ಮೂರನೇ ಅಲೆ ಆತಂಕದ ಮಧ್ಯೆ ಮತ್ತೊಂದು ಆಘಾತಕಾರಿ ನ್ಯೂಸ್

ಮೂರನೇ ಅಲೆ ಆತಂಕದ ಮಧ್ಯೆ ಮತ್ತೊಂದು ಆಘಾತಕಾರಿ ನ್ಯೂಸ್

ಬೇರೆ ದೇಶಗಳಿಗೆ ವ್ಯಾಕ್ಸಿನ್​ ಪೂರೈಕೆ ಮಾಡೋಷ್ಟು ಸಮರ್ಥವಾಗಿದ್ದ ಭಾರತ ಮುಂದೊಂದು ದಿನ ನಮಗೆ ಕೊರತೆ ಸೃಷ್ಟಿ ಆಗುತ್ತೆ ಅನ್ನೋ ಕನಸು ಕೂಡ ಕಂಡಿರಲಿಲ್ಲ. ದೇಸಿ ವ್ಯಾಕ್ಸಿನ್​​ಗಳಾದ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್​ ಎರಡು ಸಮರ್ಪಕವಾಗಿ ಪೂರೈಕೆ ಆಗುತ್ತೆ ಅಂತಾ ದೇಶವೇ ಅಂದುಕೊಂಡಿತ್ತು. ಆದ್ರೆ ಅದು ಕೊವ್ಯಾಕ್ಸಿನ್​ ಲಸಿಕೆ ಕೊರತೆಯಿಂದ ಹುಸಿಯಾಗಿತ್ತು. ಹಾಗಾದ್ರೆ ಕೋವ್ಯಾಕ್ಸಿನ್​ ಕೊರತೆಗೆ ನಿಖರವಾದ ಕಾರಣವೇನು? ನಿರ್ಧಿಷ್ಟ ಗುರಿಯನ್ನಿಟ್ಟುಕೊಂಡು ಕೋವ್ಯಾಕ್ಸಿನ್​​ ಲಸಿಕೆ ಉತ್ಪಾದನೆ ಮಾಡಿದ್ರು. ಅದು ಪೂರೈಕೆ ಆಗಲಿಲ್ಲ ಯಾಕೆ ಗೊತ್ತಾ?

ಭಾರತದಲ್ಲಿ ಯಾವಾಗ ಕೊರೊನಾ ವೈರಸ್​ ವ್ಯಾಪಕವಾಗಿ ಹರಡೋದಕ್ಕೆ ಶುರು ಆಗಿತ್ತೋ ಆಗ ದೇಶದ ಜನರನ್ನ ಹೆಚ್ಚು ಆತಂಕಕ್ಕೆ ದೂಡಿತ್ತು. ಆಗಲೇ ನೋಡಿ ಜನ ಒಂದು ಕಾರಣದಿಂದಾಗಿ ನಿಟ್ಟುಸಿರು ಬಿಡುವಂತಾಗಿದ್ದು. ಅದೇ ದೇಶಿಯವಾಗಿ ಉತ್ಪಾದನೆ ಆಗುತ್ತಿದ್ದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯಿಂದ ​ ಕೊಂಚ ನಿಟ್ಟುಸಿರು ಬಿಡುವಂತಾಗಿತ್ತು. ಕೇಂದ್ರದಿಂದ ಅನುಮತಿಯನ್ನ ಕೂಡ ಪಡೆದುಕೊಂಡು ದೇಶದಲ್ಲಿ ಎರಡು ಲಸಿಕೆಗಳನ್ನ ನೀಡಲು ಮುಂದಾಗಿ ದೊಡ್ಡ ಮಟ್ಟದಲ್ಲಿ ಅಭಿಯಾನ ಕೂಡ ಆರಂಭಿಸಲಾಗಿತ್ತು.

