೂಡ ಹಿರಿಯ ನಾಯಕನಾಗಿ ಪಕ್ಷದ ಏಳಿಗೆಗೆ ಶ್ರಮಿಸಿದ್ದೇನೆ ಮತ್ತು ಸಿನಿಯಾರಿಟಿ ಲೆಕ್ಕಾಚಾರದಲ್ಲಿ ನೋಡುವುದಾದ್ರೆ ನನಗೂ ಸಚಿವ ಸ್ಥಾನ ನೀಡಬೇಕು ಎಂದು ಸಚಿವ ಸ್ಥಾನದ ಆಸೆಯನ್ನು ಹರತಾಳು​ ಹಾಲಪ್ಪ ಹೊರ ಹಾಕಿದ್ದಾರೆ.

ಇನ್ನು ಸಚಿವ ಸ್ಥಾನ ನೀಡುವಂತೆ ಯಾರ ಮುಂದೆಯೂ ನಾನು ಲಾಬಿ ಮಾಡಿಲ್ಲ, ಮಾಡೋದು ಇಲ್ಲ. ಲಾಭಿ ಮಾಡೋದ್ರಲ್ಲಿ ಅರ್ಥವಿಲ್ಲ ಎಂದಿರುವ ಅವರು ಪಕ್ಷ ಅಳೆದು ತೂಗಿ ಸಚಿವ ಸ್ಥಾನಕ್ಕೆ ಆಯ್ಕೆ ಮಾಡುತ್ತೆ. ಜಿಲ್ಲೆಗೆ ಒಂದೇ ಸ್ಥಾನ ಕೊಟ್ರೆ ಈಶ್ವರಪ್ಪಗೆ ಕೊಡ್ತಾರೆ. ಎರಡು ಕೊಟ್ರೆ ನನಗೂ ಕೊಡ್ತಾರೆ. ಒಂದು ವೇಳೆ ಅರಗ ಜ್ಞಾನೇಂದ್ರ ಸ್ಪೀಕರ್ ಆದ್ರೆ, ಆಗ ನನಗೆ ಸಚಿವ ಸ್ಥಾನ ಕೊಡ್ತಾರೆ ಎನ್ನುವ ನಂಬಿಕೆಯಿದ್ದು, ಹೈಕಮಾಡ್​ ಮೇಲೆ ವಿಶ್ವಾಸವಿದೆ ಎಂದಿದ್ದಾರೆ.

Source: newsfirstlive.com Source link