ಲಾಂಗ್​ ಬ್ರೇಕ್​ ನಂತ್ರ ಲಾಂಗ್ ಹಿಡ್ಕೊಂಡು ಬರೋಕೆ ಸಜ್ಜಾದ ಸ್ಯಾಂಡಲ್​ವುಡ್​ ’ಶಿಷ್ಯ’

ಲಾಂಗ್​ ಬ್ರೇಕ್​ ನಂತ್ರ ಲಾಂಗ್ ಹಿಡ್ಕೊಂಡು ಬರೋಕೆ ಸಜ್ಜಾದ ಸ್ಯಾಂಡಲ್​ವುಡ್​ ’ಶಿಷ್ಯ’

2002ರಲ್ಲಿ ‘ಶಿಷ್ಯ’ ಬೇಡ ಕಾಣೋ ಈ ಬಾಳು, ಮಚ್ಚು ಎತ್ತಿದರೆ ಮನೆಹಾಳು ಎಂದು ಹಾಡ್ಕೊಂಡು ನಟ ದೀಪಕ್ ಸ್ಯಾಂಡಲ್​ ವುಡ್​ಗೆ ಮಾಸ್​ ಎಂಟ್ರಿ ಕೊಟ್ಟಿದ್ರು.. ಶಿಷ್ಯ ಚಿತ್ರದಲ್ಲಿ ದೀಪಕ್ ಹೈಟು, ಫೈಟು, ಖದರ್ ನೋಡಿ ಚಿತ್ರರಂಗಕ್ಕೆ ಮತ್ತೋಬ್ಬ ಮಾಸ್​ ಹೀರೋ ಸಿಕ್ಕಿದ ಅನ್ನೋ ಮಾತು ಗಾಂಧಿನಗರದಲ್ಲಿ ರೌಂಡ್​ ಹಾಕಿತ್ತು..

blank

ದೀಪಕ್​ ಮಾಸ್​ ಹೀರೋ ಹಾಕಿ ಮಿಂಚ್ತಾರೆ ಅನ್ನೋದು ಕೇವಲ ಮಾತಿಗಷ್ಟೇ ಸೀಮಿತವಾಯ್ತು..ಯಾಕಂದ್ರೆ ಶಿಷ್ಯ ಸಿನಿಮಾದ ಹಾಡುಗಳು ಸದ್ದು ಮಾಡಿದಷ್ಟು ಸಿನಿಮಾ ಸೌಂಡ್​ ಮಾಡಲೇ ಇಲ್ಲ.. ಇಷ್ಟೇ ಅಲ್ಲ ಶಿಷ್ಯ ನಂತ್ರ ದೀಪಕ್ ಕಾಣಿಸಿದ ಒಂದಷ್ಟು ಚಿತ್ರಗಳು ಜನರ ಮನಸ್ಸಿನಲ್ಲಿ ಉಳಿಯಲೇ ಇಲ್ಲ..

blank

ಯಾವಾಗ ಶಿಷ್ಯ ದೀಪಕ್​ ನಟಿಸಿದ ಚಿತ್ರಗಳು ಬ್ಯಾಕ್​ ಟು ಬ್ಯಾಕು ಸೋಲಿನ ಸರಪಳಿಗೆ ಕೊಂಡಿಯಾದವೋ, ಚಿತ್ರರಂಗದಲ್ಲಿ ದೀಪಕ್​ಗೆ ಅವಕಾಶಗಳು ಗಗನ ಕುಸುಮವಾಗಿ ಬಿಟ್ಟಿತು.. ಅಲ್ಲದೆ ಬಂದಷ್ಟೇ ವೇಗದಲ್ಲಿ ಶಿಷ್ಯ ದೀಪಕ್​ ಚಿತ್ರರಂದಲ್ಲಿ ಕಣ್ಮರೆಯಾದ್ರು.. ಹೀರೋ ಆಗಿ ಮಾರ್ಕೇಟ್​ ಡೌನ್ ಆಗ್ತಿದಂತೆ ದೀಪಕ್​ ಕೆಲವು ಸಿನಿಮಾಗಳಲ್ಲಿ ಸಪೋರ್ಟಿಂಗ್​ ರೋಲ್​ನಲ್ಲೂ ಕಾಣಿಸಿದ್ರು.. ಅದ್ರೆ ಅಲ್ಲೂ ದೀಪಕ್​ ನಸೀಬು ಕೈ ಕೊಟ್ಟಿತು..

blank

ಸಪೋರ್ಟಿಂಗ್ ರೋಲ್ ಸಪೋರ್ಟ್ ಮಾಡದೆ ಇದ್ದಾಗ ಡಾಲಿ ಧನಂಜಯ್ ದಾರಿ ಹಿಡಿದ್ರು ದೀಪಕ್.. ಜೋಗಿ ಪ್ರೇಮ್ ನಿರ್ದೇಶನದ ಏಕ್​ ಲವ್​ ಯಾ ಸಿನಿಮಾದಲ್ಲಿ ವಿಲನ್ ಪಾತ್ರದ ಮೂಲಕ ತನ್ನ ಅಗ್ನಿ ಪರೀಕ್ಷೆಯನ್ನ ಮತ್ತೊಮ್ಮೆ ಕಟ್ಟಿಕೊಂಡಿದ್ದಾರೆ..
ಏಕ್​ ಲವ್ ಯಾ ಸಿನಿಮಾ ರಿಲೀಸ್ ಆಗೋ ಮೊದ್ಲೇ ದೀಪಕ್ ಮತ್ತೊಂದು ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳಲಿದ್ದಾರೆ.. ಹಾಗಾದ್ರೆ ಯಾವುದು ಆ ಸಿನಿಮಾ ಅನ್ನೋದಕ್ಕೆ ಉತ್ತರ ವೀರಂ..

blank

ವೀರಂ ಸಿನಿಮಾ ಪ್ರಜ್ವಲ್ ದೇವರಾಜ್ , ರಚಿತಾ ರಾಮ್ ನಟನೆಯ ಸಿನಿಮಾ.. ಖದರ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ದೀಪಕ್ ನೆಗೆಟಿವ್ ರೋಲ್​​ ಒಂದನ್ನ ಪ್ಲೇ ಮಾಡುತ್ತಿದ್ದಾರೆ..ಈ ಮೂಲಕ ದೀಪಕ್​ ಲಾಂಗ್​ ಬ್ರೇಕ್​ ನಂತ್ರ ಇಂಡಸ್ಟ್ರಿಗೆ ​ಭರ್ಜರಿಯಾಗಿ ಕಮ್​ ಬ್ಯಾಕ್​ ಮಾಡೋ ಸಿಗ್ನಲ್​ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಯಾರ್ ಯಾರ ಲಕ್ ಯಾವ ಯಾವ ಪಾತ್ರದಲ್ಲಿ ಅಡಗಿರುತ್ತೋ ದೇವರೆ ಬಲ್ಲ.. ಶಿಷ್ಯ ಖ್ಯಾತಿಯ ದೀಪಕ್ ಕರಿಯರ್​ಗೆ ಶುಭವಾಗಲಿ ಒಂದೊಳ್ಳೆ ಬ್ರೇಕ್ ಸಿಗ್ಲಿ ಅಂತ ಚಿತ್ರಪ್ರೇಮಿಗಳೇ ಹಾರೈಸುತ್ತೆ..

Source: newsfirstlive.com Source link