blank

ಅಂದು ಆರಂಭಗೊಂಡ ಲಸಿಕೆ ಅಭಿಯಾನ ಇಂದಿಗೂ ಮುಂದುವರೆದು ಹಂತ ಹಂತವಾಗಿ ದೇಶದಲ್ಲಿ ಲಸಿಕೆ ವಿತರಣೆಯನ್ನ ಹೆಚ್ಚಿಸಲಾಗಿತ್ತು. ಆ ಮೂಲಕ ದೇಶದಲ್ಲಿ 2021ರ ಡಿಸೆಂಬರ್ ಅಂತ್ಯದ ವೇಳೆಗೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೊನಾ ವೈರಸ್​ ಲಸಿಕೆ ವಿತರಿಸುವ ಗುರಿ ಹೊಂದಲಾಗಿದೆ. ಆದ್ದರಿಂದಲೇ ಕೆಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಿಗದಿತ ಗುರಿ ತಲುಪುವುದಕ್ಕಾಗಿ ಲಸಿಕೆ ಉತ್ಪಾದನೆ ವೇಗವನ್ನ ಹೆಚ್ಚಿಸುಚುದಕ್ಕೆ ಕಂಪನಿಗಳಿಗೆ ಸೂಚನೆ ಕೂಡ ನೀಡಲಾಗಿದೆ. ಅದಾಗ್ಯೂ ಭಾರತ್ ಬಯೋಟೆಕ್​​​​​​​ ಕಂಪನಿಯ ಕೊವ್ಯಾಕ್ಸಿನ್​​ ಲಸಿಕೆ ಉತ್ಪಾದನೆಯಲ್ಲಿ ತೀವ್ರ ವಿಳಂಬ ಕಂಡು ಬಂದಿತ್ತು.

ಕೊವ್ಯಾಕ್ಸಿನ್​​ ಉತ್ಪಾದನೆ ಮತ್ತು ಪೂರೈಕೆಯಲ್ಲಿ ವಿಳಂಬ
ಇಂದು ದೇಶಿಯ ಕಂಪನಿಯಾದ ಭಾರತ್​ ಬಯೋಟೆಕ್​​ ಕೋವ್ಯಾಕ್ಸಿನ್​ ಬಗ್ಗೆ ಇಡೀ ಪ್ರಪಂಚದಲ್ಲೇ ಸುದ್ದಿಯಾಗುತ್ತಿದೆ. ಅದು ಕೊರೊನಾ ಡೆಲ್ಟಾ ತಳಿ ವಿರುದ್ದ ಶೇಕಡ 68 ರಷ್ಟು ಪರಿಣಾಮಕಾರಿಯಾಗಿದೆ ಅನ್ನೋದು ಐಸಿಎಂಆರ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಇದರ ನಡುವೆ ಭಾರತ್ ಬಯೋಟೆಕ್​​​ ತಯಾರಿಸಿದ್ದ ಕೊರೊನಾ ಲಸಿಕೆಯಲ್ಲಿ ವಿಳಂಬ ಆಗಿತ್ತು ಎಂದು ಕೇಂದ್ರ ಸರ್ಕಾರದ ಕೊವಿಡ್​​ 19 ಕಾರ್ಯುಪಡೆಯ ಸದಸ್ಯ ಎನ್​ ಕೆ ಅರೋರಾ ತಿಳಿಸಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಅವರು ನೀಡಿದ್ದ ಸಂದರ್ಶನವೊಂದರಲ್ಲಿ ಇದನ್ನ ಅರೋರ ಒಪ್ಪಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಲಸಿಕೆ ಸಂಗ್ರಹದಲ್ಲಿ ಭಾರಿ ಹಿನ್ನಡೆ
ಹೌದು.. ಭಾರತದಲ್ಲಿ ಅತಿ ಹೆಚ್ಚು ಬಳಕೆ ಆಗುತ್ತಿರುವ ಎರಡು ವ್ಯಾಕ್ಸಿನ್​ ಗಳ ಪೈಕಿ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್​​ ಲಸಿಕೆಗಳನ್ನ ಅತಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಿ ಸಂಗ್ರಹಿಸುವ ಗುರಿಯನ್ನ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಕಿಕೊಂಡಿದೆ. ಆದ್ರೆ ಆ ಒಂದೇ ಒಂದು ವಿಚಾರವಾಗಿ ಕೇಂದ್ರ ಸರ್ಕಾರದ ಲಸಿಕೆ ಸಂಗ್ರಹದಲ್ಲಿ ಭಾರಿ ಹಿನ್ನಡೆ ಆಗಿದೆ ಅಂತಾ ಹೇಳಲಾಗುತ್ತಿದೆ.

