ವಿದ್ಯುತ್ ತಂತಿ ತಗುಲಿ ಜೋಡೆತ್ತು ಸಾವು

ಯಾದಗಿರಿ: ಜೆಸ್ಕಾಂ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ತಂತಿ ತಗುಲಿ ಜೋಡೆತ್ತು ಸಾವನ್ನಪ್ಪಿರುವ ಘಟನೆ ಶೇಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಶೇಟ್ಟಿಗೇರಿ ಗ್ರಾಮದಲ್ಲಿ ಭೀಮರಾಯ ಜಿನಿಕೇರಿ ರೈತ ಹೊಲದಲ್ಲಿ ಉಳುಮೆ ಮಾಡಿ ಸಂಜೆ ಎತ್ತುಗಳನ್ನು ಬಿಳು ಪ್ರದೇಶದಲ್ಲಿ ಮೇಯಲು ಬಿಟ್ಟಿದ್ದರು. ಈ ವೇಳೆ 11ಕೆ,ವಿ ವಿದ್ಯುತ್ ಕಂಬ ತಂತಿ ಹರಿದು ಬಿದ್ದ ಪರಿಣಾಮ ಜೋಡೆತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

 

ಸುಮಾರು ಎರಡು ತಿಂಗಳ ಹಿಂದೆ ಭೀಮರಾಯ ಒಂದು ಲಕ್ಷದ ಹತ್ತು ಸಾವಿರ ರೂಪಾಯಿ ಸಾಲ ಮಾಡಿ ಎರಡು ಎತ್ತಗಳನ್ನು ಖರೀದಿ ಮಾಡಿದ್ದರು. ರೈತ ಮೊದಲೇ ಕೊರೊನಾದಿಂದ ತತ್ತರಿಸಿ ಕೈಸಾಲ ಮಾಡಿ ಎತ್ತು ಖರೀದಿಸಿ ಕೃಷಿ ಮಾಡಲು ಮುಂದಾಗಿದ್ದರು. ಈಗ ಜೆಸ್ಕಾಂ ಅಧಿಕಾರ ನಿರ್ಲಕ್ಷ್ಯದಿಂದ ರೈತನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮನೆಯ ಹಿರಿಮಕ್ಕಳಂತಿದ್ದ ಎತ್ತುಗಳನ್ನು ಕಳೆದುಕೊಂಡ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ. ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Source: publictv.in Source link