ಉಗ್ರರ ಉಪಟಳಕ್ಕೆ ಬ್ರೇಕ್‌; ಜಮ್ಮು ಕಾಶ್ಮೀರದ CIDಯಿಂದ ಹೀಗೊಂದು ಐತಿಹಾಸಿಕ ನಿರ್ಧಾರ

ಉಗ್ರರ ಉಪಟಳಕ್ಕೆ ಬ್ರೇಕ್‌; ಜಮ್ಮು ಕಾಶ್ಮೀರದ CIDಯಿಂದ ಹೀಗೊಂದು ಐತಿಹಾಸಿಕ ನಿರ್ಧಾರ

ಒಂದು ಕಡೆ ಜಮ್ಮು ಕಾಶ್ಮೀರದಲ್ಲಿ ಉಗ್ರಗಾಮಿಗಳ ಮೇಲೆ ಭಾರತೀಯ ಸೈನಿಕರು ಗುಂಡಿನ ದಾಳಿ ನಡೆಸುತ್ತಿರುತ್ತಾರೆ. ಮತ್ತೊಂದೆಡೆ ಅದೇ ಸಂದರ್ಭದಲ್ಲಿ ಸೈನಿಕರ ಮೇಲೆ ವಿದ್ಯಾರ್ಥಿಗಳು, ಸಾರ್ವಜನಿಕರು ಕಲ್ಲು ತೂರಾಟ ನಡೆಸುತ್ತಾರೆ. ಆದ್ರೆ, ಇಮ್ಮೇಲೆ ಕಲ್ಲು ತೂರಲು ಮುಂದಾಗುವ ಮುನ್ನವೇ ಹತ್ತಾರು ಬಾರಿ ಯೋಚಿಸುವಂತೆ ಜಮ್ಮು ಕಾಶ್ಮೀರ ಸರ್ಕಾರ ಮಾಡುತ್ತಿದೆ. ಅದೇನದು ಕಲ್ಲು ತೂರಾಟಗಾರರಿಗೆ ಗುನ್ನ ಅನ್ನೋದನ್ನು ಹೇಳ್ತೀವಿ ಸ್ಪೆಷಲ್‌ ಸ್ಟೋರಿಯಲ್ಲಿ.

ಜಮ್ಮು ಕಾಶ್ಮೀರ ಭಯೋತ್ಪಾದಕರ ಅಡಗುತಾಣ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಅದಕ್ಕಾಗಿಯೇ ಭಾರತ ಸರ್ಕಾರ ವಿಶೇಷವಾಗಿ ಹದ್ದಿನ ಕಣ್ಣು ಇಟ್ಟಿರುತ್ತದೆ. ಭಯೋತ್ಪಾದಕರ ಹೆಡೆಮುರಿ ಕಟ್ಟಲು ಏನು ಮಾಡಬೇಕೋ ಅದನ್ನೆಲ್ಲಾ ಮಾಡುತ್ತಲೇ ಇದೆ. ಗುಪ್ತದಳದವರು ಭಯೋತ್ಪಾದಕರು ಎಲ್ಲಿ ಅಡಗಿದ್ದಾರೆ, ಎಷ್ಟು ಜನ ಇದ್ದಾರೆ ಅನ್ನುವ ಬಗ್ಗೆ ಸೈನಿಕರಿಗೆ, ಜಮ್ಮು ಕಾಶ್ಮೀರ ಪೊಲೀಸರಿಗೆ ಮಾಹಿತಿ ರವಾನಿಸುತ್ತಾರೆ. ಮಾಹಿತಿ ಸಿಕ್ಕ ತಕ್ಷಣ ಉಗ್ರಗಾಮಿಗಳ ಅಡಗು ತಾಣದ ಮೇಲೆ ದಾಳಿ ನಡೆಸಲಾಗುತ್ತದೆ. ಆದ್ರೆ, ದುರಾದೃಷ್ಟವಶಾತ್‌ ಇದೇ ಸಂದರ್ಭದಲ್ಲಿ ಸಾರ್ವಜನಿಕರು ವಿದ್ಯಾರ್ಥಿಗಳು ಸೈನಿಕರ ಮೇಲೆ ಕಲ್ಲು ತೂರಾಟ ಆರಂಭಿಸುತ್ತಾರೆ. ಒಂದು ಕಡೆ ಭಯೋತ್ಪಾದಕರ ಬೇಟೆಯಾಡುವ ಗುರಿ, ಮತ್ತೊಂದೆಡೆ ಕಲ್ಲು ತೂರಾಟಗಾರರ ಹಿಮ್ಮೆಟ್ಟಿಸುವ ಸವಾಲು ಎರಡೂ ಇರುತ್ತೆ. ಇಂತಹ ಸವಾಲಿನ ಎಷ್ಟೋ ಸಂದರ್ಭದಲ್ಲಿ ಭಯೋತ್ಪಾದರು ತಪ್ಪಿಸಿಕೊಂಡು ಬಿಟ್ಟಿದ್ದಾರೆ. ಇದೇ ಉದ್ದೇಶಕ್ಕಾಗಿ ಇದೀಗ ಜಮ್ಮು ಕಾಶ್ಮೀರ ಸರ್ಕಾರ ಒಂದು ಮಹತ್ವದ ಹೆಜ್ಜೆ ಇಟ್ಟಿದೆ.