blank

ಕೊವ್ಯಾಕ್ಸಿನ್​​ ಉತ್ಪಾದನೆಯಲ್ಲಿ ಆಗಿದ್ದಾದ್ರು ಏನು?
ಹೌದು.. ಭಾರತ್ ಬಯೋಟೆಕ್ ಕಂಪನಿ ತನ್ನ ಕಂಪನಿಯ ವ್ಯಾಕ್ಸಿನ್​ ಅನ್ನ ಹೆಚ್ಚು ಹೆಚ್ಚು ಉತ್ಪಾದಿಸಲು ಗುರಿಯನ್ನ ಇಟ್ಟುಕೊಂಡಿತ್ತು. ಅದಕ್ಕಾಗಿ ಭಾರತ್ ಬಯೋಟೆಕ್ ಕಂಪನಿಯು ಹೊಸದಾಗಿ ಬೆಂಗಳೂರಿನಲ್ಲಿ ಬೃಹತ್​ ಘಟಕವೊಂದನ್ನ ಸ್ಥಾಪಿಸಿತ್ತು. ಹೀಗೆ ತರಾತುರಿಯಲ್ಲಿ ಘಟಕ ಸ್ಥಾಪಿಸಿ ಅಲ್ಲಿ ಕೊವ್ಯಾಕ್ಸಿನ್​ ಉತ್ಪಾದಿಸಲು ಮುಂದಾಗಿತ್ತು. ಆದರಂತೆ ಮೊದಲ ಬ್ಯಾಚ್​​ನ ಲಸಿಕೆಯನ್ನ ಉತ್ಪಾದಿಸಿತ್ತು. ಹೀಗೆ ಉತ್ಪಾದಿಸಿದ ಮೊದಲ ಬ್ಯಾಚ್​​ನ ಲಸಿಕೆಯ ಗುಣಮಟ್ಟವನ್ನ ಕಾಪಾಡಿಕೊಳ್ಳಲು ಆಗಿರಲಿಲ್ಲ. ಅಲ್ಲದೇ ಅದು ಉತ್ತಮವಾಗಿರಲಿಲ್ಲ ಅನ್ನೋದು ಕೇಂದ್ರ ಆರೋಗ್ಯ ಇಲಾಖೆಗೆ ಮನವರಿಕೆ ಆಗಿತ್ತು. ಇದೇ ಕಾರಣಕ್ಕಾಗಿ ಬೆಂಗಳೂರಿನ ಘಟಕವೊಂದರಲ್ಲಿ ಉತ್ಪಾಧನೆ ಆಗಿದ್ದ ಮೊದಲ ಬ್ಯಾಚ್​ನ ಲಸಿಕೆ ಪೂರೈಸಲು ಅನುಮತಿಯನ್ನ ನೀಡಿರಲಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ್ದ ಸಂದೇಶದಲ್ಲಿ ಎನ್ ಕೆ ಅರೋರಾ ತಿಳಿಸಿದ್ದಾರೆ.

