ಸಚಿವ ಸ್ಥಾನ ನೀಡದಿದ್ದರೆ ರಾಜೀನಾಮೆ ನೀಡ್ತೇನೆ -ಆನಂದ ಮಾಮನಿ ಘೋಷಣೆ

ಸಚಿವ ಸ್ಥಾನ ನೀಡದಿದ್ದರೆ ರಾಜೀನಾಮೆ ನೀಡ್ತೇನೆ -ಆನಂದ ಮಾಮನಿ ಘೋಷಣೆ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್​ ರಚನೆ ಕೊನೆಗೂ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ಈ ನಡುವೆಯೇ ಸಚಿವ ಸ್ಥಾನ ಆಕಾಂಕ್ಷಿಗಳ ಒತ್ತಡವೂ ಹೆಚ್ಚಾಗಿದ್ದು, ಬಿಜೆಪಿ ಶಾಸಕ ಆನಂದ ಮಾಮನಿ ಅವರು ವಿಧಾನಸಭೆ ಉಪ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಘೋಷಣೆ ಮಾಡಿದ್ದಾರೆ.

ನ್ಯೂಸ್​ಫಸ್ಟ್​​ನೊಂದಿಗೆ ಮಾತನಾಡಿದ ಆನಂದ ಮಾಮನಿ ಅವರು, ನನಗೆ ಸಚಿವ ಸ್ಥಾನ ನೀಡುವ ಭರವಸೆ ಇದೆ, ನೀಡದಿದ್ದರೆ ಇಂದೇ ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯಲ್ಲಿ ಮಂತ್ರಿ ಸ್ಥಾನಕ್ಕೆ ಓಪನ್ ವಾರ್ -ಮಂತ್ರಿಗಿರಿಗಾಗಿ ಸಿಡಿದೆದ್ದ ಮಾಮನಿ!

ಸಚಿವ ಸ್ಥಾನ ಸಿಕ್ಕದಿದ್ದರೆ ಆನಂದ ಮಾಮನಿ ರಾಜೀನಾಮೆ ನೀಡಲಿದ್ದಾರೆ ಎಂಬ ಬಗ್ಗೆ ನ್ಯೂಸ್ ಫಸ್ಟ್ ಕಳೆದ ವಾರ ವಿಸ್ತ್ರತ ವರದಿ ಪ್ರಸಾರ ಮಾಡಿತ್ತು. ಕ್ಯಾಬಿನೆಟ್​ ರಚನೆ ಕೊನೆಗೂ ತಾರ್ಕಿಕ ಅಂತ್ಯಕ್ಕೆ ಬಂದರೂ ಇನ್ನೂ ಫೋನ್ ಕರೆ ಬಾರದ ಹಿನ್ನೆಲೆಯಲ್ಲಿ ರಾಜೀನಾಮೆ ಘೋಷಣೆ ಮಾಡೋದಾಗಿ ಮಾಮನಿ ಹೇಳಿದ್ದಾರೆ.

ಇನ್ನೂ ಸಚಿವರ ಪಟ್ಟಿಗೆ ಅಂಕಿತ ಪಡೆಯಲು ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ಹೈಕಮಾಂಡ್​ ನಾಯಕರ ಪ್ರದಕ್ಷಿಣೆ ಹಾಕುತ್ತಿದ್ದ ಬೊಮ್ಮಾಯಿ ಅವರು ಇಂದು ಬೆಳಗ್ಗೆ ಬೆಂಗಳೂರಿನತ್ತ ಪ್ರಯಾಣ ಆರಂಭ ಮಾಡಿದ್ದಾರೆ. ಸದ್ಯ, ಮಂತ್ರಿಗಿರಿ ಪಟ್ಟಿಗೆ ಬಿಜೆಪಿ ಹೈಕಮಾಂಡ್​ ನಾಯಕರ ಮುದ್ರೆ ಬಿದ್ದಿದೆ ಎನ್ನಲಾಗ್ತಿದ್ದು, ಶುಭ ಸುದ್ದಿಯನ್ನು ಸಿಎಂ ಹೊತ್ತು ತರ್ತಿದ್ದಾರೆ.

Source: newsfirstlive.com Source link