ಇನ್ಮೇಲೆ ಕಲ್ಲು ತೂರಾಟಗಾರರ ಆಟ ನಡೆಯಲ್ಲ
ಭಯೋತ್ಪಾದಕರಿಗೆ ಸಹಾಯ ಮಾಡಿ ವಿದೇಶಕ್ಕೆ ಹಾರಲಾಗದು

ಹೌದು, ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟ ಮಾಡಿ ಅದೆಷ್ಟೋ ಜನ ರಾಜಾರೋಷವಾಗಿ ಓಡಾಡುತ್ತಿದ್ರು. ಖಾಸಗಿ, ಸರ್ಕಾರಿ ಉದ್ಯೋಗವನ್ನು ಪಡೆದು ಅದ್ಧೂರಿ ಜೀವನ ಮಾಡುತ್ತಿದ್ರು. ಸಿಕ್ಕಬಿದ್ದವರು ಮಾತ್ರ ಅಲ್ಪ ಕಾಲ ಶಿಕ್ಷೆ ಅನುಭವಿಸುತ್ತಿದ್ರು. ಇಷ್ಟೇ ಏಕೆ, ಭಯೋತ್ಪಾದಕರಿಗೆ ನೆರವು ನೀಡಿದವರು ಪಾಸ್‌ಪೋರ್ಟ್‌ ಮಾಡಿಸಿಕೊಂಡು ವಿದೇಶಕ್ಕೆ ಹಾರಿ ಬಿಡ್ತಾ ಇದ್ರು, ಅಲ್ಲಿಂದಲೇ ಭಯೋತ್ಪಾದಕ ಚಟುವಟಿಕೆಗೆ ನೆರವಾಗುತ್ತಿದ್ರು. ವಿದೇಶಕ್ಕೆ ಓದಲು ಹೋಗುವ ವಿದ್ಯಾರ್ಥಿಗಳು ಎಷ್ಟೋ ಜನ ಭಯೋತ್ಪಾದಕರಾಗಿ ಪರಿವರ್ತನೆಯಾದ ಇತಿಹಾಸವೂ ಇತ್ತು. ಆದ್ರೆ, ಇನ್ಮೇಲೆ ಈ ಆಟ ಜಮ್ಮು ಕಾಶ್ಮೀರದಲ್ಲಿ ನಡೆಯಲ್ಲ. ಅದಕ್ಕೆಲ್ಲ ಕಾರಣ ಜಮ್ಮು ಕಾಶ್ಮೀರ

ಸರ್ಕಾರದ ಐತಿಹಾಸಿಕ ನಿರ್ಧಾರವಾಗಿದೆ.
ಕಲ್ಲು ತೂರಾಟ ಮಾಡಿದ್ರೆ ಸರ್ಕಾರಿ ಉದ್ಯೋಗವಿಲ್ಲ
ವಿದೇಶಕ್ಕೆ ಹಾರಲು ಪಾಸ್‌ಪೋರ್ಟ್‌ ಕೂಡ ಸಿಗಲ್ಲ
ಜಮ್ಮು ಕಾಶ್ಮೀರದ ಸಿಐಡಿ ಹೊರಡಿಸಿದ ಆದೇಶದಿಂದ ಸಂಚಲನ