ಭಾರತ್ ಬಯೋಟೆಕ್ ತಮ್ಮ ಹೊಸ ಪ್ಲಾಂಟ್ ಬೆಂಗಳೂರಿನಲ್ಲಿ ಆರಂಭಿಸಿದ್ದು, ಅಲ್ಲಿ ಉತ್ಪಾಧನೆ ಆದ ಮೊದಲ ಮತ್ತು ಎರಡನೇ ಬ್ಯಾಚ್​ನ ವ್ಯಾಕ್ಸಿನ್ ಅಷ್ಟೋಂದು ಗುಣಮಟ್ಟವನ್ನ ಹೊಂದಿರಲಿಲ್ಲ.. ಹಾಗೆ ಅವರು ಜುಲೈನಲ್ಲಿ ಹೆಚ್ಚಿನ ಉತ್ಪಾದನೆಯನ್ನು ಸಾಧಿಸಿರಬೇಕು, ಈ ತಿಂಗಳಲ್ಲಿ ಅವರು ಮಾಡಬಹುದೆಂದು ನಾನು ಭಾವಿಸುತ್ತೇನೆ
ಎನ್​ ಕೆ ಅರೋರಾ, ಕೊವಿಡ್​​ 19 ಕಾರ್ಯುಪಡೆಯ ಸದಸ್ಯ

ಮುಂದಿನ 6 ವಾರಗಳಲ್ಲಿ ಕೊವ್ಯಾಕ್ಸಿನ್ ಉತ್ಪಾದನೆಯಲ್ಲಿ ಏರಿಕೆ
ಇನ್ನು ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಘಟಕವೂ ಕೂಡ ಅತಿ ಹೆಚ್ಚು ಲಸಿಕೆ ಉತ್ಪಾದಿಸುವ ಘಟಕಗಳ ಪೈಕಿ ಒಂದಾಗಿದೆ. ಆದ್ರೆ ಇತ್ತೀಚೆಗೆ ಕಳುಹಿಸಿದ್ದ ಎರಡು ಬ್ಯಾಚ್ ಲಸಿಕೆಗಳಲ್ಲಿ ಉತ್ತಮ ಗುಣಮಟ್ಟವನ್ನ ನೀಡಲು ಸಾಧ್ಯವಾಗಿರಲಿಲ್ಲ. ಆದ್ರೆ ಅದರ ಮುಂದಿನ ಎರಡು ಬ್ಯಾಚ್​ಗಳ ಲಸಿಕೆ ಅಂದ್ರೆ 3 ಮತ್ತು 4 ನೇ ಬ್ಯಾಚ್​ನ ಲಸಿಕೆಗಳು ಉತ್ತಮವಾದ ಗುಣಮಟ್ಟವನ್ನ ಹೊಂದಿದ್ದವು. ಆದ್ದರಿಂದ ಈ ಮೂಲಕ ಕಂಪನಿಗೆ ಮುಂದಿನ ದಿನಗಳಲ್ಲಿ ತಮ್ಮ ಲಸಿಕಯ ಉತ್ಪಾದನೆಯ ಪ್ರಮಾಣವನ್ನ ಹೆಚ್ಚಿಸುವಂತೆ ಕೇಂದ್ರ ಆರೋಗ್ಯ ಇಲಾಖೆಯಿಂದ ಸೂಚಿಸಲಾಗಿದೆ.

