ರೌಡಿಶೀಟರ್‌ಗಳಿಗೆ ಪೊಲೀಸರಿಂದ ಬಿಗ್ ಶಾಕ್- ಮನೆಗಳ ಮೇಲೆ ದಾಳಿ

ಬೆಂಗಳೂರು/ಆನೇಕಲ್: ಬೆಳಂಬೆಳ್ಳಗ್ಗೆ ಗಾಢ ನಿದ್ರೆಯಲ್ಲಿದ್ದ ರೌಡಿಶೀಟರ್‌ಗಳಿಗೆ ಬೆಂಗಳೂರು ಹೊರವಲಯದ ಆನೇಕಲ್ ಉಪ ವಿಭಾಗದ ಪೊಲೀಸರು ಬಿಗ್‍ಶಾಕ್ ನೀಡಿದ್ದಾರೆ.

ಆನೇಕಲ್ ಉಪ ವಿಭಾಗದ ಗ್ರಾಮಾಂತರ ಎಎಸ್‍ಪಿ ಲಕ್ಷ್ಮಿ ಗಣೇಶ್ ನೇತೃತ್ವದಲ್ಲಿ, ರೌಡಿ ಶೀಟರ್ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ರಾತ್ರಿ ಮಲಗಿದ್ದ ಸುಮಾರು 150ಕ್ಕೂ ಹೆಚ್ಚು ರೌಡಿ ಶೀಟರ್ ಮನೆಗಳ ಮೇಲೆ ಬೆಳಗಿನ ಜಾವ 3ಗಂಟೆಗೆ ದಾಳಿ ಮಾಡಲಾಗಿದ್ದು, ಮನೆಗಳಲ್ಲಿ ಅಕ್ರಮ ಶಸ್ತ್ರಾಸ್ತ್ರ ಮತ್ತು ಮಾರಾಕಾಸ್ತ್ರಗಳ ಹುಡುಕಾಟ ನಡೆಸಿದ್ದಾರೆ.

ಆನೇಕಲ್, ಅತ್ತಿಬೆಲೆ, ಸರ್ಜಾಪುರ, ಹೆಬ್ಬಗೋಡಿ, ಜಿಗಣಿ, ಬನ್ನೇರುಘಟ್ಟ ಮತ್ತು ಸೂರ್ಯ ಸಿಟಿ ವ್ಯಾಪ್ತಿಯ ರೌಡಿಶೀಟರ್‌ಗಳನ್ನು ವಶಕ್ಕೆಪಡೆದಿದ್ದಾರೆ. ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಸರ್ಕಾರಿ ಶಾಲಾ ಕ್ರೀಡಾಂಗಣದಲ್ಲಿ ಪೆರೇಡ್ ನಡೆಸಲಾಯಿತು. ಪೆರೇಡ್ ವೇಳೆ ರೌಡಿಶೀಟರ್‌ಗಳಿಗೆ ಖಡಕ್ ವಾನಿರ್ಂಗ್ ನೀಡಿದ ಎಎಸ್‍ಪಿ ಲಕ್ಷ್ಮಿ ಗಣೇಶ್ ನಂತರ ಮಾತನಾಡಿ ಯಾವುದೇ ಅಕ್ರಮ ಮತ್ತು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದರೆ ಗೂಂಡಾ ಕಾಯಿದೆ ಜಾರಿ ಮಾಡಿ, ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Source: publictv.in Source link