ಗೂಳಿಯಿಂದ ಮಾರಣಾಂತಿಕ ದಾಳಿ; ಪವಾಡ ಸದೃಶ ಹೊಸ ಮುಖ ಪಡೆದ ಯುವಕ ಹೇಳಿದ್ದೇನು?

ಗೂಳಿಯಿಂದ ಮಾರಣಾಂತಿಕ ದಾಳಿ; ಪವಾಡ ಸದೃಶ ಹೊಸ ಮುಖ ಪಡೆದ ಯುವಕ ಹೇಳಿದ್ದೇನು?

ರಾಜಸ್ಥಾನದ ಬಿಕನೇರ್ ಮೂಲದ 38 ವರ್ಷದ ವ್ಯಕ್ತಿಯೊಬ್ಬರು ಬುಲ್​ ದಾಳಿಗೆ ಒಳಗಾಗಿ ಬರೋಬ್ಬರಿ 11 ತಿಂಗಳ ಬಳಿಕ ಹೊಸ ಮುಖದೊಂದಿಗೆ ಚೇತರಿಸಿಕೊಂಡಿದ್ದಾರೆ. ಬುಲ್​ ದಾಳಿ ವೇಳೆ ಅವರ ಮುಖಕ್ಕೆ ಗಂಭೀರವಾಗಿ ಹಾನಿಯಾಗಿತ್ತು. ಬಿಶ್ನೋಯಿ ಹಲವಾರು ಶಸ್ತ್ರ ಚಿಕಿತ್ಸೆಗಳ ಬಳಿಕ ಚೇತರಿಸಿಕೊಂಡವರು. 2020ರ ಸೆಪ್ಟೆಂಬರ್​​ನಲ್ಲಿ ಕರ್ನಿ ಬಿಶ್ನೋಯಿ ಅವರು ಗೂಳಿ ದಾಳಿಯಿಂದಾಗಿ ತಮ್ಮ ಸುಂದರವಾಗಿದ್ದ ಮುಖವನ್ನ ಕಳೆದುಕೊಂಡಿದ್ದರು.

02tov8jc

ಮ್ಯಾಕ್​​ ಸಕೇತ್ ಆಸ್ಪತ್ರೆ ನೀಡಿರುವ ಹೇಳಿಕೆ ಪ್ರಕಾರ.. ಎಫ್​ಎಂಸಿಜಿ ಕಂಪನಿಯ ಆಪರೇಟಿಂಗ್ ಹೆಡ್​ ಆಗಿ ಕಾರ್ಯನಿರ್ವಹಿಸುತ್ತಿರುವ ಬಿಶ್ನೋಯಿ ಅವರು, ಸೆಪ್ಟೆಂಬರ್ 2020ರಲ್ಲಿ ಕಾರನ್ನ ಡ್ರೈವ್ ಮಾಡಿಕೊಂಡು ಹೋಗ್ತಿದ್ದರು. ಈ ವೇಳೆ ಕಾರಿನ ವಿಂಡೋ ತೆರೆದಿತ್ತು. ರಸ್ತೆ ಮಧ್ಯೆ ದನಗಳು ಹಾದು ಹೋಗುತ್ತಿದ್ದರಿಂದ ನಿಧಾನವಾಗಿ ಪ್ರಯಾಣಿಸುತ್ತಿದ್ದರು. ಈ ವೇಳೆ ಏಕಾಏಕಿಯಾಗಿ ನುಗ್ಗಿ ಬಂದ ಗೂಳಿ, ಅವರ ಮೇಲೆ ಎರಗಿತ್ತು.
ಗೂಳಿ ಮಾಡಿದ ದಾಳಿಯಿಂದ ಬಿಶ್ನೋಯಿ ಅವರು ಬಲಗಣ್ಣನ್ನ ಕಳೆದುಕೊಂಡಿದ್ದರು. ಜೊತೆಗೆ ಬಲಭಾಗದ ಮುಖ ಜಜ್ಜಿಹೋಗಿತ್ತು. ಮೂಗು, ತುಟಿ ಹಾಗೂ ನೆತ್ತಿ ಹರಿದುಹೋಗಿತ್ತು. ತನ್ನ ಕೊಂಬಿನಿಂದ ಕಾರಿನಲ್ಲಿ ಕೂತಿದ್ದ ಬಿಶ್ನೋಯಿ ಅವರನ್ನ ನೆಲಕ್ಕೆ ಬೀಳಿಸಿ, ಅಷ್ಟೆಲ್ಲಾ ಅನಾಹುತ ಮಾಡಿದ್ದ ಬುಲ್, ಕೇವಲ ಜೀವವನ್ನ ಮಾತ್ರ ಉಳಿಸಿಹೋಗಿತ್ತು.

