2ವರ್ಷದ ಮಗು ಬರೋಬ್ಬರಿ 45ಕೆಜಿ ತೂಕ

ನವದೆಹಲಿ: ಸುಮಾರು 45 ಕೆಜಿ ತೂಕವಿದ್ದ 2ವರ್ಷದ ಬಾಲಕಿಗೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ತೂಕ ಕಡಿಮೆ ಮಾಡುವ ಬ್ಯಾರಿಯಾಟ್ರಿಕ್ ಸರ್ಜರಿಯನ್ನು ಯಶಸ್ವಿಯಾಗಿ ಮಾಡಲಾಗಿದೆ.

ಬಾಲಕಿಗೆ ಅತಿಯಾಗಿ ತೂಕವಿದ್ದ ಕಾರಣ ವೀಲ್‍ಚೇರ್ ಬಿಟ್ಟು ಕೆಳಗೆ ಇಳಿಯುತ್ತಿರಲಿಲ್ಲ. ಆಕೆಗೀಗ ದೆಹಲಿಯ ಮ್ಯಾಕ್ಸ್ ಸೂಪರ್​ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಲಾಗಿದೆ. ಮತ್ತು ಕಳೆದ ಒಂದು ದಶಕದಲ್ಲಿ ಬ್ಯಾರಿಯಾಟ್ರಿಕ್ ಸರ್ಜರಿಗೆ ಒಳಗಾದ ದೇಶದ ಅತ್ಯಂತ ಕಿರಿಯ ರೋಗಿಯಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಬ್ಯಾರಿಯಾಟ್ರಿಕ್ ಸರ್ಜರಿ ಎಂದರೇನು?
ತೂಕ ಇಳಿಸಲು ಈ ಬ್ಯಾರಿಯಾಟ್ರಿಕ್ ಸರ್ಜರಿ ಮಾಡಲಾಗುತ್ತದೆ. ಆದರೆ ಈ ಶಸ್ತ್ರಚಿಕಿತ್ಸೆ ಮಕ್ಕಳಲ್ಲಿ ತೀರ ಕಡಿಮೆ. ಈ ಸರ್ಜರಿ ಮೂಲಕ ಹಸಿವು ಕಡಿಮೆ ಆಗುವಂತೆ ಮಾಡಲಾಗುತ್ತದೆ. ಇದರಿಂದ ತೂಕ ನಷ್ಟ ಆಗುವ ಜತೆ ಆರೋಗ್ಯದಲ್ಲೂ ಸುಧಾರಣೆಯಾಗುತ್ತದೆ. ಸರ್ಜರಿಯ ಮೂಲಕ ಮಾಡುವ ಬದಲಾವಣೆಗಳಿಂದ ಆಹಾರ ತೆಗೆದುಕೊಳ್ಳುವ ಪ್ರಮಾಣವೂ ಕಡಿಮೆ ಆಗುತ್ತದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

ಬಾಲಕಿ ಜನಿಸುವಾಗ 2.5 ಕೆಜಿ ತೂಕವಿದ್ದಳು. ಆದರೆ ಕೆಲವೇ ದಿನಗಳಲ್ಲಿ ವಿಪರೀತವಾಗಿ ತೂಕ ಜಾಸ್ತಿಯಾಯಿತು. ಆರು ತಿಂಗಳ ಹೊತ್ತಿಗೆ 14 ಕೆಜಿಯಾಗಿದ್ದಳು.  2 ವರ್ಷ ತುಂಬುವ ಹೊತ್ತಿಗೆ 45 ಕೆಜಿ ಆಗಿದ್ದಳು. ಆದರೆ ಆಕೆಯ ಸಹೋದರನಿಗೆ 8ವರ್ಷ. ಆತ ತನ್ನ ವಯಸ್ಸಿಗೆ ತಕ್ಕಂತೆ ಬೆಳೆಯುತ್ತಿದ್ದಾನೆ. ತೂಕವೂ ಸಹಜವಾಗಿದೆ ಎಂದು ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಮನ್‍ಪ್ರೀತ್ ಸೇಥಿ ಹೇಳಿದ್ದಾರೆ. ಇದನ್ನೂ ಓದಿ:  ಒಂದೇ ಚಾರ್ಜರ್ ಎರಡು ಮೊಬೈಲ್- ಚಾರ್ಜ್‍ಗಾಗಿ ಬಡಿದಾಟ, ಕೊಲೆ

ಮಗುವಿಗೆ ಸರ್ಜರಿ ಮಾಡಲಾಗಿದೆ. ಆದರೆ ಇಷ್ಟಕ್ಕೇ ಮುಗಿಯುವುದಿಲ್ಲ. ಬಾಲಕಿಗೆ ವಿಶೇಷವಾಗಿ, ಕಟ್ಟುನಿಟ್ಟಾಗಿ ಡಯಟ್ ಮಾಡಿಸಬೇಕು. ಅವಳಿಗೆ ನೀಡಲಾಗುವ ಪೋಷಕಾಂಶಗಳ ಅಳತೆಯ ಬಗ್ಗೆ ನಿಗಾ ಇರಬೇಕು. ಮುಂದಿನ ವರ್ಷದ ಹೊತ್ತಿಗೆ ಅವಳ ತೂಕ ಕಡಿಮೆಯಾಗುತ್ತದೆ ಮತ್ತು ಅಲ್ಲಿಂದ ಸಹಜವಾಗಿ ಬೆಳೆಯುತ್ತಾಳೆಂದು ನಿರೀಕ್ಷೆ ಇದೆ. ಆದರೆ ವೈದ್ಯಕೀಯ ತಂಡ ಅವಳ ಆರೋಗ್ಯದ ಬಗ್ಗೆ ಗಮನ ಇಟ್ಟೇ ಇಡುತ್ತದೆ. ಕಾಲಕಾಲಕ್ಕೆ ತಪಾಸಣೆ ಆಗಬೇಕಾಗುತ್ತದೆ. ದೇಹದಲ್ಲಿ ಶಕ್ತಿಯೂ ಬರಬೇಕಿದೆ ಎಂದು ಅವರು ವಿವರಿಸಿದ್ದಾರೆ ವೈದ್ಯರು ತಿಳಿಸಿದ್ದಾರೆ.

Source: publictv.in Source link