ಬಾಲಿವುಡ್​ ಬಸ್​ ಹತ್ತಿದ ಪಠಾಕಾ ಪೋರಿ.. ಹ್ಯಾಂಡ್​ಸಮ್​ ಹಂಕ್​ ಜೊತೆ ಹೆಜ್ಜೆ ಹಾಕ್ತಾಳಾ ವಜ್ರಕಾಯ ಬೆಡಗಿ?

ಬಾಲಿವುಡ್​ ಬಸ್​ ಹತ್ತಿದ ಪಠಾಕಾ ಪೋರಿ.. ಹ್ಯಾಂಡ್​ಸಮ್​ ಹಂಕ್​ ಜೊತೆ ಹೆಜ್ಜೆ ಹಾಕ್ತಾಳಾ ವಜ್ರಕಾಯ ಬೆಡಗಿ?

ಲಕ್ ಅನ್ನೋದು ಹಾಗೆ, ಅದು ಬರೋ ತನಕ ಕಾಯಲೇ ಬೇಕು.. ಅದು ಬಂದ್ಮೆಲೆ ಅದರಂತೆ ಬದುಕಲೇ ಬೇಕು.. ವಜ್ರಕಾಯ ಸಿನಿಮಾದಲ್ಲಿ ಪಠಾಕ ಪೋರಿಯಾಗಿ ಮಿಂಚಿದ್ದ ನಭಾ ನಟೇಶ್ ಇಂದು ತೆಲುಗಿನಲ್ಲಿ ಸಕ್ಸಸ್ ಬೌಂಡ್ರಿ ಬಾರಿಸುತ್ತಿದ್ದಾರೆ.. ಈಗ ಒಂದು ಹೆಜ್ಜೆ ಮುಂದಿಟ್ಟು ಬಾಲಿವುಡ್​​​​​ನತ್ತ ಗೆಜ್ಜೆ ಕಟ್ಟಿ ಹೆಜ್ಜೆ ಇಡುತ್ತಿದ್ದಾರೆ.. ಅದ್ಯಾವ ಹಿಂದಿ ಸಿನಿಮಾದಲ್ಲಿ ನಮ್ಮ ನಭಾ ನಟಿಸುತ್ತಿದ್ದಾರೆ ಅನ್ನೋದನ್ನ ಹೇಳ್ತಿವಿ ಈ ಸ್ಟೋರಿ ನೋಡಿ..

blank

ನಭಾ ನಟೇಶ್..ಶೃಂಗೇರಿ ಹುಡ್ಗಿ ಇವತ್ತು ಸಿಂಗಾಪುರದ ತನಕ ಗುರುತಿಸೋ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.. 2015ರಲ್ಲಿ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯ ವಜ್ರಕಾಯ ಸಿನಿಮಾದ ಮೂಲಕ ಬಣ್ಣ ಜಗತ್ತಿಗೆ ಪರಿಚಯವಾದ್ರು.. ಇವತ್ತಿಗೂ ಕನ್ನಡಿಗರು ನಭಾ ನಟೇಶ್ ಅವರನ್ನ ವಜ್ರಕಾಯದ ಪಠಾಕಾ ಪೋರಿ ಅಂತಲೇ ಗುರುತಿಸುತ್ತಾರೆ..

ಕನ್ನಡದಲ್ಲಿ ವಜ್ರಕಾಯ, ಲೀ ಹಾಗೂ ಸಾಹೇಬ ಸಿನಿಮಾದಲ್ಲೊಂದು ಹಾಡಲ್ಲಿ ನಟಿಸಿದ ನಂತರ ನಭಾ ಟಾಲಿವುಡ್ ಎಂಬ ನಭೋ ಸಿನಿ ಮಂಡಲಕ್ಕೆ ಹಾರಿದ್ರು.. ಅಲ್ಲಿ ನಭಾ ನಟೇಶ್ ಲೈಫೇ ಚೈಂಜ್ ಆಗಿ ಹೋಯ್ತು..

blank

ನಾನು ದೋಚುಕೊಂಡವಂಟೆ, ಅಧುಗೋ ಸಿನಿಮಾಗಳಲ್ಲಿ ಕಂಡ ನಭಾ ಪೂರಿ ಜಗನ್ನಾಥ್ ನಿರ್ದೇಶನದ ಐಸ್ಮಾರ್ಟ್ ಶಂಕರ್ ಸಿನಿಮಾದ ಮೂಲಕ ಲಕ್ಕಿ ಹೀರೋಯಿನ್ ಅನ್ನೋ ಪಟ್ಟಕ್ಕೇರಿದ್ರು.. ಅನೇಕ ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಇರೋ ನಭಾ ಈಗ ಬಾಲಿವುಡ್ ಬಸ್ ಹತ್ತಲಿದ್ದಾರೆ.. ಅದೂ ಯಾರ ಸಿನಿಮಾದಲ್ಲಿ ಗೊತ್ತಾ ಹೃತಿಕ್ ರೋಷನ್ ಸಿನಿಮಾದಲ್ಲಿ..

blank

ಬಾಲಿವುಡ್​​​​ ಲೋಕದ ಮಂದಿಗೆ ಈಗ ವೆಬ್​ ಸೀರಿಸ್ ರುಚಿ ಹತ್ತಿದೆ..ಬಾಲಿವುಡ್ ಸಿನಿಮಾ ಮಂದಿ ಈಗ ಸೌಥ್ ನಟ ನಟಿಯರನ್ನ ಸೇರಿಸ್ಕೊಂಡು ವೆಬ್ ಸೀರಿಸ್​​​​ ಮಾಡೋದ್ರಲ್ಲಿ ಬ್ಯುಸಿ ಯಾಗಿದ್ದಾರೆ.. ನಮ್ಮ ಕನ್ನಡದ ಬಹುಭಾಷ ನಟಿ ಪ್ರಿಯಾಮಣಿ, ಸಮಂತಾ ಸೇರಿದಂತೆ ಇನ್ನಿತರರು ಬಾಲಿವುಡ್ ಬಾಗಿಲಿನ ಹೊಸ್ತಿಲಿನಲ್ಲಿ ಬಂಗಾರದ ಸೇರನ್ನ ಒದ್ದು ಹೆಸರು ಮಾಡ್ತಿದ್ದಾರೆ..

blank

ಅದೇ ರೀತಿ ಚಿಕ್ಕಮಗಳೂರಿನ ಚಿಕ್ಕ ಮಲ್ಲಿಗೆ ನಭಾ ನಟೇಶ್​​ಗೂ ಬಾಲಿವುಡ್ ವೆಬ್ ಸೀರಿಸ್ ಅವಕಾಶ ಹುಡುಕಿಕೊಂಡು ಬಂದಿದೆಯಂತೆ.. ದಿ ನೈಟ್ ಮ್ಯಾನೇಜರ್ ಅನ್ನೋ ಇಂಗ್ಲೀಷ್ ವೆಬ್ ಸರಣಿಯನ್ನ ಹಿಂದಿಗೆ ಡಬ್ ಮಾಡಲು ಬಾಲಿವುಡ್ ಪಾಳ್ಯ ಪ್ಲಾನ್ ಮಾಡ್ತಿದೆ.. ಹೃತಿಕ್​ಗೆ ಜೋಡಿಯಾಗಿ ನಭಾ ನಟೇಶ್ ಈ ವೆಬ್ ಸರಣಿಯಲ್ಲಿ ಕಂಗೋಳಿಸೋ ಸಾಧ್ಯತೆ ಇದೆ..

Source: newsfirstlive.com Source link