blank

ಭಾರತದಲ್ಲಿ ಪ್ರತಿನಿತ್ಯ 1 ಕೋಟಿ ಲಸಿಕೆ ವಿತರಣೆ
ದೇಶದಲ್ಲಿ ಸದ್ಯ ಎರಡನೇ ಅಲೆಯಿಂದ ಚೇತರಿಸಿಕೊಂಡಿದ್ದ ಜನ ಹಾಗು ಸರ್ಕಾರ ಕುಡ ಮೂರನೇ ಅಲೆಗೆ ಸಜ್ಜಾಗುತ್ತಿದ್ದಾರೆ. ಅಲ್ಲದೇ ತಜ್ಞರ ಸಮಿತಿ ಕೂಡ ಅಕ್ಟೊಬರ್ ವೇಳೆಗೆ ಭಾರತದಲ್ಲಿ ಮೂರನೆಯ ಅಲೇ ಶುರು ಆಗುತ್ತೆ ಅಂತಾ ತಮ್ಮ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದರು. ಅದ್ರಲ್ಲು ಸಾಂಕ್ರಾಮಿಕ ರೋಗಶಾಸ್ತ್ರಜ್ಙರು ಕೂಡ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನ ಕೂಡ ಕೊಟ್ಟಿದ್ದರು. ಹಾಗಾಗಿ ಈ ಮುಂಚೆಯೆ ಕೇಂದ್ರ ಸರ್ಕಾರ ಅಂದುಕೊಂಡಿದ್ದ ಹಾಗೆ ಡಿಸೆಂಬರ್ ಅಂತ್ಯದ ವೇಳೆಗೆ ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕು ಅಂತಾ ಅಂದುಕೊಂಡಿತ್ತು. ಹಾಗಾಗಿ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಅಂದುಕೊಂಡಂತೆ ಆಗಬೇಕಾದ್ರೆ ಪ್ರತಿ ತಿಂಗಳು 30 ಕೋಟಿ ಮಂದಿಗೆ ಲಸಿಕೆಯನ್ನ ನೀಡಬೇಕಾಗುತ್ತದೆ. ಅಂದ್ರೆ ಸರಾಸರಿ ಪ್ರತಿನಿತ್ಯ 1 ಕೋಟಿ ಮಂದಿಗೆ ಲಸಿಕೆ ವಿತರಣೆ ಮಾಡಬೇಕಾಗುತ್ತದೆ.

1 ಕೋಟಿಯಿಂದ 10 ಕೋಟಿ ಡೋಸ್ ಉತ್ಪಾದನೆ ಆಗಬೇಕು
ಕೇಂದ್ರ ಸರ್ಕಾರದ ಲೆಕ್ಕಚಾರದಂತೆ ಡಿಸೆಂಬರ್ ಅಂತ್ಯದ ವೇಳೆ ಎಲ್ಲರಿಗೂ ಲಸಿಕೆ ನೀಡಬೇಕು ಅಂದ್ರೆ, ಸದ್ಯದ ಪ್ರತಿ ನಿತ್ಯ 1 ರಿಂದ 2 ಕೋಟಿ ಡೋಸ್ ಲಸಿಕೆಯನ್ನ ಉತ್ಪಾದಿಸುತ್ತಿರುವ ಭಾರತ್​ ಬಯೋಟೆಕ್​​ ತಮ್ಮ ಉತ್ಪಾದನೆಯ ಪ್ರಮಾಣವನ್ನ 10 ಕೋಟಿ ಡೋಸ್​​ಗೆ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಯು ಕೂಡ ಭಾರತ್ ಬಯೋಟೆಕ್​ ಕಂಪನಿಗೆ ತಿಳಿಸಿದೆ.