0fkjggq8

ಕೇವಲ ಬಿಶ್ನೋಯಿಗೆ ಮಾತ್ರವಲ್ಲ ಕಾರಿನಲ್ಲಿದ್ದ ಅವರ ಸಹೋದರಿ ಹಾಗೂ ಸ್ನೇಹಿತನಿಗೂ ಗಂಭೀರವಾದ ಏಟು ಮಾಡಿತ್ತು. ಕೂಡಲೇ ಇವರನೆಲ್ಲಾ ಬಿಕನೇರ್​​ನಲ್ಲಿರುವ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೂಡಲೇ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆ ಹೋಗುವಂತೆ ತಿಳಿಸಲಾಗಿತ್ತು. ಅದಾದ ಬಳಿಕ ಸಕೇತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಿಶ್ನೋಯಿಯನ್ನ ನೋಡಿದ ವೈದ್ಯರೇ ಗಾಬರಿಯಾಗುತ್ತಾರೆ. ಕೂಡಲೇ ವೆಂಟಿಲೇಟರ್​​ನಲ್ಲಿ ಇರಿಸಿ ಚಿಕಿತ್ಸೆಯನ್ನ ಮುಂದುವರಿಸಲಾಯಿತು.

ನ್ಯೂರೋ ಸರ್ಜನ್ ಮತ್ತು ಪ್ಲಾಸ್ಟಿಕ್ ಸರ್ಜರಿ ತಂಡಕ್ಕೆ ಮಾಹಿತಿ ನೀಡಿ ಬರುವಂತೆ ಸೂಚಿಸಲಾಯಿತು. ಅದರಂತೆ ಅಲ್ಲಿಗೆ ಆಗಮಿಸಿದ್ದ ತಜ್ಞ ವೈದ್ಯರ ತಂಡ ಕೊರೊನಾ ಪ್ರೋಟೋಕಾಲ್ ಪ್ರಕಾರ ಬರೋಬ್ಬರಿ 10 ಗಂಟೆಗಳ ಕಾಲ ಪಿಪಿಇ ಕಿಟ್ ಧರಿಸಿ, ಹರಿದು ಹೋಗಿದ್ದ ಮೂಗು, ತುಂಡಾಗಿದ್ದ ಮೂಳೆಯನ್ನ ಜೋಡಿಸಲಾಯಿತು. ಅದಾದ ಬಳಿ ಮತ್ತೆ 9 ಗಂಟೆಗಳ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಯಿತು. ಈ ಮೂಲಕ ಹರಿದು ಭಯಾನಕ ಗಾಯವಾಗಿದ್ದ ಮುಖವನ್ನ ಜೋಡಿಸುವುದರ ಜೊತೆಗೆ ಜೀವವನ್ನೂ ಉಳಿಸುವಲ್ಲಿ ವೈದ್ಯರ ತಂಡ ಯಶಶ್ವಿಯಾಯಿತು ಅಂತಾ ಆಸ್ಪತ್ರೆ ತಿಳಿಸಿದೆ.

3uh7pslg

ಈ ಎಲ್ಲಾ ಘಟನೆಯ ಬಳಿಕ ಅಂದ್ರೆ 4 ತಿಂಗಳ ಬಳಿ ಮತ್ತೆ ಎರಡನೇ ಬಾರಿಗೆ ಅವರು ಸರ್ಜರಿಗೆ ಒಳಗಾದರು. ಯಾಕಂದ್ರೆ ಈ ಘಟನೆಯ ನಂತರ ಅವರ ಬಲಭಾಗದ ಮುಖಕ್ಕೆ ಸ್ಟ್ರೋಕ್ ಆಗಿತ್ತು. ಇದರಿಂದ ಅವರ ಬಲ ಬದಿಯ ಹುಬ್ಬ, ಹಣೆ ಎತ್ತಲು ಅಸಮರ್ಥರಾದರು. ಹೀಗಾಗಿ ಮತ್ತೆ ನಾವು ಸರ್ಜರಿ ಮಾಡಬೇಕಾಯಿತು ಅಂತಾ ಆಸ್ಪತ್ರೆ ಹೇಳಿದೆ. ಜುಲೈ ವೇಳೆಗೆ, ಅವರು ಮುಖದ ಶೇಪ್ ಬದಲಾಗಿದೆ, ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ಮುಂದಿನ ಕೆಲವೇ ತಿಂಗಳಲ್ಲಿ ಕೃತಕ ಕಣ್ಣು ಮತ್ತು ಇತರೆ ಸಣ್ಣಪುಟ್ಟ ಚಿಕಿತ್ಸೆಗೆ ಒಳಗಾಗಲಿದ್ದಾರೆ ಅಂತಾ ಸಕೇತ್ ಆಸ್ಪತ್ರೆ ತಿಳಿಸಿದೆ.

ವಿಶೇಷ ವರದಿ: ಗಣೇಶ್ ಕೆರೆಕುಳಿ, ಡಿಜಿಟಲ್ ಡೆಸ್ಕ್

Source: newsfirstlive.com Source link