blank

ಹೌದು, ಜಮ್ಮು ಕಾಶ್ಮೀರದ ಪೊಲೀಸರ ಸಿಐಡಿ ವಿಭಾಗ ಹೊರಡಿಸಿರೋ ಆದೇಶ ಭಾರೀ ಸಂಚಲನ ಮೂಡಿಸಿದೆ. ಗಲಭೆ ಸೃಷ್ಟಿಸಲು ಕಲ್ಲು ಎತ್ತಿಕೊಳ್ಳುವ ಮುನ್ನ ಹತ್ತಾರು ಬಾರಿ ಯೋಚಿಸುವಂತೆ ಮಾಡಿದೆ. ಅಷ್ಟಕ್ಕೂ ಆದೇಶದಲ್ಲಿ ಏನಿದೆ ಅಂದ್ರೆ ಕಲ್ಲು ತೂರಾಟದಲ್ಲಿ ಪಾಲ್ಗೊಳ್ಳುವವರಿಗೆ ಸರ್ಕಾರಿ ಉದ್ಯೋಗ ನೀಡಲ್ಲ, ಪಾಸ್‌ಪೋರ್ಟ್‌ ನೀಡಲ್ಲ ಅಂತ ತಿಳಿಸಿದೆ. ಯಾರದೋ ಕುಮ್ಮಕ್ಕಿನಿಂದ ಕಲ್ಲು ತೂರುವವರಿಗೆ ಇದು ಭರ್ಜರಿ ಆಘಾತ ನೀಡಿದೆ. ತಾನು ಓದಬೇಕು, ಸರ್ಕಾರಿ ಉದ್ಯೋಗಿ ಆಗಬೇಕು ಅಂತ ಕನಸು ಕಾಣುತ್ತಿರುವವರು ತೆಪ್ಪಗೆ ಇರಬೇಕು. ಅದೇ ರೀತಿ ಶಿಕ್ಷಣ, ಉದ್ಯೋಗಕ್ಕೆ ವಿದೇಶಕ್ಕೆ ಹಾರುವ ಜನರಿಗೂ ಭರ್ಜರಿ ಆಘಾತವೇ ಕಾದಿದೆ. ಯಾಕೆಂದ್ರೆ ಅಂಥವರಿಗೆ ಇನ್ಮೇಲೆ ಪಾಸ್‌ಪೋರ್ಟ್‌ ಸಿಗುವುದಿಲ್ಲ. ಕಲ್ಲು ತೂರಾಟ ನಡೆಸಿ, ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿ, ಭಯೋತ್ಪಾದಕರಿಗೆ ನೆರವು ನೀಡಿ ವಿದೇಶಕ್ಕೆ ಹೋಗಿ ತಲೆ ತಲೆಮರೆಸಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಇನ್ಮೇಲೆ ಇದಕ್ಕೂ ಬ್ರೇಕ್‌ ಬೀಳಲಿದೆ.

ಕಲ್ಲು ತೂರಿದ್ರೆ ಭದ್ರತಾ ಕ್ಲಿಯರೆನ್ಸ್‌ ಸಿಗಲ್ಲ
ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾದ್ರೂ ಸರ್ಕಾರಿ ಉದ್ಯೋಗವಿಲ್ಲ

ಸರ್ಕಾರಿ ಉದ್ಯೋಗ ಸೇರುವವರಿಗೆ, ಪಾಸ್‌ಪೋರ್ಟ್‌ ಅರ್ಜಿ ಸಲ್ಲಿಸುವವರಿಗೆ ಭದ್ರತಾ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಕಡ್ಡಾಯವಾಗಿದೆ. ಆದ್ರೆ, ಕಲ್ಲು ತೂರಾಟ ಅಥವಾ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾದವರಿಗೆ ಇನ್ಮೇಲೆ ಭದ್ರತಾ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಸಿಗಲ್ಲ. ಹೀಗಾಗಿ ಸರ್ಕಾರಿ ಉದ್ಯೋಗ ಸೇರಿಲು ಸಾಧ್ಯವೇ ಇಲ್ಲ. ವಿದೇಶಕ್ಕೆ ಹಾರಲು ಅವಕಾಶ ಸಿಗಲ್ಲ. ಈ ಮೂಲಕ ಜಮ್ಮು ಕಾಶ್ಮೀರದ ಸಿಐಡಿ ಆದೇಶ ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗುವವರಿಗೆ ಭರ್ಜರಿ ಪಾಠ ಕಲಿಸಲು ಮುಂದಾಗಿದೆ.

ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ವೇಳೆ ನಡೆಯುತ್ತೆ ಪರಿಶೀಲನೆ
ಡಿಜಿಟಲ್‌ ಪುರಾವೆಗಳ ಪರಿಶೀಲನೆಯೂ ಕಡ್ಡಾಯ

ಕಲ್ಲು ತೂರಾಟ, ಗಲಭೆಯಲ್ಲಿ ಪಾಲ್ಗೊಂಡು ಕೇಸ್‌ ದಾಖಲಾದವರಿಗೆ ಮಾತ್ರ ಅಲ್ಲ. ಕೇಸ್‌ ದಾಖಲಾಗದವರಿಗೂ ಬಿಸಿ ಮುಟ್ಟಿಸುವ ಕೆಲಸ ಆಗಲಿದೆ. ಹೌದು, ಭದ್ರತಾ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ಗೆ ಅರ್ಜಿ ಸಲ್ಲಿಸಿದಾಗ ಡಿಜಿಟಲ್‌ ಪುರಾವೆಗಳ ಪರಿಶೀಲನೆಗಳನ್ನು ನಡೆಸಲಾಗುತ್ತದೆ. ಅಂದ್ರೆ, ಪೊಲೀಸರು, ಭದ್ರತಾ ಪಡೆಗಳು, ಭದ್ರತಾ ಏಜೆನ್ಸಿಗಳ ದಾಖಲೆಗಳಲ್ಲಿ ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳು, ಛಾಯಾಚಿತ್ರಗಳು, ವಿಡಿಯೋಗಳು ಮತ್ತು ಆಡಿಯೋ ಕ್ಲಿಪ್‌ಗಳ ಪರಿಶೀಲನೆಯೂ ನಡೆಯಲಿದೆ. ಇದೆಲ್ಲದರ ಪರಿಶೀಲನೆ ವೇಳೆ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ಗೆ ಅರ್ಜಿ ಸಲ್ಲಿಸಿದ ವ್ಯಕ್ತಿ ಕಂಡು ಬಂದ್ರೆ ಆತನಿಗೆ ಸರ್ಟಿಫಿಕೇಟ್‌ ನೀಡುವುದಿಲ್ಲ.

ಈಗಾಗಲೇ ಕೃತ್ಯದಲ್ಲಿ ಭಾಗಿಯಾಗಿದ್ರೆ ನೌಕರಿಯಿಂದ ವಜಾ
ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ್ರೆ ಹುಷಾರ್‌

ಮತ್ತೊಂದು ವಿಶೇಷ ಅಂದ್ರೆ, ಈಗಾಗಲೇ ಸರ್ಕಾರಿ ನೌಕರಿ ಪಡೆದು ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದವರಿಗೂ ಬಿಸಿ ಮುಟ್ಟಿಸಲಾಗುತ್ತಿದೆ. ಹೇಗಿದ್ರೂ ಸರ್ಕಾರಿ ನೌಕರಿ ಸಿಕ್ಕಿದೆ ತಮ್ಮ ಹಿಂದಿನ ಕೃತ್ಯ ತಿಳಿಯದು ಅಂತ ನೆಮ್ಮದಿಯಿಂದ ಇರಲು ಸಾಧ್ಯವೇ ಇಲ್ಲ. ಯಾಕೆಂದ್ರೆ, ಈ ಹಿಂದೆ ಕಲ್ಲು ತೂರಾಟದಲ್ಲಿ, ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿದ್ರೆ, ಈಗ ಸರ್ಕಾರಿ ನೌಕರಿ ಪಡಿದವರ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಒಮ್ಮೆ ಅಂತಹ ಕೃತ್ಯದಲ್ಲಿ ಭಾಗಿಯಾಗಿದ್ದು ಕಂಡು ಬಂದ್ರೆ ಅವರನ್ನು ನೌಕರಿಯಿಂದ ವಜಾ ಮಾಡಲಾಗುತ್ತದೆ. ಈಗಾಗಲೇ ಪ್ರಾಥಮಿಕ ಹಂತವಾಗಿ 15 ನೌಕರರನ್ನು ವಜಾ ಮಾಡಲಾಗಿದೆಯಂತೆ. ಇನ್ನಷ್ಟು ನೌಕರರ ವಜಾ ಮಾಡಲು ಪಟ್ಟಿ ರೆಡಿ ಮಾಡಿಕೊಳ್ಳಲಾಗಿದೆ ಅಂತ ತಿಳಿದುಬಂದಿದೆ.