blank

ಡೆಲ್ಟಾ ಪ್ಲಸ್ ರೋಗಾಣುವಿನ ವಿರುದ್ಧ ಕೊವ್ಯಾಕ್ಸಿನ್​ ಪ್ರಭಾವ
ಭಾರತದಲ್ಲಿ ಸದ್ಯ ಡೆಲ್ಟಾ ಪ್ಲಸ್ ವೈರಸ್​​ನ ಆತಂಕ ಹೆಚ್ಚಾಗಿದೆ. ಅದು ಮುಂದಿನ ದಿನಗಳಲ್ಲಿ ಇನ್ನಿಲ್ಲದಂತೆ ದೇಶವನ್ನ ಕಾಡುತ್ತೆ ಎಂದು ತಜ್ಪರು ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದರು. ಆದ್ರೆ ಈ ನಡುವೆ ಒಂದು ಅಧ್ಯಯನದ ವರದಿ ಮಾತ್ರ ನಿಟ್ಟುಸಿರು ಬಿಡುವಂತೆ ಮಾಡಿದೆ. ಅದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಧ್ಯಯನದಲ್ಲಿ ತಿಳಿದುಬಂದಿದೆ. ಹೌದು ಇತ್ತೀಚಿಗೆ ಐಸಿಎಂಆರ್ ಕೋವ್ಯಾಕ್ಸಿನ್ ಲಸಿಕೆ ಮೇಲೆ ಅಧ್ಯಯನ ನಡೆಸಿತ್ತು. ಇದು ಎಷ್ಟರ ಮಟ್ಟಿಗೆ ಪರಿಣಮಕಾರಿಯಾಗಿದೆ ಅನ್ನೋದರ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಐಸಿಎಂಆರ್​ ಅಧ್ಯಯನವನ್ನ ನಡೆಸಿತ್ತು. ಆಗ ಕೊವ್ಯಾಕ್ಸಿನ್ ಡೆಲ್ಟಾ ಪ್ಲಸ್ ವೈರಸ್ ವಿರುದ್ದ ಶೇ 65.20 ರಷ್ಟು ಪರಿಣಾಮಕಾರಿಯಾಗಿದೆ ಅನ್ನೋದು ತಿಳಿದು ಬಂದಿದೆ. ಈ ಮೂಲಕ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ಜನವರಿಯಲ್ಲಿ ಅಂದುಕೊಂಡಂತೆ ಎಲ್ಲವು ಆಗಿದ್ದರೆ ಅದು ಇವತ್ತಿಗೆ ಲಸಿಕೆ ಪೂರೈಕೆಯಲ್ಲಿ ಕೊರತೆ ಉಂಟಾಗುತ್ತಿರಲಿಲ್ಲ. ಆದರೆ ಕೊವ್ಯಾಕ್ಸಿನ್ ಲಸಿಕೆಯ ಬೆಂಗಳೂರಿನ ಘಟಕದಲ್ಲಿ ಉತ್ಪಾದಿಸಲಾದ ಲಸಿಕೆಯ ಗುಣಮಟ್ಟ ದೋಷದಿಂದಾಗಿ ತೀವ್ರ ಹಿನ್ನಡೆ ಉಂಟಾಗಿದೆ ಅನ್ನೋದು ಈಗ ಮಾಹಿತಿ ಲಭ್ಯವಾಗಿದೆ.

ರಾಕೆಟ್ ವೇಗದಲ್ಲಿ ಲಸಿಕೆ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ. ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವುದಕ್ಕಾಗಿ ಬೆಂಗಳೂರಿನಲ್ಲಿ ಹೊಸ ಘಟಕವನ್ನು ಆರಂಭಿಸಲಾಗಿತ್ತು. ಹೆಚ್ಚುವರಿಯಾಗಿ ಮೂರು ಖಾಸಗಿ ಕಂಪನಿಗಳ ಸಹಭಾಗಿತ್ವದೊಂದಿಗೆ ಕೆಲಸ ಶುರು ಮಾಡಲಾಗಿದೆ. ಅಂತಿಮವಾಗಿ ಭಾರತ್ ಬಯೋಟೆಕ್ ಕಂಪನಿಯಿಂದ ನಾವು 10 ರಿಂದ 12 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ನಿರೀಕ್ಷಿಸುತ್ತೇವೆ
– ಎನ್​ ಕೆ ಅರೋರಾ, ಕೊವಿಡ್​​ 19 ಕಾರ್ಯುಪಡೆಯ ಸದಸ್ಯ

