‘ಆಫ್ರಿಕನ್ ಪ್ರಜೆ ಲಾಕಪ್ ಡೆತ್ ಆರೋಪ ಸುಳ್ಳು’ ​​​-ಕಮಲ್ ಪಂತ್

‘ಆಫ್ರಿಕನ್ ಪ್ರಜೆ ಲಾಕಪ್ ಡೆತ್ ಆರೋಪ ಸುಳ್ಳು’ ​​​-ಕಮಲ್ ಪಂತ್

ಬೆಂಗಳೂರು: ನೈಜೀರಿಯಾ ಪ್ರಜೆ ಸಾವಿನ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ ಅಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ​​​ ಕಮಲ್ ಪಂತ್ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರಿ ಈ‌ ಪ್ರಕರಣವನ್ನು ಎನ್​​ಹೆಚ್​​​ಆರ್​​​ಸಿ ಗೈಡ್​​ಲೆನ್ಸ್ ಪ್ರಕಾರ ತನಿಖೆ ನಡೆಸಲಾಗ್ತಿದೆ. RTPCR ರಿಪೋರ್ಟ್ ಬಾರದ ಹಿನ್ನೆಲೆ ಪ್ರೋಸೇಸ್ ಆಗಿರಲಿಲ್ಲ, ಈಗಾಗಲೆ ಸಂಪೂರ್ಣ ಘಟನೆಯ ವಿವರವನ್ನ ಕಾಂಗೋ ದೇಶಕ್ಕೆ ಕಳಿಸಿದ್ದೇವೆ ಅಂತಾ ಕಲಮ್ ಪಂಥ್ ಹೇಳಿದ್ರು. ಅಲ್ಲದೆ ಅವರು ಮಾಡಿದ ಲಾಕಪ್ ಡೆತ್ ಆರೋಪ ಸುಳ್ಳು, ಆತನಿಗೆ ಎದೆ ನೋವು ಕಾಣಿಸಿಕೊಂಡಿದ್ದಕ್ಕೆ ನಮ್ಮ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿದ್ರು ಅಂತಾ ಹೇಳಿದ್ರು. ಅಲ್ಲದೆ ಈಗಾಗಲೆ ನಗರದಲ್ಲಿರುವ ಎಲ್ಲಾ ವಿದೇಶಿ ಮನೆಗಳಿಗೆ ದಾಳಿ ಮಾಡಿದ್ದೇವೆ ಎಂದು ತಿಳಿಸಿದ್ರು.

Source: newsfirstlive.com Source link