ಕಲ್ಲು ತೂರಾಟದಲ್ಲಿ ವಿದ್ಯಾರ್ಥಿಗಳೇ ಭಾಗಿಯಾಗ್ತಿದ್ರು
ಕಲ್ಲು ತೂರಿದ್ದಕ್ಕೆ ಹಣವೂ ಸಂದಾಯವಾಗುತ್ತಿತ್ತು?

ಹೌದು, ಇದೊಂದು ದೊಡ್ಡ ಆಘಾತಕಾರಿ ವಿಷಯವಾಗಿತ್ತು. ಅದೇನಂದ್ರೆ, ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿಯೇ ಕಲ್ಲು ತೂರಾಟ ನಡೆಯುತ್ತಿತ್ತು. ಕಲ್ಲು ತೂರಾಟದಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾ ಇದ್ರು. ಸೈನಿಕರ ಮೇಲೆ, ಭದ್ರತಾ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ರು. ಶಿಕ್ಷಣ ಪಡೆದು ಸುಕ್ಷಿತರಾಗಬೇಕಾದ ವಿದ್ಯಾರ್ಥಿಗಳೇ ಕಲ್ಲು ತೂರಾಟದಲ್ಲಿ ಪಾಲ್ಗೊಳ್ಳುವುದು ಚಿಂತೆಗೆ ಈಡುಮಾಡಿತ್ತು. ಆದ್ರೆ, ತದನಂತರ ಬೆಳಕಿಗೆ ಬಂದ ವಿಚಾರ ಅಂದ್ರೆ, ವಿದ್ಯಾರ್ಥಿಗಳು ಪುಕ್ಸಟ್ಟೆ ಕಲ್ಲು ತೂರುತ್ತಿರಲಿಲ್ಲ ವಂತೆ. ಹೌದು, ಹಾಗೇ ಕುಲ್ಲು ತೂರಿದ್ದಕ್ಕೆ ಅವರಿಗೆ ಹಣ ಸಂದಾಯವಾಗುತ್ತಿತ್ತಂದೆ. ಭಯೋತ್ಪಾದಕ ಸಂಘಟನೆಗಳೇ ಹಣಕಾಸಿನ ನೆರವು ನೀಡುತ್ತಿದ್ದವಂತೆ. ಇಂತಹವೊಂದು ಸ್ಫೋಟಕ ಸುದ್ದಿ ಬೆಳಕಿಗೆ ಬಂದಿತ್ತು.

ಉಗ್ರರ ಉಪಟಳಕ್ಕೆ ಬ್ರೇಕ್‌ ಹಾಕಲು ಐತಿಹಾಸಿಕ ನಿರ್ಧಾರ
ಶಾಂತಿ ಸ್ಥಾಪಿಸಲು ನೆರವಾಗುತ್ತಾ ಈ ನಿರ್ಧಾರ?

blank

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ನಿಲ್ಲುತ್ತಿಲ್ಲ. ಸದಾ ಒಂದಲ್ಲ ಒಂದು ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ಜಮ್ಮುವಿನ ವಾಯುನೆಲೆ ಮೇಲೆ ಡ್ರೋನ್‌ ದಾಳಿ ನಡೆಸಲಾಗಿತ್ತು. ಹಾಗೇ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಭರ್ಬರವಾಗಿ ಹತ್ಯೆ ಮಾಡಲಾಗಿತ್ತು…. ಈ ರೀತಿಯ ಕ್ಯತ್ಯಗಳು ಜಮ್ಮು ಕಾಶ್ಮೀರದಲ್ಲಿ ಸಾಮಾನ್ಯವಾಗಿ ಬಿಟ್ಟಿವೆ. ಭದ್ರತಾ ಪಡೆಗಳು, ಇಲ್ಲಿಯ ಪೊಲೀಸರು ಭಯೋತ್ಪಾದಕರ ತಲೆಗಳನ್ನು ಉರುಳಿಸುತ್ತಲೇ ಇರುತ್ತಾರೆ. ಆದರೂ, ಸಂಪೂರ್ಣವಾಗಿ ಉಗ್ರರ ಚಟುವಟಿಕೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಇದಕ್ಕೆಲ್ಲ ಕಾರಣ ಪಾಕಿಸ್ತಾನದಲ್ಲಿರೋ ಭಯೋತ್ಪಾಕದ ಚಟುವಟಿಕೆಗಳ ನೇರ ಬೆಂಬಲ. ಹಾಗೇ ಭಯೋತ್ಪಾದನೆ ಚಟುವಟಿಗೆಗೆ ನೆರವಾಗುವವರಿಗೂ ಹಣಕಾಸಿನ ನೆರವು ನೀಡಲಾಗುತ್ತಿದೆ. ಇದರಿಂದಾಗಿ ಸ್ಥಳೀಯರೇ ಭಯೋತ್ಪಾದಕರೇ ನೆರವು ನೀಡುತ್ತಾರೆ. ಆದ್ರೆ, ಈಗ ಸಿಐಡಿ ನೀಡಿರುವ ಆದೇಶ ಉಗ್ರರ ಉಪಟಳಕ್ಕೆ ಕಂಡಿತ ಬ್ರೇಕ್‌ ಹಾಕಲಿದೆ. ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ನೆರವಾಗಲಿದೆ.