ಸದ್ಯದ ಪೂರೈಕೆ ಎಷ್ಟು? ಲಭ್ಯತೆ ಎಷ್ಟಿದೆ?
ಭಾರತದಲ್ಲಿ ಕೊವಿಡ್ 19 ಲಸಿಕೆ ವಿತರಣೆ ಅಭಿಯಾನವನ್ನ ಆರಂಭಿಸಿ 199 ದಿನಗಳು ಕಳೆದಿದ್ದು, ಈವರೆಗೂ ಭಾರತದಲ್ಲಿ 47.78 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆಯನ್ನ ವಿತರಣೆ ಮಾಡಲಾಗಿದೆ. ಸೋಮವಾರ ರಾತ್ರಿ ವೇಳೆಗೆ ಅಂದ್ರೆ ಸುಮಾರು 7 ಗಂಟೆಯವರೆಗೆ ದೇಶದಲ್ಲಿ ಲಸಿಕೆ ಅಭಿಯಾನವನ್ನ ಆರಂಭಿಸಿ 199 ದಿನ ಪೂರೈಸಿದೆ. ಆ ಮೂಲಕ ದೇಶದಲ್ಲಿ ನಿನ್ನೆ ಸಂಜೆ 7 ಗಂಟೆಯವರೆಗೆ ಫಲಾನುಭವಿಗಳು ಲಸಿಕೆಯ ಡೋಸ್ ಪಡೆದುಕೊಂಡ ಸಂಖ್ಯೆ 47,78,00,587. ಇನ್ನು ನಿನ್ನೆಯವರೆಗೆ ಕಂಪನಿಗಳಿಂದ ಕೇಂದ್ರಕ್ಕೆ ಪೂರೈಕೆ ಆಗಿರೋ ಲಸಿಕೆಯ ಪ್ರಮಾಣ ಡೋಸ್​ ಲೆಕ್ಕದಲ್ಲಿ 49,64,98,050. ಹಾಗಾಗಿ ನಿನ್ನೆಗೆ ಕೇಂದ್ರಕ್ಕೆ ಬರಬೇಕಿದ್ದ ಲಸಿಕೆ ಪ್ರಮಾಣ 9,84,610. ಸದ್ಯಕ್ಕೆ ಇದೆಲ್ಲವನ್ನು ಲೆಕ್ಕ ಹಾಕಿ ನೋಡಿದಾಗ ಕೇಂದ್ರದ ಬಳಿ ಹಾಗು ರಾಜ್ಯ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯತೆಯಿರುವ ಲಸಿಕೆಯ ಪ್ರಮಾಣ 3,14,34,654.
ಇದು ಸದ್ಯದ ಭಾರತದಲ್ಲಿನ ಲಸಿಕೆಯ ಅಂಕಿ ಅಂಶಗಳು.

blank

ಈ ನಡುವೆ ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್ ಲಸಿಕೆ ಡೆಲ್ಟಾ ಪ್ಲಸ್​​ ವಿರುದ್ದ ಹೋರಾಡಲು ಹೆಚ್ಚು ಪರಿಣಾಮಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ತನ್ನ ಉತ್ಪಾದನೆಯನ್ನ ಕ್ರಮೇಣವಾಗಿ ಹೆಚ್ಚಿಸಿಕೊಳ್ಳಲೇಬೇಕಾಗಿದೆ. ಆದ್ರೆ ಬೆಂಗಳೂರಿನ ಕೊವ್ಯಾಕ್ಸಿನ್ ಘಟಕದಲ್ಲಿ ಹಿಂದೆ ಆದ ವ್ಯತ್ಯಾಸದಿಂದ ಇಂದು ಕೊರೊನಾ ಲಭ್ಯತೆ ಹಾಗು ಪೂರೈಕೆಯಲ್ಲಿ ಕೊರತೆ ನಿರ್ಮಾಣ ಆಗಿದ್ದಂತು ಸತ್ಯ. ಅದನ್ನ ಭಾರತ್ ಬಯೋಟೆಕ್ ಸರಿ ಪಡಿಸಿಕೊಳ್ಳಬೇಕಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಲಸಿಕೆಗಳನ್ನ ಉತ್ಪಾದಿಸಲು ಮುಂದಾಗಿಬೇಕಿದೆ.

Source: newsfirstlive.com Source link