ತನ್ನ ಮನೆಯನ್ನೇ ಬಾಡಿಗೆಗೆ ನೀಡಲು ಮುಂದಾದ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​​; ಯಾಕಿಂಥ ನಿರ್ಧಾರ?

ತನ್ನ ಮನೆಯನ್ನೇ ಬಾಡಿಗೆಗೆ ನೀಡಲು ಮುಂದಾದ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​​; ಯಾಕಿಂಥ ನಿರ್ಧಾರ?

ನವದೆಹಲಿ: ಸದಾ ಭಾರತದ ಮೇಲೆ ದಾಳಿ ಮಾಡುತ್ತಲೇ ಕಾಲ ಕಳೆಯುತ್ತಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇತ್ತೀಚೆಗೆ ತಮ್ಮ ಸಚಿವಾಲಯದ ಕರೆಂಟ್ ಬಿಲ್ ಕಟ್ಟದೇ ಸುದ್ದಿಯಾಗಿದ್ದರು. ಈ ಬೆನ್ನಲ್ಲೀಗ ತಾನು ನೆಲೆಸಬೇಕಾದ ಪಾಕ್​​ ಪ್ರಧಾನಿ ಅಧಿಕೃತ ನಿವಾಸವನ್ನೇ ಬಾಡಿಗೆಗೆ ನೀಡುವ ನಿರ್ಧಾರಕ್ಕೆ ಬರುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೀಗಾಗಿ ಇಮ್ರಾನ್​ ಖಾನ್​​ ಈ ನಿರ್ಧಾರಕ್ಕೆ ಬರಲು ಕಾರಣವೇನು ಎಂಬ ಪ್ರಶ್ನೆ ಪಾಕಿಸ್ತಾನ ರಾಜಕೀಯ ವಲಯದಲ್ಲಿ ಹುಟ್ಟಿಕೊಂಡಿದೆ.

blank

ಹೌದು, ಇನ್ಮುಂದೆ ಪಾಕ್​​ ಪ್ರಧಾನಿ ಇಮ್ರಾನ್​​ ಖಾನ್ ಅಧಿಕೃತ ನಿವಾಸ ಬಾಡಿಗೆಗೆ ಸಿಗಲಿದೆಯಂತೆ. ಖುದ್ದು ಇಮ್ರಾನ್​ ಖಾನ್​​ ಅವರೇ ಹೀಗೊಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪಾಕಿಸ್ತಾನಿ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. 2019 ಆಗಸ್ಟ್​ ತಿಂಗಳಿನಲ್ಲೇ ಇಮ್ರಾನ್​ ಖಾನ್​​ ಪ್ರಧಾನಿ ಸರ್ಕಾರದ ಅಧಿಕೃತ ನಿವಾಸದಿಂದ ತನ್ನ ಸ್ವಂತ ಮನೆಗೆ ಶಿಫ್ಟ್​ ಆಗಿದ್ದರು. ಬಳಿಕ ಈ ಪ್ರಧಾನಿ ನಿವಾಸವನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸುತ್ತೇವೆ ಎಂದು ಪಾಕಿಸ್ತಾನ ಸರ್ಕಾರ ಹೇಳಿತ್ತು. ಆದರೀಗ, ಪ್ರಧಾನಿ ನಿವಾಸ ಕಟ್ಟಡವನ್ನು ಬಾಡಿಗೆಗೆ ನೀಡಲಾಗುವುದು ಎಂದು ತಿಳಿಸಿದೆ.

ಇನ್ನು, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಫ್ಯಾಷನ್​​ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಆಯೋಜಿಸಲು ಈ ಪ್ರಧಾನಿ ನಿವಾಸ ಬಾಡಿಗೆಗೆ ಸಿಗಲಿದೆ. ಸರ್ಕಾರದ ಯಾವುದೇ ನಿಯಮಗಳನ್ನು ಉಲ್ಲಂಘಿಸದೇ ಈ ಕಟ್ಟಡ ಬಳಿಸಿಕೊಳ್ಳಬಹುದು ಎಂದು ಪಾಕ್​​ ಫೆಡೆರಲ್​​ ಕ್ಯಾಬಿನೆಟ್ ಆದೇಶಿಸಿದೆ. ಯೂನಿವರ್ಸಿಟಿ ಮಾಡುತ್ತೇವೆ ಎಂದು ಹೇಳಿದ ಪಾಕ್​​​ ಪ್ರಧಾನಿ ಈಗ ಬಾಡಿಗೆಗೆ ನೀಡುತ್ತಿರುವುದ್ಯಾಕೇ ಎಂಬುದು ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಅಂದ್ರೆ ಹಣಕಾಸಿನ ಕೊರತೆ. ಜಗತ್ತಿನ ನಾಯಕನಂತೆ ಪೋಸ್​ ಕೊಡುತ್ತಾ.. ತಾಲಿಬಾನಿ, ಅಲ್​ಖೈದಾ, ಜೈಶ್-ಏ-ಮೊಹಮ್ಮದ್ ಮುಂತಾದ ನೂರಾರು ಉಗ್ರಸಂಘಟನೆಗಳಿಗೆ ಆಶ್ರಯ ನೀಡಿರೋ ಪಾಕಿಸ್ತಾನದ ಆರ್ಥಿಕ ಸ್ಥಿತಿ ಇಂದು ಶೋಚನೀಯವಾಗಿದೆ. ಸಾಲ.. ಸಾಲದ ಮೇಲಿನ ಬಡ್ಡಿ.. ಸಾಲದ ಮೇಲಿನ ಬಡ್ಡಿ ತೀರಿಸಲು ಮತ್ತೆ ಸಾಲ ಅನ್ನೋ ಚಕ್ರದಲ್ಲಿ ಇಂದು ಪಾಕಿಸ್ತಾನ ಸಿಲುಕಿಕೊಂಡಿದೆ. ಅಷ್ಟೇ ಅಲ್ಲ ಇದೇ ಇಮ್ರಾನ್ ಖಾನ್ ಸರ್ಕಾರ, ಇದಾಗಲೇ ಹಲವು ಕಟ್ಟಡಗಳು, ಪಾಕಿಸ್ತಾನ ಏರ್​​ಲೈನ್ಸ್, ಪಾರ್ಕ್​, ರೈಲ್ವೇಯನ್ನ ಚೀನಾಕ್ಕೆ ಒತ್ತೆಯಿಟ್ಟಿದೆ.

Source: newsfirstlive.com Source link