ಆರ್ಟಿಕಲ್‌ 370 ರದ್ದಾದ ನಂತರ ಕಡಿವಾಣ ಬಿತ್ತು
ಹಲ್ಲು ಕಿತ್ತ ಹಾವಿನಂತಾದ ಉಗ್ರಗಾಮಿಗಳು

ಅದು, 2019 ರಲ್ಲಿ ನಡೆದ ಘಟನೆ. ಜಮ್ಮು ಕಾಶ್ಮೀರದಲ್ಲಿ ಪೂರ್ಣ ಪ್ರಮಾಣದ ಭದ್ರತೆ ಹಾಕಿಕೊಳ್ಳಲಾಗಿತ್ತು. ಗಲ್ಲಿ ಗಲ್ಲಿಯಲ್ಲಿಯೂ ಪೊಲೀಸರು, ಸೈನಿಕರು ಗಸ್ತು ತಿರುಗುತ್ತಾ ಇದ್ರು. ಅಲ್ಲಿಯ ರಾಜಕೀಯ ನಾಯರನ್ನು ಗೃಹಬಂಧನದಲ್ಲಿ ಇರಲಿಸಲಾಗಿತ್ತು. ಆದ್ರೆ, ಏನಾಗುತ್ತಿದೆ ಅಂತ ಭಾರತ ಅಷ್ಟೇ ಅಲ್ಲ, ಇಡೀ ವಿಶ್ವವೇ ಕುತೂಹಲದಿಂದ ನೋಡುತ್ತಿತ್ತು. ಆದ್ರೆ, ಕೇಂದ್ರ ಸರ್ಕಾರ ಸದ್ದು ಗದ್ದಲ ಇಲ್ಲದೇ ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ ಆರ್ಟಿಕಲ್‌ 370 ಅನ್ನು ರದ್ದು ಮಾಡಿತ್ತು. ಅಲ್ಲಿಯವರೆಗೂ ಆರ್ಟಿಕಲ್‌ 370 ಅನ್ನು ಟಚ್‌ ಕೂಡ ಮಾಡಲು ಸಾಧ್ಯವಿಲ್ಲ ಅನ್ನುವಂತಹ ವಾತಾವರಣ ಇತ್ತು. ಆದ್ರೆ, ಭಾರತ ಸರ್ಕಾರ ನೀರು ಕುಡಿದಷ್ಟೇ ಸಲೀಸಾಗಿ ಕೆಲಸ ಮಾಡಿ ಬಿಡ್ತು. ಅಲ್ಲಿಂದಲೇ ಉಗ್ರಗಾಮಿಗಳ ಚಟುವಟಿಕೆಗೆ ದೊಡ್ಡ ಪ್ರಮಾಣದ ಬ್ರೇಕ್‌ ಬಿದ್ದಿತ್ತು.

ಜಮ್ಮು ಕಾಶ್ಮೀರದ ಸಿಐಡಿ ಆದೇಶ ಐತಿಹಾಸಿಕ ನಿರ್ಧಾರವಾಗಿದೆ. ದೇಶವಿರೋಧಿ ಕೃತ್ಯದಲ್ಲಿ ಭಾಗಿಯಾಗುವವರಿಗೆ ಇದೊಂದು ಪಾಠವಾಗುತ್ತೆ. ಗಲಭೆ, ಕಲ್ಲು ತೂರಾಟ, ವಿಧ್ವಂಸಕ ಕೃತ್ಯಗಳನ್ನು ಖಂಡಿತ ತಡೆಯಲು ಸಾಧ್ಯವಾಗುತ್ತೆ.

Source: newsfirstlive.com Source link