ಕೊಡಗು ಜಿಲ್ಲೆಯಲ್ಲಿ ಕಕ್ಕಡ ಹಬ್ಬದ 18ರ ಸಂಭ್ರಮ -ಹಬ್ಬಕ್ಕೆ ಮೆರುಗು ತಂದ ಬಗೆ ಬಗೆಯ ತಿನಿಸು

ಕೊಡಗು ಜಿಲ್ಲೆಯಲ್ಲಿ ಕಕ್ಕಡ ಹಬ್ಬದ 18ರ ಸಂಭ್ರಮ -ಹಬ್ಬಕ್ಕೆ ಮೆರುಗು ತಂದ ಬಗೆ ಬಗೆಯ ತಿನಿಸು

ಕೊಡಗು: ಅಂದ್ರೆ ಸಾಕು ನಮಗೆ ನೆನಪಾಗೋದು ಅಲ್ಲಿನ ವಿಭಿನ್ನ, ವಿಶಿಷ್ಠ ಆಚರಣೆಗಳು ಹಾಗೂ ವೆರೈಟಿ, ವೆರೈಟಿ ಹಬ್ಬಗಳು. ಬೇರೆ ಎಲ್ಲಾ ಜಿಲ್ಲೆಗಳಿಗೂ ಹೋಲಿಸಿದ್ರೆ ಕೊಡಗಿನಲ್ಲಿ ವಿಶೇಷವಾಗಿ ಹಬ್ಬಗಳನ್ನ ಆಚರಿಸ್ತಾರೆ. ಇದೀಗ ಕೊಡಗು ಮಂದಿ ಅಂಥಹುದೇ ಒಂದು ವಿಶೇಷ ಹಬ್ಬದ ಸಂಭ್ರಮದಲ್ಲಿದ್ದಾರೆ. ಆ ಹಬ್ಬದ ಆಚರಣೆ ಕೂಡ ವಿಶೇಷವೇ.

blank

ಬಗೆ ಬಗೆಯ ತಿನಿಸುಗಳು ನೋಡುತ್ತಿದ್ದರೆ ಬಾಯಲ್ಲಿ ನೀರು ಸುರಿಯುತ್ತಿದೆ. ಪಾಯಸ, ನಾಟಿ ಕೋಳಿ ಸಾರು, ಅಣಬೆ- ಕಣಿಲೆ ಸಾರು ಇಂತಹ ತಿಂಡಿ ತಿನಿಸುಗಳ ಹಬ್ಬಕ್ಕೆ ಸಾಕ್ಷಿಯಾಗಿದ್ದು ಕೊಡಗು ಜಿಲ್ಲೆ. ಹೌದು ಕೊಡಗಿನಲ್ಲೀಗ ಕಕ್ಕಡ ಹಬ್ಬದ 18ರ ಸಂಭ್ರಮ. ಆಟಿ ಸೊಪ್ಪಿನಿಂದ ಎಲ್ಲಾ ಬಗೆ ಬಗೆಯ ತಿನಿಸುಗಳನ್ನ ಮಾಡಿ ಕೊಡಗು ಮಂದಿ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸ್ತಾರೆ. ಆಟಿ ಮಾಸದ 18ನೇ ದಿನವನ್ನು ಕೊಡಗು ಜಿಲ್ಲೆಯಲ್ಲಿ ವಿಶೇಷವಾಗಿ ಆಚರಿಸ್ತಾರೆ. ಕಾಡಿನಲ್ಲಿ ಔಷಧೀಯ ಗುಣಗಳು ಇರುವ ಮದ್ದು ಸೊಪ್ಪು ಎಂಬ ಸಸ್ಯ ಸಿಗುತ್ತದೆ. ಈ ಗಿಡದಲ್ಲಿ 18 ಬಗೆಯ ಔಷಧಿ ಇರುತ್ತದೆ ಎಂಬುದು ಜನರ ನಂಬಿಕೆ.. ಹೀಗಾಗಿ ಅಂದೇ ಜನರು ಕಕ್ಕಡ ಹಬ್ಬ ಆಚರಿಸ್ತಾರೆ.

blank

ಇನ್ನು ಆಟಿ ಮಾಸದ 18ನೇ ದಿನ ಕಾಡಿಗೆ ಹೋದರೆ ಈ ಸೊಪ್ಪು ಘಮಘಮಿಸುತ್ತಿರುತ್ತದೆ. ಆದ್ದರಿಂದ ಇದೇ ದಿನ ಈ ಸೊಪ್ಪನ್ನು ಹುಡುಕಿ ತಂದು ಇದನ್ನು ಬೇಯಿಸಿ ರಸವನ್ನು ತೆಗೆಯಲಾಗುತ್ತದೆ. ತೆಗೆದ ರಸದಿಂದ ಪಾಯಸ- ಹಿಟ್ಟು ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅಲ್ಲದೆ ಅಣಬೆ, ಏಡಿ, ಕಣಿಲೆಯಿಂದ ಮಾಡಿರುವ ಖಾದ್ಯಗಳ ಜೊತೆಗೆ ನಾಟಿ ಕೋಳಿ ಸಾರು ಕೂಡ ಮಾಡಲಾಗುತ್ತದೆ. ಮಳೆಗಾಲವಾದ್ದರಿಂದ ಕೊಡಗಿನವರು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಾರೆ. ಹೀಗಾಗಿ ಮಳೆ, ಚಳಿಗೆ ಮೈಯೊಡ್ಡಿ ದುಡಿಯುವ ದೇಹವನ್ನು ಬೆಚ್ಚಗಿಡಲು ಆರೋಗ್ಯ ವರ್ಧಕವಾಗಿ ಕೆಲಸ ಮಾಡಲು ಈ ಖಾದ್ಯಗಳು ಸಹಕಾರಿಯಾಗುತ್ತೆ ಎನ್ನೋದು ನಂಬಿಕೆ.

blank

ಒಟ್ನಲ್ಲಿ ಕೊಡುಗು ಸಂಸ್ಕೃತಿಯನ್ನು ಎತ್ತಿಹಿಡುಯುವ ಹಬ್ಬಗಳಲ್ಲಿ ಕಕ್ಕಡ ಹಬ್ಬವೂ ಒಂದು. ಅಲ್ಲದೆ ತನ್ನದೇ ಆದ ವಿಶೇಷತೆಯನ್ನು ಈ ಹಬ್ಬ ಹೊಂದಿರುವ ಕಾರಣ ಜಿಲ್ಲೆಯಾದ್ಯಂತ ಎಲ್ಲ ಮನೆಗಳಲ್ಲೂ ಇದನ್ನು ತಪ್ಪದೇ ಆಚರಿಸೋದು ವಾಡಿಕೆ.

ವಿಶೇಷ ಬರಹ: ಯುಗ ದೇವಯ್ಯ, ನ್ಯೂಸ್ ಫಸ್ಟ್, ಕೊಡಗು

blank

Source: newsfirstlive.com Source link