ದೇಶದ ರಕ್ಷಣೆಗೆ ಬರಲಿದೆ ಹರ್ಪೂನ್ ಕ್ಷಿಪಣಿ; ₹6 ಸಾವಿರ ಕೋಟಿ ಒಪ್ಪಂದಕ್ಕೆ ಅಮೆರಿಕ ಗ್ರೀನ್ ಸಿಗ್ನಲ್

ದೇಶದ ರಕ್ಷಣೆಗೆ ಬರಲಿದೆ ಹರ್ಪೂನ್ ಕ್ಷಿಪಣಿ; ₹6 ಸಾವಿರ ಕೋಟಿ ಒಪ್ಪಂದಕ್ಕೆ ಅಮೆರಿಕ ಗ್ರೀನ್ ಸಿಗ್ನಲ್

ವಾಷಿಂಗ್ಟನ್: ಭಾರತದೊಂದಿಗೆ 82 ಮಿಲಿಯನ್ ಡಾಲರ್ (ಸುಮಾರು 6 ಸಾವಿರ ಕೋಟಿ) ಮೊತ್ತದ ಹರ್ಪೂನ್ ಜಾಯಿಂಟ್ ಕಾಮನ್ ಟೆಸ್ಟ್ ಸೆಟ್ (ಜೆಸಿಟಿಎಸ್) ಮತ್ತು ಸಂಬಂಧಿತ ಉಪಕರಣಗಳನ್ನು ಮಾರಾಟ ಮಾಡುವ ಒಪ್ಪಂದಕ್ಕೆ ಅಮೆರಿಕಾ ಸಹಿ ಹಾಕಿದೆ. ಈ ಮೂಲಕ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಸರ್ಕಾರ ಭಾರತಕ್ಕೆ ಕೋಟ್ಯಾಂತರ ರೂಪಾಯಿಗಳ ಹರ್ಪೂನ್ ಕ್ಷಿಪಣಿ ಮಾರಟಕ್ಕೆ ಅನುಮೋದನೆ ನೀಡಿದೆ.

ಇದು ಭಾರತ ಮತ್ತು ಅಮೆರಿಕಾ ನಡುವಿನ ದ್ವಿಪಕ್ಷೀಯ ರಕ್ಷಣಾ ಸಂಬಂಧವನ್ನು ವೃದ್ಧಿಸಲು ಮತ್ತು ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸುವ ಉದ್ದೇಶದಿಂದ ಮಾಡಿಕೊಳ್ಳಲಾದ ಒಪ್ಪಂದವಾಗಿದೆ. ಈ ಕುರಿತು ಅಗತ್ಯ ಅಧಿಸೂಚನೆಯನ್ನು ಪೆಂಟಗಾನ್‌ನ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ (ಡಿಎಸ್‌ಸಿಎ) ಪೂರೈಸಿದೆ ಎಂದು ತಿಳಿದು ಬಂದಿದೆ.

ಹರ್ಪೂನ್ ಹಡಗು ನಿರೋಧಕ ಕ್ಷಿಪಣಿ ಇಡೀ ಜಗತ್ತಿನಲ್ಲೇ ಅತ್ಯಂತ ಯಶಸ್ವಿ ಹಡಗು. ಸದ್ಯ 30ಕ್ಕೂ ಹೆಚ್ಚು ದೇಶಗಳ ಸೇನಾ ಪಡೆಗಳಲ್ಲಿ ಇದನ್ನು ಬಳಸಲಾಗುತ್ತಿದೆ.

ಭಾರತ ಒಂದು ಹರ್ಪೂನ್ ಜಾಯಿಂಟ್ ಕಾಮನ್ ಟೆಸ್ಟ್ ಸೆಟ್ ಖರೀದಿಗೆ ಈ ಹಿಂದೆಯೇ ಅಮೆರಿಕಾಗೆ ಮನವಿ ಮಾಡಿತ್ತು. ಈಗ ಅಮೆರಿಕಾ ಅನುಮೋದನೆ ನೀಡಿದ್ದು, 1977ರಲ್ಲಿ ಮೊದಲ ಬಾರಿಗೆ ಬಳಕೆಗೆ ಬಂದ ಹರ್ಪೂನ್ ಎಲ್ಲ ಬಗೆಯ ಹವಾಮಾನದಲ್ಲಿ ಕಾರ್ಯನಿರ್ವಹಣೆ ಮಾಡಬಲ್ಲದು ಎನ್ನಲಾಗಿದೆ.

Source: newsfirstlive.com Source link