ಮತ್ತೆ ಒಂದಾಯ್ತು ರಾಜು ತಾಳಿಕೋಟೆ ಕುಟುಂಬ

ಮತ್ತೆ ಒಂದಾಯ್ತು ರಾಜು ತಾಳಿಕೋಟೆ ಕುಟುಂಬ

ಮನಸುಗಳ ಮಾತು ಮಧುರ ಟಾಸ್ಕ್​​ನಲ್ಲಿ ನಗು ಮೊಗದ ರಾಜು ತಾಳಿಕೋಟೆ ಅವರ ಹಿಂದಿನ ನೋವಿನ ಕಥೆ ಎಂಥವರನ್ನೂ ಸಹ ಒಂದು ಕ್ಷಣ ಯೋಚನೆ ಮಾಡುವಂತೆ ಮಾಡಿತ್ತು. ಅವರ ಇಬ್ಬರು ಪತ್ನಿಯರು ಕೇಳಿದ ಪ್ರಶ್ನೆ ಒಂದೇ.. ಮಕ್ಕಳು ಕ್ಷಮಿಸಿ ಅಂತಾ ಬಂದಾಗ ಕ್ಷಮಿಸುತ್ತೀರಾ ಎಂದು ಕೇಳಿದಾಗ, ‘ನನ್ನ ಕ್ಷಮೆಗೆ ಅವರು ಅರ್ಹರಲ್ಲ’ ಎಂದು ರಾಜು ತಾಳಿಕೋಟೆ ಹೇಳಿಬಿಡುತ್ತಾರೆ.

blank

ಇತ್ತ ಜಡ್ಜ್ ಸ್ಥಾನದಲ್ಲಿದ್ದ ನಟ ಸೃಜನ್ ಲೋಕೇಶ್ ಹಾಗೂ ನಟಿ ತಾರಾ ರಾಜು ತಾಳಿಕೋಟೆ ಕುಟುಂಬಕ್ಕೆ ಸಾಂತ್ವನ ಹೇಳುತ್ತಾರೆ. ನಂತರ ತಂದೆ ಮತ್ತು ಮಕ್ಕಳನ್ನ ಒಂದು ಮಾಡುವ ಭರವಸೆಯನ್ನ ನೀಡಿದ್ದರು. ಕಳೆದ ಸಂಚಿಕೆಯಲ್ಲಿ ತಾರಾ ಅವರು ಕೊಟ್ಟ ಮಾತಿನಂತೆ, ರಾಜು ತಾಳಿಕೋಟೆ ಅವರ ಮಗ ಭರತ್​​ನನ್ನ ರಾಜಾರಾಣಿ ವೇದಿಕೆಗೆ ಕರೆದುಕೊಂಡು ಬಂದಿದ್ರು.

blank

ಈ ವೇಳೆ ತಾರಾ ಮಾತನಾಡಿ, ರಾಜು ಅಣ್ಣ ಯಾವತ್ತೂ ಕಣ್ಣೀರು ಹಾಕಿದ್ದನ್ನ ನಾನು ನೋಡಿರಲಿಲ್ಲ. ನಾವು ಏನೇ ಸಾಧನೆ ಮಾಡಿದರೂ ಮಕ್ಕಳು, ಕುಟುಂಬ ಸಂತೋಷವಾಗಿದ್ದರೆ ಮಾತ್ರ ಬೆಲೆ ಬರೋದು. ಕುಟುಂಬ ಅಂದ್ಮೇಲೆ ಸಮಸ್ಯೆ, ಮನಸ್ಥಾಪ ಸಹಜ. ಅದೆಲ್ಲೆವನ್ನ ಎದುರಿಸಿ ಮುಂದೆ ಸಾಗಬೇಕು ಅಂತಾ ಹೇಳಿದರು. ನಂತರ ಭರತ್ ತಾವು ಮಾಡಿರುವ ತಪ್ಪಿಗೆ ತಮ್ಮ ತಂದೆಯನ್ನ ತಬ್ಬಿ ಕ್ಷಮೆ ಕೇಳಿದರು. ಈ ವೇಳೆ ರಾಜುತಾಳಿ ಕೋಟೆ ತಮ್ಮ ಮಗನನ್ನ ಅಪ್ಪಿ ಮುದ್ದಾಡಿದ ಕ್ಷಣ ಎಲ್ಲರನ್ನ ಮೂಕ ಪ್ರೇಕ್ಷಕರನ್ನಾಗಿ ಮಾಡಿತು.

Source: newsfirstlive.com Source link